ಹಳಿ ಮೇಲೆ ನಿಂತಿದ್ದ ಪ್ರಯಾಣಿಕರ ಮೇಲೆ ಹರಿದ ಶತಾಬ್ದಿ ಎಕ್ಸ್ಪ್ರೆಸ್ ರೈಲು
ಕೋಲಾರ, ಮಾ. ೯: ಕೋಲಾರದಲ್ಲಿ ರೈಲಿಗೆ ಸಿಲುಕಿ ಓರ್ವ ಪ್ರಯಾಣಿಕ ಸಾವನ್ನಪ್ಪಿರುವ ಘಟನೆ ಬುಧವಾರ ನಡೆದಿದೆ. ಕೋಲಾರದ ರೈಲು ನಿಲ್ದಾಣದಲ್ಲಿ ಭಾರೀ ದುರಂತ ಸಂಭವಿಸಿದ್ದು, ಪ್ರಯಾಣಿಕರ ಮೇಲೆ ಎಕ್ಸ್ಪ್ರೆಸ್ ರೈಲು ಹರಿದ ಪರಿಣಾಮ ಓರ್ವ ಪ್ರಯಾಣಿಕ ಸಾವನ್ನಪ್ಪಿ ಇಬ್ಬರು ಗಾಯಗೊಂಡಿದ್ದಾರೆ. ಕೋಲಾರದ ಮಾಲೂರು ತಾಲೂಕಿನ ಟೇಕಲ್ ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಎರಡೂ ಬದಿ ಪ್ಯಾಸೆಂಜರ್ ರೈಲು ನಿಂತಿದ್ದು, ಮಾರಿಕುಪ್ಪಂ-ಎಸ್ಬಿಎಸ್ ಮತ್ತು ಕುಪ್ಪಂ ಮತ್ತು ಎಸ್ ಬಿಸಿ ರೈಲುಗಳು ಆಗಮಿಸಿತ್ತು. ವಿದ್ಯುತ್ ಕಡಿತದಿಂದಾಗಿ ರೈಲುಗಳು ಮಾರ್ಗ ಮಧ್ಯೆ ನಿಂತಿದ್ದವು. ಅದೇ ಸಂದರ್ಭದಲ್ಲಿ ಎಕ್ಸ್ಪ್ರೆಸ್ ರೈಲಿಗೆ ರೈಲ್ವೆ ಅಧಿಕಾರಿಗಳು ಸಿಗ್ನಲ್ ನೀಡಿದ್ದು, ರೈಲು ಇಳಿದು ಹಳಿ ಮೇಲೆ ಪ್ರಯಾಣಿಕರು ನಿಂತಿದ್ದರು. ಈ ವೇಳೆ ಬೆಂಗಳೂರು-ಚೆನ್ನೆöÊ ಶತಾಬ್ದಿ ಎಕ್ಸ್ಪ್ರೆಸ್ ರೈಲು ವೇಗವಾಗಿ ನುಗ್ಗಿ ಬಂದಿದೆ. ಪ್ರಯಾಣಿಕರು ಬಚಾವ್ ಆಗಲು ಯತ್ನಿಸುವ ವೇಳೆಗೆ ಡಿಕ್ಕಿ ಹೊಡೆದಿದೆ. ಲೋಕೋ ಪೈಲಟ್ ಸತತವಾಗಿ ಹಾರ್ನ್ ಮಾಡುತ್ತಿದ್ದರೂ ಕೂಡ ಜನ ಹಳಿ ಮೇಲೆ ನಿಂತಿದ್ದರು. ಹೀಗಾಗಿ ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ. ಟೇಕಲ್ ಹೊರಠಾಣೆ, ಬಂಗಾರಪೇಟೆ ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ತೆಪ್ಪ ಮುಳುಗಿ ಮೂವರು ಯುವಕರು ನೀರುಪಾಲು
ಕೋಲಾರ, ಮಾ. ೯: ಜಿಲ್ಲೆಯ ಬಂಗಾರಪೇಟೆ ತಾಲೂಕಿನ ನೇರಳೆಕೆರೆ ಗ್ರಾಮ ಕೆರೆಯಲ್ಲಿ ತೆಪ್ಪ ಮುಳುಗಿ ಮೂವರು ಯುವಕರು ಸಾವನ್ನಪ್ಪಿದ್ದಾರೆ. ಪಾರ್ಟಿ ಮಾಡಿದ್ದ ಯುವಕರ ತಂಡ ತೆಪ್ಪದಲ್ಲಿ ತಿರುಗಲು ಹೋಗಿದ್ದಾಗ ತೆಪ್ಪ ಮುಳುಗಿ ಅನಾಹುತ ಸಂಭವಿಸಿದೆ. ಶಿವರಾಜ್ ಎಂಬಾತ ಊಟ ತರಲು ತೆರಳಿದ್ದರಿಂದ ಆತ ಬದುಕುಳಿದಿದ್ದಾನೆ. ಮೃತರನ್ನು ನವೀನ್, ರಾಜೇಂದ್ರ, ಮೋಹನ್ ಎಂದು ಗುರುತಿಸಲಾಗಿದೆ. ಅಗ್ನಿಶಾಮಕ ಸಿಬ್ಬಂದಿ ಮೃತರ ಮೃತದೇಹಕ್ಕಾಗಿ ಹುಡುಕಾಟ ನಡೆಸಿದೆ.
ರಷ್ಯಾ ಸೇನೆಯಿಂದ ೨ ಪಟ್ಟಣಗಳಲ್ಲಿ ಸಾಮೂಹಿಕ ಹತ್ಯೆ
ಕೀವ್, ಮಾ. ೯: ಉಕ್ರೇನ್-ರಷ್ಯಾ ಸಂಘರ್ಷ ಮುಂದುವರೆದಿರುವAತೆಯೇ ರಷ್ಯಾ ವಿರುದ್ಧ ಮತ್ತೊಂದು ಗಂಭೀರ ಯುದ್ಧಾರೋಪ ಕೇಳಿಬಂದಿದ್ದು, ೨ ಪಟ್ಟಣಗಳಲ್ಲಿ ರಷ್ಯಾ ಸೇನೆ ನಾಗರಿಕರ ಸಾಮೂಹಿಕ ಹತ್ಯೆ ಮಾಡಿದೆ ಎಂದು ಉಕ್ರೇನ್ ಆರೋಪಿಸಿದೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಸಮರ ೧೪ನೇ ದಿನಕ್ಕೆ ಕಾಲಿಟ್ಟಿದ್ದು, ಎರಡು ರಾಷ್ಟçಗಳಲ್ಲೂ ಭೀಕರ ಪರಿಸ್ಥಿತಿ ಮುಂದುವರೆದಿದೆ. ಉಕ್ರೇನ್ನ ಸುಮಿ ನಗರದಲ್ಲಿ ಮಂಗಳವಾರ ರಾತ್ರಿ ೨೨ ಮಂದಿಯ ಮಾರಣ ಹೋಮ ನಡೆದಿದೆ. ಉಕ್ರೇನ್ನ ಸುಮಿ ನಗರದಲ್ಲಿ ಮೂರು ಮಕ್ಕಳು, ಒಂದೇ ಮನೆಯಲ್ಲಿ ಒಂಬತ್ತು ಜನರು ಸೇರಿದಂತೆ ೨೨ ಜನರು ರಷ್ಯಾದ ವೈಮಾನಿಕ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಮಂಗಳವಾರ ಆರು ಮನೆಗಳು ಸಂಪೂರ್ಣವಾಗಿ ನಾಶವಾಗಿವೆ ಮತ್ತು ಸುಮಾರು ೨೦ ಮನೆಗಳು ಭಾಗಶಃ ನಾಶವಾಗಿವೆ ಎಂದು ಸುಮಿ ಪ್ರಾದೇಶಿಕ ಗವರ್ನರ್ ಡಿಮಿಟ್ರೋ ಝೈವಿಟ್ಸಿ÷್ಕ ತಿಳಿಸಿದ್ದಾರೆ. ಅಂತೆಯೇ ಪೂರ್ವ ಉಕ್ರೇನಿಯನ್ ಪಟ್ಟಣವಾದ ಸೆವೆರೊಡೊನೆಟ್ಸ್÷್ಕನಲ್ಲಿ ರಷ್ಯಾದ ಮಿಲಿಟರಿ ದಾಳಿಯಲ್ಲಿ ಕನಿಷ್ಟ ೧೦ ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸಂಘರ್ಷ ಪೀಡಿತ ಸುಮಿ ಪಟ್ಟಣದಲ್ಲಿ ಕದನ ವಿರಾಮ ಘೋಷಣೆ ಮಾಡಿದಾಗಿನಿಂದ ಈವರೆಗೂ ಸುಮಾರು ೫,೦೦೦ ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಉಕ್ರೇನ್ನಲ್ಲಿ ಮೃತರಾದ ನವೀನ್ ಕುಟುಂಬಕ್ಕೆ ರೂ. ೫ ಲಕ್ಷ ನೆರವು
ನವದೆಹಲಿ, ಮಾ. ೯: ರಷ್ಯಾ-ಉಕ್ರೇನ್ ಯುದ್ಧದಲ್ಲಿ ಮಡಿದ ಕರ್ನಾಟಕದ ೨೧ ವರ್ಷದ ವೈದ್ಯಕೀಯ ವಿದ್ಯಾರ್ಥಿ ನವೀನ್ ಶೇಖರಪ್ಪ ಜ್ಞಾನಗೌಡರ ಕುಟುಂಬಕ್ಕೆ ೫ ಲಕ್ಷ ರೂಪಾಯಿ ದೇಣಿಗೆ ನೀಡಿರುವುದಾಗಿ ದೇಶದ ಪ್ರಮುಖ ಔಷಧ ತಯಾರಿಕಾ ಸಂಸ್ಥೆ ಮ್ಯಾನ್ಕೈಂಡ್ ಫಾರ್ಮಾ ಸಂಸ್ಥೆ ತಿಳಿಸಿದೆ. ಈ ಕುರಿತು ಸಂಸ್ಥೆ ಹೇಳಿಕೆ ಬಿಡುಗಡೆ ಮಾಡಿದ್ದು, ಮೃತ ನವೀನ್ ಕುಟುಂಬಕ್ಕೆ ನಮ್ಮ ಸಂಸ್ಥೆ ರೂ. ೫ ಲಕ್ಷ ನೆರವು ನೀಡಲಿದೆ. ಶಿಕ್ಷಣ ಮತ್ತು ಇತರ ಬದ್ಧತೆಗಳಿಗಾಗಿ ಕುಟುಂಬವು ರೂ. ೨೫ ಲಕ್ಷ ಸಾಲವನ್ನು ಮರುಪಾವತಿಸಬೇಕಾಗಿದೆ. ನವೀನ್ ಅವರ ಸಹೋದರ ಕೂಡ ಬೆಂಗಳೂರಿನಿAದ ಶಿಕ್ಷಣವನ್ನು ಪೂರ್ಣಗೊಳಿಸುವುದರಿಂದ ಕುಟುಂಬವು ದೊಡ್ಡ ಆರ್ಥಿಕ ಹೊಣೆಗಾರಿಕೆಯಿಂದ ಬಳಲುತ್ತಿದೆ ಎಂದು ಕಂಪೆನಿ ಹೇಳಿಕೆಯಲ್ಲಿ ತಿಳಿಸಿದೆ. ಘಟನೆಗಳ ದುರದೃಷ್ಟಕರ ಸ್ಥಿತಿಯನ್ನು ಪರಿಗಣಿಸಿ, ಸಂತ್ರಸ್ತ ಕುಟುಂಬಕ್ಕೆ ಬೆಂಬಲವಾಗಿ ನಿಲ್ಲಲು ನಾವು ಸಾಧ್ಯವಿರುವ ಎಲ್ಲ ರೀತಿಯಲ್ಲಿ ಪ್ರಯತ್ನಿಸುತ್ತಿದ್ದೇವೆ. ಸತ್ತವರು ಸೃಷ್ಟಿಸಿದ ಶೂನ್ಯವನ್ನು ಯಾವುದೇ ಹಣಕಾಸಿನ ನೆರವು ಸರಿದೂಗಿಸಲು ಸಾಧ್ಯವಿಲ್ಲ ಎಂದು ನಮಗೆ ತಿಳಿದಿದೆ. ಆದರೆ ಇದು ಅವರ ಬೆಂಬಲಕ್ಕೆ ನಿಲ್ಲುವ ನಮ್ಮ ಸಂಕಲ್ಪವನ್ನು ತೋರಿಸುತ್ತದೆ. ತಮ್ಮ ಆತ್ಮೀಯರನ್ನು ಕಳೆದುಕೊಂಡ ಕುಟುಂಬಗಳಿಗೆ ಒಗ್ಗಟ್ಟಿನಿಂದ ನಾವು ಅವರ ಬೆಂಬಲಕ್ಕೆ ನಿಲ್ಲಬೇಕು ಎಂದು ಮ್ಯಾನ್ಕೈಂಡ್ ಫಾರ್ಮಾದ ಮಾರಾಟ ಮತ್ತು ಮಾರುಕಟ್ಟೆಯ ಹಿರಿಯ ಅಧ್ಯಕ್ಷ ಸಂಜಯ್ ಕೌಲ್ ಹೇಳಿದ್ದಾರೆ.