ಮಡಿಕೇರಿ, ಮಾ. ೯: ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾಗಿರುವ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದಲ್ಲಿ ಪ್ರತಿ ಮೂರು ವರ್ಷಗಳಿಗೊಮ್ಮೆ £ಡೆಯುವ ದೈವಕೋಲ ಉತ್ಸವವು ತಾ. ೨೪ ಮತ್ತು ೨೫ ರಂದು ನಡೆಯಲಿದೆ.

ತಾ. ೨೪ ರಂದು ರಾತ್ರಿ ೭ ಗಂಟೆಯಿAದ ತಾ. ೨೫ರ ಅಪರಾಹ್ನದವರೆಗೆ ರಕ್ತೇಶ್ವರಿ, ವಿಷ್ಣುಮೂರ್ತಿ, ಕುಟ್ಟಿಚಾತ, ಕರಿಂಗಾಳಿ, ಗುಳಿಗ, ನುಚ್ಚುಟ, ಭೈರವನ್, ಪಾಷಾಣ ಮೂರ್ತಿ ಮತ್ತು ಅಪ್ಪಚ್ಚಿರ ಮಂದಣ್ಣ ಅಜ್ಜಪ್ಪ ತೆರೆಗಳ ದೈವಕೋಲ ಉತ್ಸವ ಜರುಗಲಿದೆ.