ಮಡಿಕೇರಿ, ಮಾ.೯: ಗ್ರಾಮೀಣ ಪ್ರದೇಶದಲ್ಲಿ ರೈತರು ಸರ್ಕಾರಿ ಜಮೀನಿನಲ್ಲಿ ಕೃಷಿ ಮಾಡಿಕೊಂಡಿರುವುದನ್ನು ಕರ್ನಾಟಕ ಭೂ ಸುಧಾರಣಾ ಕಾಯ್ದೆ ೧೯೨(ಎ) ವ್ಯಾಪ್ತಿಯಿಂದ ಹೊರಗಿಡುವ ಬಗ್ಗೆ ಶಾಸಕರಾದ ಕೆ.ಜಿ.ಬೋಪಯ್ಯ ಅವರು ಕಂದಾಯ ಸಚಿವರಿಂದ ಮಾಹಿತಿ ಪಡೆದಿದ್ದಾರೆ.
ಆ ದಿಸೆಯಲ್ಲಿ ಕಂದಾಯ ಸಚಿವರಾದ ಆರ್.ಅಶೋಕ್ ಅವರು ಮಾಹಿತಿ ನೀಡಿದ್ದಾರೆ. ಮಾಹಿತಿ ವಿವರ ಇಂತಿದೆ: ಭೂಕಬಳಿಕೆ ಎಂದು ಆಪಾದಿಸಲಾದ ಯಾವುದೇ ಕೃತ್ಯದ ಶೀಘ್ರ ವಿಚಾರಣೆಗೆ ಮತ್ತು ಕಬಳಿಸಲಾದ ಭೂಮಿಯ ಒಡೆತನ ಮತ್ತು ಕಬಳಿಸಲಾದ ಹಕ್ಕು ಸ್ವಾಮ್ಯಕ್ಕೆ ಅಥವಾ ಕಾನೂನು ಸಮ್ಮತ ಸ್ವಾಧೀನತೆಗೆ ಸಂಬAಧಪಟ್ಟ ಮೊಕದ್ದಮೆಗಳ ಮತ್ತು ಕರ್ನಾಟಕ ಭೂ ಕಂದಾಯ ಅಧಿನಿಯಮ, ೧೯೬೪ ರ xiv-ಎ(೧೪-ಎ) ಅಧ್ಯಾಯದಲ್ಲಿ ನಿರ್ದಿಷ್ಟಪಡಿಸಲಾದಂತಹ ಅಪರಾಧಗಳ ವಿಚಾರಣೆಗಾಗಿ ರಾಜ್ಯದಲ್ಲಿ ಒಂದು ವಿಶೇಷ ನ್ಯಾಯಾಲಯವನ್ನು ಸ್ಥಾಪಿಸುವುದಕ್ಕಾಗಿ ಕರ್ನಾಟಕ ಲ್ಯಾಂಡ್ ಗ್ರಾಬ್ಬಿಂಗ್ ಪ್ರೊಹಿಬಿಷನ್ ಆಕ್ಟ್ ಅನ್ನು ಜಾರಿಗೆ ತರಲಾಗಿದೆ.
ಕರ್ನಾಟಕ ಭೂಕಬಳಿಕೆ ನಿಷೇಧ ಅಧಿನಿಯಮ ೨೦೧೧ ನ್ನು ಸರ್ಕಾರಕ್ಕೆ ವಕ್ಫ್ ಅಥವಾ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳಿಗೆ, ಸ್ಥಳೀಯ ಸಂಸ್ಥೆಗಳಿಗೆ ಅಥವಾ ಸರ್ಕಾರದ ಒಡೆತನದಲ್ಲಿರುವ ಅಥವಾ ನಿಯಂತ್ರಣದಲ್ಲಿರುವ ಅಥವಾ ವ್ಯವಸ್ಥಾಪನೆಯಲ್ಲಿರುವ ಶಾಸನಬದ್ದ ಅಥವಾ ಶಾಸನಬದ್ದವಲ್ಲದ ಸಂಸ್ಥೆಗಳಿಗೆ ಸೇರಿದ ಭೂಮಿಗಳನ್ನು ಕಬಳಿಸಲು ಮಾಡಲಾಗುವ ಸಂಘಟಿತ ಪ್ರಯತ್ನಗಳನ್ನು ತಡೆಗಟ್ಟುವುದಕ್ಕಾಗಿ ಜಾರಿಗೆ ತರಲಾಗಿದೆ.
ಕರ್ನಾಟಕ ಭೂ ಕಬಳಿಕೆ ನಿಷೇಧ ಅಧಿನಿಯಮ ೨೦೧೧ ರ ಕಲಂ ೨(ಇ)ರ ಪರಿಭಾಷೆಯಲ್ಲಿ ಭೂ ಕಬಳಿಕೆದಾರ ಎಂದರೆ ಭೂ ಕಬಳಿಕೆಯನ್ನು ಮಾಡುವ ಅಥವಾ ಮಾಡಿರುವ ಒಬ್ಬ ವ್ಯಕ್ತಿ ಅಥವಾ ವ್ಯಕ್ತಿಗಳ ಒಂದು ಗುಂಪು ಅಥವಾ ಒಂದು ಸಂಘ ಮತ್ತು ಇದರಲ್ಲಿ ಭೂಮಿಗಳನ್ನು ಕಾನೂನುಬಾಹಿರ ಸ್ವಾಧೀನ ತೆಗೆದುಕೊಳ್ಳುವುದಕ್ಕಾಗಿ ಅಥವಾ ಅದರ ಮೇಲೆ ಅಕ್ರಮ ಕಟ್ಟಡಗಳನ್ನು ಕಟ್ಟುವುದಕ್ಕಾಗಿ ಯಾವೊಬ್ಬ ವ್ಯಕ್ತಿಗೆ ಆರ್ಥಿಕ ನೆರವು ನೀಡುವ ಯಾವೊಬ್ಬ ವ್ಯಕ್ತಿ ಅಥವಾ ಅಂಧ ಭೂಮಿಗಳ ಯಾವುದೇ ಅಧಿಭೋಗದಾರರಿಂದ ಅಪರಾಧಿಕ ಭಯೋತ್ಪಾದನೆಯ ಮೂಲಕ ಬಾಡಿಗೆ, ಪರಿಹಾರ ಮತ್ತಿತರ ಶುಲ್ಕವನ್ನು ವಸೂಲು ಮಾಡುವ
(ಮೊದಲ ಪುಟದಿಂದ) ಅಥವಾ ವಸೂಲು ಮಾಡಲು ಪ್ರಯತ್ನಿಸುವ/ ಯಾವುದಾದರೂ ಕೃತ್ಯ ಮಾಡುವುದನ್ನು ದುಷ್ಪೆçÃರಿಸುವ ಯಾವೊಬ್ಬ ವ್ಯಕ್ತಿಯು ಒಳಗೊಳ್ಳುತ್ತಾನೆ ಮತ್ತು ಅವನ ಹಿತಾಸಕ್ತಿಯ ಉತ್ತರಾಧಿಕಾರಿಗಳು ಒಳಗೊಳ್ಳುತ್ತಾರೆ.
ಕರ್ನಾಟಕ ಭೂ ಕಬಳಿಕೆ ನಿಷೇಧ ಅಧಿನಿಯಮ ೨೦೧೧ ರ ಕಲಂ ೨(ಎಫ್)ರ ಪರಿಭಾಷೆಯಲ್ಲಿ ಭೂ ಕಬಳಿಕೆ ಎಂದರೆ ಯಾವುದೇ ಕಾನೂನು ಬದ್ಧ ಹಕ್ಕುದಾರಿಕೆಯಿಲ್ಲದ ಮತ್ತು ಅಂತಹ ಭೂಮಿಯನ್ನು ಕಾನೂನುಬಾಹಿರವಾಗಿ ಸ್ವಾಧೀನಕ್ಕೆ ತೆಗೆದುಕೊಳ್ಳುವ ದೃಷ್ಟಿಯಿಂದ ಯಾವುದೇ ಭೂಮಿಯನ್ನು ಕಬಳಿಸುವ ಅಥವಾ ಕಾನೂನು ಬಾಹಿರ ಗೇಣಿಗಳು ಅಥವಾ ಗುತ್ತಿಗೆ ಮತ್ತು ಲೈಸೆನ್ಸ್ ಒಪ್ಪಂದಗಳನ್ನು ಮಾಡಿಕೊಳ್ಳುವ ಅಥವಾ ಅವುಗಳನ್ನು ಸೃಷ್ಟಿ ಮಾಡುವ ಅಥವಾ ಮಾರಾಟ ಅಥವಾ ಬಾಡಿಗೆಗೆ ಕೊಡಲು ಭೂಮಿಯ ಮೇಲೆ ಅಕ್ರಮ ನಿರ್ಮಿತಿಗಳನ್ನು ಕಟ್ಟುವ ಅಥವಾ ಅಕ್ರಮ ಕಟ್ಟಡಗಳನ್ನು ಕಟ್ಟುವುದಕ್ಕಾಗಿ ಅಥವಾ ಬಳಸುವುದಕ್ಕಾಗಿ ಬಾಡಿಗೆ ಮೇಲೆ ಅಥವಾ ಗುತ್ತಿಗೆ ಮೇಲೆ ಮತ್ತು ಲೈಸೆನ್ಸ್ ಆಧಾರದ ಮೇಲೆ ಅಂತಹ ಭೂಮಿಗಳನ್ನು ಯಾವೊಬ್ಬ ವ್ಯಕ್ತಿಗೆ ಕೊಡುವ ಪ್ರತಿಯೊಂದು ಚಟುವಟಿಕೆ ಭೂಮಿಯನ್ನು ಕಬಳಿಸುವುದಕ್ಕೆ ಎಂಬುದನ್ನು ಇದಕ್ಕೆ ಅನುಸಾರವಾಗಿ ಅರ್ಥೈಸತಕ್ಕದ್ದು ಎಂದು ಇರುತ್ತದೆ.
ಕರ್ನಾಟಕ ಭೂ ಕಬಳಿಕೆ ನಿಷೇಧ ಅಧಿನಿಯಮ ೨೦೧೧ ರ ಕಲಂ ೨ ಪರಿಭಾಷೆಗಳು ಶೀರ್ಷಿಕೆಯಡಿ ಉಪ ಕಲಂ(ಡಿ) ‘ಭೂಮಿ ಎಂದರೆ’, ಸರ್ಕಾರಕ್ಕೆ ವಕ್ಫ್ ಅಥವಾ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳಿಗೆ, ಒಂದು ಸ್ಥಳೀಯ ಪ್ರಾಧಿಕಾರಕ್ಕೆ ಸರ್ಕಾರದ ಒಡೆತನದಲ್ಲಿರುವ, ನಿಯಂತ್ರಣದಲ್ಲಿರುವ ಅಥವಾ ವ್ಯವಸ್ಥಾಪನೆಯಲ್ಲಿರುವ ಒಂದು ಶಾಸನಬದ್ಧ ಅಥವಾ ಶಾಸನಬದ್ದವಲ್ಲದ ಸಂಸ್ಥೆಗೆ ಸೇರಿದ ಭೂಮಿಯನ್ನು, ಭೂಮಿಯಲ್ಲಿ ಅಥವಾ ಅದರ ಮೇಲೆ ಇರುವ ಹಕ್ಕುಗಳು, ಭೂಮಿಯಿಂದ ಪ್ರಾಪ್ತವಾಗುವ ಪ್ರಯೋಜನಗಳು ಮತ್ತು ಭೂಮಿಗೆ ಲಗತ್ತಾಗಿರುವ ಅಥವಾ ಭೂಮಿಗೆ ಲಗತ್ತಾಗಿರುವ ಯಾವುದೇ ವಸ್ತುವಿಗೆ ಖಾಯಂ ಜೋಡಿಸಲಾದ ಕಟ್ಟಡಗಳು, ನಿರ್ಮಿತಿಗಳು ಮತ್ತು ಇತರ ವಸ್ತುಗಳನ್ನು ಒಳಗೊಳ್ಳುತ್ತದೆ.
ಕರ್ನಾಟಕ ಭೂ ಕಂದಾಯ ಅಧಿನಿಯಮ, ೧೯೬೪ರ (೧೯೬೪ರ ಕರ್ನಾಟಕ ಅಧಿನಿಯಮ ೧೨) ಕಲಂ ೯೪ಎ, ೯೪ಬಿ, ೯೪ಸಿ ಮತ್ತು ೯೪ ಸಿಸಿ ಪ್ರಕರಣಗಳ ಅಡಿಯಲ್ಲಿನ,
ಅನುಸೂಚಿತ ಬುಡಕಟ್ಟುಗಳು ಮತ್ತು ಇತರ ಸಾಂಪ್ರದಾಯಿಕ ಅರಣ್ಯ ನಿವಾಸಿಗಳ (ಅರಣ್ಯ ಹಕ್ಕುಗಳ ಗುರುತಿಸುವಿಕೆ) ಅಧಿನಿಯಮ, ೨೦೦೬ರ (೨೦೦೭ರ ಕೇಂದ್ರ ಅಧಿನಿಯಮ ೨) ಅಡಿಯಲ್ಲಿನ ಮತ್ತು ಮಂಜೂರಾತಿಗಾಗಿ ಬಾಕಿಯಿರುವ ಅರ್ಜಿಗಳಲ್ಲಿನ ಭೂಮಿಗಳನ್ನು ಒಳಗೊಳ್ಳತಕ್ಕದ್ದಲ್ಲ ಎಂದು ಇರುತ್ತದೆ. ಕರ್ನಾಟಕ ಭೂ ಕಬಳಿಕೆ ನಿಷೇಧ ಅಧಿನಿಯಮ ೨೦೧೧ ರನ್ನು ನಗರಕ್ಕೆ ಮಾತ್ರ ಸೀಮಿತಗೊಳಿಸಿ ಗ್ರಾಮೀಣ ಪ್ರದೇಶದ ಭೂ ಹಿಡುವಳಿದಾರರಿಗೆ ಈ ಕಾಯ್ದೆಯಿಂದ ವಿನಾಯಿತಿ ನೀಡುವ ಪ್ರಸ್ತಾವನೆಯು ಸರ್ಕಾರದ ಹಂತದಲ್ಲಿ ಪರಿಶೀಲನೆಯಲ್ಲಿದೆ ಎಂದು ಕಂದಾಯ ಸಚಿವರಾದ ಆರ್.ಅಶೋಕ ಅವರು ತಿಳಿಸಿದ್ದಾರೆ.