ಮಡಿಕೇರಿ, ಮಾ. ೧೦: ತಾ. ೧೬ ಮತ್ತು ೧೭ ರಂದು ಕೊಯನಾಡು ಸುನ್ನಿ ಮುಸ್ಲಿಂ ಜುಮ್ಮಾ ಮಸೀದಿಯಲ್ಲಿ ಸ್ವಲಾತ್ ವಾರ್ಷಿಕ ಆಚರಣೆ ಹಾಗೂ ಧಾರ್ಮಿಕ ಮತ ಪ್ರವಚನ ನಡೆಯಲಿದೆ. ತಾ. ೧೬ ರಂದು ಯಸೀರ್ ಸಖಾಫಿ ತಾ. ೧೭ರಂದು ಅಬೂಬಕ್ಕರ್ ಸಿದ್ದೀಕ್ ಅಲ್ ಜಲಾಲಿ ಪ್ರಭಾಷಣ ಮಾಡಲಿದ್ದಾರೆ. ಹಾಗೂ ಸ್ವಲಾತ್ ವಾರ್ಷಿಕೋತ್ಸವದ ನೇತೃತ್ವವನ್ನು ಅಸ್ಸಯ್ಯಿದ್ ಸೀದಿ ಅಲ್ ಹೈದ್ರೋಸಿ ಅಲ್ ಅಹ್ಸನಿ (ಪ್ರಾಂಶುಪಾಲರು ತಾಜುಲ್ ಉಲಮಾ ಎಜುಕೇಶನಲ್ ಸೆಂಟರ್ ಪಾಲೆಮಾಡ್) ವಹಿಸಲಿದ್ದಾರೆ.