ಮಡಿಕೇರಿ, ಮಾ. ೧೧: ಕುಂಜಿಲಗೇರಿ ಗ್ರಾಮದ ಶ್ರೀ ಭದ್ರಕಾಳಿ ಹಾಗೂ ಶ್ರೀ ಅಯ್ಯಪ್ಪ ದೇವರ ವಾರ್ಷಿಕ ಹಬ್ಬ ತಾ. ೧೪ರ ಸೋಮವಾರ ನಡೆಯಲಿದೆ. ಬೆಳಗ್ಗಿನ ಜಾವ ಕುಡುವಂಡ ಕುಟುಂಬದಿAದ ಭಂಡಾರ, ಕುಯ್ಯ ಕುಳಿಯಕಂಡ, ಚೀಯಂಡಿರ, ಚರ್ಮಂಡ, ಚಟ್ಟಂಡ ಕುಟುಂಬಗಳಿAದ ಕುಯ್ಯ ಬಂದು ದೇವಿಯ ಬನದಲ್ಲಿ ಬಾಳೆಹಿಟ್ಟು ನೈವೇದ್ಯ ಒಪ್ಪಿಸಲಾಗುತ್ತದೆ.

ಮಧ್ಯಾಹ್ನ ೧ ಗಂಟೆಯೊಳಗೆ ತೆಂಗಿನಕಾಯಿ ಎತ್ತು ಪೋರಾಟ ಸಹಿತ ಊರಿನವರು, ಭಕ್ತರು ಉತ್ಸವದಲ್ಲಿ ಪಾಲ್ಗೊಂಡು ಭಂಡಾಶರ ಕಾಣಿಕೆ ಹರಕೆಗಳನ್ನು ಒಪ್ಪಿಸಿದ ನಂತರ ತೆಂಗಿನಕಾಯಿ ಸೇವೆ ನಡೆಯುತ್ತದೆ. ಇಲ್ಲಿನ ವಿಶೇಷತೆ ಎಂದರೆ ತೆಂಗಿನ ಎಣ್ಣೆಯಲ್ಲಿ ದೀಪ ಬೆಳಗಿಸುವ ಪರಂಪರೆ ಇದ್ದು, ಊದುಬತ್ತಿ, ಅಗರಬತ್ತಿ ಉರಿಸುವ ಸಂಪ್ರದಾಯವಿರುವುದಿಲ್ಲ ಎಂದು ಸ್ಥಳೀಯರಾದ ಕುಡುವಂಡ ಉತ್ತಪ್ಪ ಅವರು ತಿಳಿಸಿದ್ದಾರೆ.