ಗೋಣಿಕೊಪ್ಪ ವರದಿ, ಮಾ. ೮: ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ರೊಜರಿಯನ್ ಫುಟ್ಬಾಲ್ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ ಗೋಣಿಕೊಪ್ಪ ಸೂಪರ್ ಲೀಗ್ ಫುಟ್ಬಾಲ್ ಟೂರ್ನಿಯಲ್ಲಿ ಹೈದರಾಬಾದ್ ಫುಟ್ಬಾಲ್ ತಂಡ ಪ್ರಥಮ, ನಾರ್ತ್ ಈಸ್ಟ್ ತಂಡ ದ್ವಿತೀಯ ತಂಡವಾಗಿ ಹೊರಹೊಮ್ಮಿತು.
ಫೈನಲ್ ಹಣಾಹಣಿಯಲ್ಲಿ ರೋಚಕ ಆಟ ಪ್ರದರ್ಶನಗೊಂಡಿತು. ಹೈದರಾಬಾದ್ ಫುಟ್ಬಾಲ್ ತಂಡ ೩-೨ ಗೋಲುಗಳಿಂದ ಟೈಬ್ರೇಕರ್‌ನಲ್ಲಿ ರೋಚಕ ಗೆಲುವು ದಾಖಲಿಸಿ ಕಪ್‌ಗೆ ಮುತ್ತಿಕ್ಕಿತು. ನಿಗದಿತ ಸಮಯದಲ್ಲಿ ಉಭಯ ತಂಡಗಳು ೧-೧ ಗೋಲುಗಳಿಂದ ಟೈ ಫಲಿತಾಂಶ ನೀಡಿತು. ಹೈದರಾಬಾದ್ ತಂಡದ ವಿಜಯ್, ನಾರ್ತ್ ಈಸ್ಟ್ ತಂಡದ ಆಶಿಕ್ ತಲಾ ಒಂದೊAದು ಗೋಲು ಹೊಡೆದರು. ಸೆಮಿಫೈನಲ್‌ನಲ್ಲಿ ಹೈದರಾಬಾದ್ ತಂಡವು ಕೇರಳ ಬ್ಲಾಸ್ಟರ್ಸ್ ವಿರುದ್ಧ ೧-೦ ಗೋಲುಗಳಿಂದ ಜಯಿಸಿತು. ನಾರ್ತ್ ಈಸ್ಟ್ ತಂಡವು ಜಮ್ಷೆಡ್‌ಪುರ ವಿರುದ್ಧ ೧-೦ ಗೋಲುಗಳಿಂದ ಜಯ ದಾಖಲಿಸಿ ಫೈನಲ್‌ಗೆ ಪ್ರವೇಶ ಪಡೆಯಿತು.
ದೇಶದಲ್ಲಿ ನಡೆಯುವ ಐಎಸ್‌ಎಲ್ ಮಾದರಿಯಲ್ಲಿ ಟೂರ್ನಿ ನಡೆಯಿತು. ಐಎಸ್‌ಎಲ್ ಟೂರ್ನಿಯಲ್ಲಿ ಭಾಗವಹಿಸುವ ತಂಡಗಳ ಹೆಸರಿನಲ್ಲಿ ತಂಡಗಳು ಸ್ಪರ್ಧೆ ನಡೆಸಿದವು. ೧೧ ತಂಡಗಳು ಭಾಗವಹಿಸಿದ್ದವು. ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಈಸ್ಟ್ ಬೆಂಗಾಳ್ ತಂಡದ ಶಮ್ಮು ಪಡೆದುಕೊಂಡರು. ನಗದು, ಪಾರಿತೋಷಕ ನೀಡಲಾಯಿತು. ಬಹುಮಾನ ವಿತರಣೆ ಸಂದರ್ಭ ಸಾಧಕರನ್ನು ಸನ್ಮಾನಿಸಲಾಯಿತು. ಅರುಣ್, ಟಿ.ಎಲ್. ಶ್ರೀನಿವಾಸ್, ಜಗದೀಶ್ ಜೋಡುಬೀಟಿ, ಎಂ.ಆರ್. ರಫೀಕ್, ಕೇಶವಕಾಮತ್, ಸಣ್ಣುವಂಡ ಕಿಶೋರ್ ನಾಚಪ್ಪ, ಸುರೇಶ್‌ರೈ, ಲಿಜೇಶ್, ಸತೀಶ್, ಸಲೀಮ್ ಸನ್ಮಾನ ಸ್ವೀಕರಿಸಿದರು. ದಾನಿ ಅಜ್ಜಿಕುಟ್ಟೀರ ಸಜನ್, ಕುಲ್ಲಚಂಡ ಪ್ರಮೋದ್ ಗಣಪತಿ, ಎನ್.ಎಲ್. ಜೀವಿತ್, ಎಂ.ಜಿ. ಮೋಹನ್, ಶುಭ ವೆಂಕಟೇಶ್, ಕವಿ ಸುಬ್ಬಯ್ಯ, ಬೆಂಜಾAಡ ರಶ್ಮಿ ದೇವಯ್ಯ, ರೊಜರಿಯನ್ ಫುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷ ಸಮ್ಮದ್, ಗೌರವ ಅಧ್ಯಕ್ಷ ಹಂಸಿತ್, ಕಾರ್ಯದರ್ಶಿ ಹೆಚ್.ಎಸ್. ಶರತ್ ಇದ್ದರು.