ಸಿದ್ದಾಪುರ, ಮಾ. ೧೩: ಕೊಂಡೋಟಿ ಶಿಹಾಬ್ ತಂಙಳ್ ಚಾರಿಟೇಬಲ್ ಡಯಾಲಿಸಿಸ್ ರಿಸರ್ಚ್ ಹಾಗೂ ರಿಹಾಬಿಲಿಟೇಷನ್ ಸೆಂಟರ್ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಕಿಡ್ನಿ ರೋಗ ನಿರ್ಣಯ ಶಿಬಿರವನ್ನು ನೆಲ್ಲಿಹುದಿಕೇರಿಯ ಶಾದಿಮಹಲ್ ಸಭಾಂಗಣದಲ್ಲಿ ಗ್ರಾ.ಪಂ. ಅಧ್ಯಕ್ಷ ಸಾಬು ವರ್ಗೀಸ್ ಉದ್ಘಾಟಿಸಿ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಮನುಷ್ಯನಿಗೆ ಆರೋಗ್ಯ ಮುಖ್ಯವಾಗಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಶಿಹಾಬ್ ತಂಙಳ್ ಚಾರಿಟೇಬಲ್ ಸೆಂಟರ್ ಅನಾರೋಗ್ಯಕ್ಕೆ ಸಿಲುಕಿದವರ ಆರೋಗ್ಯ ಸುಧಾರಿಸಲು ಶ್ರಮಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಚಾರಿಟೇಬಲ್ ಸೆಂಟರ್ ಸಮಾಜಮುಖಿ ಕೆಲಸಗಳ ಬಗ್ಗೆ ಶ್ಲಾಘಿಸಿದರು. ಇದೇ ಸಂದರ್ಭದಲ್ಲಿ ಶಿಹಾಬ್ ತಂಙಳ್ ಚಾರಿಟೇಬಲ್ನ ಪದಾಧಿಕಾರಿಗಳು ಸಂಸ್ಥೆಯ ಸೇವೆಯ ಬಗ್ಗೆ ಮಾಹಿತಿ ನೀಡಿದರು. ಶಿಬಿರದಲ್ಲಿ ಹೆಚ್ಚಿನ ಮಂದಿ ಭಾಗವಹಿಸಿ ಆರೋಗ್ಯವನ್ನು ತಪಾಸಣೆ ಮಾಡಿಸಿಕೊಂಡರು.