ಪಾಲಿಬೆಟ್ಟ, ಮಾ. ೯: ಇತಿಹಾಸ ಪ್ರಸಿದ್ಧ ಅಸ್ಸಯ್ಯಿದ್ ಅಬ್ದುಲ್ಲಾಹಿ ಸಖಾಫ್ ಅಲ್ ಹಳ್ರಮಿ ಅವರ ಹೆಸರಿನಲ್ಲಿ ಪ್ರತಿ ವರ್ಷ ನಡೆಯುವ ಮಖಾಂ ಉರೂಸ್ ಸಮಾರಂಭ ನೆರವೇರಿತು. ಧಾರ್ಮಿಕ ಪಂಡಿತ ಮೌಲಾನಾ ಪೇರೋಡ್ ಅಬ್ದುಲ್ ರಹಮಾನ್ ಸಖಾಫಿ ಮುಖ್ಯ ಪ್ರಭಾಷಣಕಾರರಾಗಿ ಆಗಮಿಸಿ ಮಾತನಾಡಿ ಗ್ರಾಮಗಳಲ್ಲಿ ನಡೆಯುವ ಇಂತಹ ಧಾರ್ಮಿಕ ಕಾರ್ಯಕ್ರಮಗಳಿಂದಲೇ ಶಾಂತಿ, ಸೌಹಾರ್ದತೆ, ಸಹಬಾಳ್ವೆ ನೆಲೆಸಲಿದ್ದು ಪ್ರತಿಯೊಬ್ಬರು ಧಾರ್ಮಿಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕು ಎಂದು ಹೇಳಿದರು. ಈ ಸಂದರ್ಭ ಕೆ.ಎಸ್. ಆಟಕೋಯ ತಂಙಳ್, ಸಯ್ಯದ್ ಹಕೀಂ ತಂಙಳ್, ನಾಯಿಬ್ ಖಾಝಿ ಸಾದುಲಿ ಪೈಝಿ, ಕೊಂಡAಗೇರಿ ಸುನ್ನಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಕೆ. ಯೂಸುಫ್ ಹಾಜಿ, ಪ್ರಧಾನ ಕಾರ್ಯದರ್ಶಿ ಸಾದುಲಿ, ಆಲಗುಂದ ಗ್ರಾಮ ಪಂಚಾಯಿತಿ ಸದಸ್ಯರಾದ ಅಬ್ದುಲ್ ರಹಿಮಾನ್, ಹನೀಫ್, ಪ್ರಮುಖರಾದ ಹನೀಫ್ ಸಖಾಫಿ, ಯಸೀರ್ ಸಖಾಫಿ, ಅಬ್ದುಲ್ ಮಜೀದ್ ಮದನಿ, ಡಾ. ಕುಂಞ ಅಬ್ದುಲ್ಲಾ ಹಾಜಿ, ಎ. ಮೂಸಾ ಮುಸ್ಲಿಯಾರ್, ಪಿ.ವೈ. ಅಬೂಬಕ್ಕರ್ ಸೇರಿದಂತೆ ಮತ್ತಿತರರು ಹಾಜರಿದ್ದರು. ಉರುಸ್ ಏಳನೇ ದಿನದ ಅಂಗವಾಗಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಮಾಡಲಾಯಿತು. ತಾ. ೧೧ ರಂದು ಸಮಾರೋಪ ಸಮಾರಂಭ ನಡೆಯಲಿದೆ.