ಮಡಿಕೇರಿ, ಮಾ. ೯: ಇತ್ತೀಚೆಗೆ ರಾಬಾ ಮೀಡಿಯಾ ಬುಕ್ ಆಫ್ ವರ್ಲ್ಡ್ ರೆಕಾಡ್ಸ್ ಅವರು ನಡೆಸಿದ ಅಂತರಾಷ್ಟಿçÃಯ ಮಟ್ಟದ ದಿ ಟ್ಯಾಲೆಂಟ್ ಹಂಟ್ ನಾನ್ ಸ್ಟಾಪ್ ಇಂಟರ್‌ನ್ಯಾಷನಲ್ ಆನ್‌ಲೈನ್ ಸ್ಪರ್ಧೆ ಸೀಸನ್-೬ ರಲ್ಲಿ ಕುಶಾಲನಗರದ ಏಂಜಲ್ಸ್ ವಿಂಗ್ಸ್ ನೃತ್ಯ ಶಾಲೆಯ ೧೪ ವಿದ್ಯಾರ್ಥಿಗಳು ಪಾಲ್ಗೊಂಡು ಸಾಧನೆ ಮಾಡಿದ್ದಾರೆ.
ಜಿ.ಡಿ. ವಿದ್ಯಾ, ಚೈತನ್ಯ ಡಿ, ಲಕ್ಷಿö್ಮÃ ಅವರಿಗೆ ನೃತ್ಯ ಮೇಧಿನಿ ಬಿರುದು, ಎಂ.ಆರ್. ದೇವಿಕ, ಪಿ.ಎಸ್. ಆರ್ಯ, ಶಿವಾನಿ, ಶೀತಲ್ ಆರ್ಯ, ಪ್ರಾರ್ಥನ, ಜಗನ್ವಿ ಅವರಿಗೆ ಸ್ಟಾರ್ ಪರ್ಫಾಮರ್ ಬಿರುದು, ಕೌಶಲಿ, ದಿತ್ವಿರಾಮ್, ಲಿಖಿತ ಅವರಿಗೆ ಯಂಗ್ ಸ್ಟಾರ್ ಬಿರುದು, ಲಿಯೋನೆಲ್ ಲ್ಯೂಕ್ ಡಿಸೋಜ ಹಾಗೂ ಭೂಮಿಕಾ ಅರ್ಜುನ್ ಸ್ಕೇಟಿಂಗ್ ಸ್ಟಾರ್ ಬಿರುದನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಲ್ಲದೆ ಏಂಜಲ್ಸ್ ವಿಂಗ್ಸ್ ನೃತ್ಯ ಶಾಲೆಯನ್ನು ಪ್ರತಿನಿಧಿಸಿದ ವಿದುಷಿ ಏಂಜಲ್ ರಶ್ಮಿ ಡಿಸೋಜ ನಾಟ್ಯ ಕಲಾರತ್ನ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಸ್ಪರ್ಧೆಯಲ್ಲಿ ಐದು ರಾಷ್ಟçಗಳ ಕಲಾವಿದರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಬೆಂಗಳೂರಿನ ಅವಿನಾಶ್ ನೇತೃತ್ವದಲ್ಲಿ ಸೂಪರ್ ಕಿಡ್ಸ್ ಚಾನಲ್ ವತಿಯಿಂದ ನಡೆದ ಸೂಪರ್ ಡ್ಯಾನ್ಸ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ರಿಯಾಲಿಟಿ ಶೋದ ಗ್ರಾಂಡ್ ಮಾಸ್ಟರ್ ಮಾಸ್ಟರ್ ಜಗದೀಶ್ ಅವರ ಉಪಸ್ಥಿತಿಯಲ್ಲಿ ಏಂಜಲ್ಸ್ ವಿಂಗ್ಸ್ ನೃತ್ಯ ಶಾಲೆಯ ಅರ್ಪಿತ್, ಅನೂಪ್ ಡಿಸೋಜ ಸೀನಿಯರ್ ವಿಭಾಗದಲ್ಲಿ ಸ್ಟಾರ್ ಕೊರಿಯಾಗ್ರಾಫರ್ ಆಫ್ ಕರ್ನಾಟಕ ಬಿರುದು ಹಾಗೂ ವಿದುಷಿ ಏಂಜಲ್ ರಶ್ಮಿ ಡಿಸೋಜ ಶಾಸ್ತಿçÃಯ ವಿಭಾಗದಲ್ಲಿ ಸೂಪರ್ ಗುರು ಆಫ್ ಕರ್ನಾಟಕ ಬಿರುದು ಪಡೆದಿದ್ದಾರೆ.