ನಾಪೋಕ್ಲು, ಮಾ. ೧೦: ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿರುವ ನಾಪೋಕ್ಲು ಗ್ರಾಮದ ಶ್ರೀ ಭಗವತಿ ಮತ್ತು ಭದ್ರಕಾಳಿ ದೇವರ ಹಬ್ಬವು ತಾ. ೧೭ ರಿಂದ ೨೧ ರವರೆಗೆ ನಡೆಯಲಿದೆ. ತಾ. ೧೭ ರಂದು ಭಂಡಾರ ತರುವುದು, ಅಂದಿಬೊಳಕು, ಬೊಳಕಾಟ್, ನಂತರ ಶ್ರೀ ಭದ್ರಕಾಳಿ ದೇವರ ಮೂಡಿಕೋಲ ನಡೆಯಲಿದೆ. ತಾ. ೧೮ ರಂದು ದೇವರ ಊರ ಪ್ರದಕ್ಷಿಣೆ, ತಾ. ೧೯ ರಂದು ಪವಿತ್ರ ಪಟ್ಟಣಿ ಹಬ್ಬ , ಎತ್ತು ಪೋರಾಟ, ಮಧ್ಯಾಹ್ನ ಅನ್ನದಾನ ನಡೆಯಲಿದೆ. ತಾ. ೨೦ ರಂದು ದೇವರ ಪವಿತ್ರ ಜಳಕ ಕೊಟ್ಟಮುಡಿಯ ಕಾವೇರಿ ನದಿಯಲ್ಲಿ ನಡೆದು ಮೆರವಣಿಗೆ ಮೂಲಕ ದೇವಾಲಯಕ್ಕೆ ಬರುವುದು. ಅಂದು ರಾತ್ರಿ ವಿವಿಧ ದೇವರುಗಳ ಕೋಲ ನಡೆದು ತಾ. ೨೧ ರಂದು ೧೦ ಗಂಟೆಗೆ ಕಲಿಯಾಟ ಅಜ್ಜಪ್ಪ ದೇವರ ಕೋಲ ನಂತರ ವಿಷ್ಣು ಮೂರ್ತಿ ದೇವರ ಕೋಲದೊಂದಿಗೆ ಅನ್ನದಾನ ನಡೆಯುತ್ತದೆ.