ಪತಿಯಿಂದ ದೂರು
ವೀರಾಜಪೇಟೆ, ಮಾ. ೧೧: ಮೂಲತಃ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕು ಬೆಟ್ಟದಪುರದ ನಿವಾಸಿ, ಪ್ರಸ್ತುತ ವೀರಾಜಪೇಟೆ ನಗರದ ಸುಂಕದಕಟ್ಟೆಯಲ್ಲಿ ವಾಸವಿರುವ ವಿಶ್ವನಾಥ್ ಅವರ ಪತ್ನಿ ಹೆಚ್.ಎನ್. ನಿಶಾ ಮತ್ತು ಮೂರುವರೆ ವರ್ಷದ ಮಗಳು ಸ್ಪಂದನ ಕಾಣೆಯಾಗಿರುವ ಬಗ್ಗೆ ಪತಿ ವಿಶ್ವನಾಥ್ ದೂರು ನೀಡಿದ್ದಾರೆ.
ಕಾಣೆಯಾಗಿರುವ ಮಹಿಳೆಯ ಪ್ರಾಯ ೨೪ ವರ್ಷ, ಎತ್ತರ ೫ ಅಡಿ, ತಮಿಳು ಮತ್ತು ಕನ್ನಡ ಮಾತನಾಡುತ್ತಾರೆ. ಕಾಣೆಯಾದವರ ಬಗ್ಗೆ ಮಾಹಿತಿ ಲಭಿಸಿದಲ್ಲಿ ನಗರ ಪೊಲೀಸ್ ಠಾಣೆ ೦೮೨೭೪-೨೫೭೩೩೩, ಪೊಲೀಸ್ ವೃತ್ತ ನಿರೀಕ್ಷಕರು ವೀರಾಜಪೇಟೆ ವೃತ್ತ: ೦೮೨೭೪-೨೫೬೪೬೨ ಅವರುಗಳನ್ನು ಸಂಪರ್ಕಿಸಲು ಕೋರಿದೆ.