ಮಡಿಕೇರಿ, ಮಾ. ೯: ಕೃಷಿಕ ಸಮುದಾಯದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಮತ್ತು ಮಾರ್ಗದರ್ಶನ ನೀಡುವ ಉದ್ದೇಶದಿಂದ ೧೯೯೨ರಲ್ಲಿ ಬೆಂಗಳೂರಿನಲ್ಲಿ ನಿವೃತ್ತ ಐ.ಎ.ಎಸ್ ಅಧಿಕಾರಿಗಳು ಪ್ರಾರಂಭ ಮಾಡಿದ ಕೃಷಿಕ್ ಸರ್ವೋದಯ ಫೌಂಡೇಶನ್ ಕೊಡಗು ಶಾಖೆಯ ಸಮಿತಿಯನ್ನು ಪುನರ್ ರಚಿಸಲಾಗಿದೆ. ಫೌಂಡೇಶನ್‌ನ ಅಧ್ಯಕ್ಷರಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಎನ್.ಆರ್. ನಿಂಗರಾಜು, ಉಪಾಧ್ಯಕ್ಷರಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಡಿಕೇರಿಯ ಸಹಪ್ರಾಧ್ಯಾಪಕÀ

ಡಾ. ದಯಾನಂದ ಕೆ.ಸಿ., ಕಾರ್ಯದರ್ಶಿಯಾಗಿ ಶಿಕ್ಷಕ ಕೆ.ಯು. ರಂಜಿತ್, ಖಜಾಂಜಿಯಾಗಿ ಅಂಬೆಕಲ್ಲು ನವೀನ್ ಕುಶಾಲಪ್ಪ, ನಿರ್ದೇಶಕರಾಗಿ ಕೆ.ಎಸ್.ಎಫ್.ಸಿ.ಯ ನಿವೃತ್ತ ಕಾರ್ಯನಿರ್ವಾಹಕ ನಿರ್ದೇಶಕ ಡಿ. ಎಸ್.ಆನಂದ, ಬಿ.ಬಿ.ಎಂ.ಪಿ.ಯ ನಿವೃತ್ತ ಜಂಟೀ ಆಯುಕ್ತ ಪಿ.ಆರ್. ಪಳಂಗಪ್ಪ, ನಿವೃತ್ತ ಕಾರ್ಮಿಕ ಅಧಿಕಾರಿ ಎನ್.ಬಿ. ರಾಮಚಂದ್ರ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಮಡಿಕೇರಿಯ ಸಹಪ್ರಾಧ್ಯಾಪಕ ಡಾ. ಕೋರನ ಸರಸ್ವತಿ, ಶ್ರೀಕಾವೇರಿ ಪದವಿ ಪೂರ್ವ ಕಾಲೇಜು, ಭಾಗಮಂಡಲದ ಪ್ರಾಂಶುಪಾಲ ಕೆ.ಜೆ. ದಿವಾಕರ, ಸರಸ್ವತಿ ಡಿ.ಇಡ್. ಕಾಲೇಜಿನ ಮಾಲೀಕÀ ಸಂದೀಪ್ ಮತ್ತು ಕುಶಾಲನಗರದ ಉದ್ಯಮಿ ಆನಂದ ಕರಂದ್ಲಾಜೆಯವರನ್ನು ನೇಮಿಸಲಾಗಿದೆ. ವಿಶೇಷ ಆಹ್ವಾನಿತರಾಗಿ ನಿವೃತ್ತ ಡಿವೈಎಸ್‌ಪಿ ಯಾಲದಾಳು ಕೇಶವಾನಂದ, ಎನ್‌ಜಿಇಎಫ್‌ನ ನಿವೃತ್ತ ಪ್ರಾದೇಶಿಕ ನಿರ್ದೇಶಕ ಕುಯ್ಯಮುಡಿ ವಸಂತ ಹಾಗೂ ಮದೆ ಮಹೇಶ್ವರ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ತೆಕ್ಕಡೆ ಗುಲಾಬಿ ಜನಾರ್ದನ ಅವರನ್ನು ನೇಮಿಸಲಾಗಿದೆ.