ಶನಿವಾರಸಂತೆ, ಮಾ. ೧೦: ಸಮೀಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಕೋಣಿಗನ ಹಳ್ಳಿ ಗ್ರಾಮದ ಶ್ರೀ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ತಾ. ೧೧ ರಂದು ಬೆಳಿಗ್ಗೆ ೫ ರಿಂದ ಸಂಜೆ ೬ ರವರೆಗೆ ೪೮ನೇ ವರ್ಷದ ಪೂಜಾ ಮಹೋತ್ಸವ ನಡೆಯಲಿದೆ.
ಗಂಗಾಪೂಜೆ, ಗಂಗಾಭಿಷೇಕ, ಕ್ಷೀಡಾಭಿಷೇಕ, ಕುಂಕುಮಾಭಿಷೇಕ, ಅರ್ಚನೆ ನೆರವೇರಲಿದೆ. ನಂತರ ಗ್ರಾಮದ ಮುಖ್ಯಬೀದಿಯಲ್ಲಿ ಕೀಲುಕುದುರೆ, ವೀರಗಾಸೆ ಕುಣಿತ, ನಗಾರಿ ವಾದ್ಯ ಕಳಶದೊಂದಿಗೆ ದೇವಿಯ ಉತ್ಸವ ಮೂರ್ತಿಯನ್ನು ಮೆರವಣಿಗೆ ಮಾಡಲಾಗುತ್ತದೆ. ಮಧ್ಯಾಹ್ನ ದೇವಿಯ ಸಾನಿಧ್ಯದಲ್ಲಿ ಮಡ್ಲಕ್ಕಿ ಅರ್ಪಣಾ, ಹಣ್ಣುಕಾಯಿ ಪೂಜಾ ಕಾರ್ಯಕ್ರಮ, ಅನ್ನಸಂತರ್ಪಣೆ ನಡೆಯುತ್ತದೆ. ಸಂಜೆ ಕೆಂಡೋತ್ಸವ, ಮಹಾಮಂಗಳಾರತಿ, ದೀಪೋತ್ಸವ, ಪ್ರಸಾದ ವಿನಿಯೋಗವಿರುತ್ತದೆ.