ವೀರಾಜಪೇಟೆ, ಮಾ. ೧೦: ಚೈತನ್ಯ ಮಠಪುರ ಶ್ರೀ ಮುತ್ತಪ್ಪ ದೇವಾಲಯದ ವಾರ್ಷಿಕ ತೆರೆ ಮಹೋತ್ಸವವು ತಾ. ೧೫ ರಿಂದ ಆರಂಭವಾಗಲಿದೆ.
ವೀರಾಜಪೇಟೆ ನಗರದ ಮೀನುಪೇಟೆ ಮಲಬಾರ್ ರಸ್ತೆಯಲ್ಲಿರುವ ಚೈತನ್ಯ ಶ್ರೀ ಮುತ್ತಪ್ಪ ದೇವಸ್ಥಾನದ ೭೮ ನೇ ವರ್ಷದ ವಾರ್ಷಿಕ ತೆರೆ ಮಹೋತ್ಸವ ತಾ. ೧೫ ರಿಂದ ಆರಂಭವಾಗಿ ತಾ. ೧೭ ರಂದು ಕೊನೆಯಾಗಲಿದೆ. ದೇವಾಲಯದಲ್ಲಿ ತಾ. ೧೫ ರಂದು ಮುತ್ತಪ್ಪ ವೆಳ್ಳಾಟಂ, ಕುಟ್ಟಿಚಾತನ್, ಗುಳಿಗ, ವಸೂರಿಮಾಲ, ಪೋದಿ, ವಿಷ್ಣುಮೂರ್ತಿ ವೆಳ್ಳಾಟಂ ಕೋಲಗಳು ನಡೆಯಲಿವೆ. ರಾತ್ರಿ ಸಾರ್ವಜನಿಕ ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಮಂಡೆಪAಡ ಸುಜಾ ಕುಶಾಲಪ್ಪ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ, ತಾ. ೧೭ ರಂದು ಶಾಸ್ತಪ್ಪನ್, ಮತ್ತು ಗುಳಿಗನ ಕೋಲ, ತಿರುವಪ್ಪನ್, ಭಗವತಿ ಪೋದಿ, ವಸೂರಿಮಾಲ, ವಿಷ್ಣುಮೂರ್ತಿ ಕೋಲದೊಂದಿಗೆ ವಾರ್ಷಿಕ ತೆರೆ ಮಹೋತ್ಸವ ಅಂತ್ಯವಾಗಲಿದೆ. ಮೂರು ದಿನಗಳ ಉತ್ಸವ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯಿAದ ಅನ್ನಸಂತರ್ಪಣೆ ನಡೆಯಲಿದೆ.