ಕಣಿವೆ, ಮಾ. ೮: ಕೂಡು ಮಂಗಳೂರು ಗ್ರಾ.ಪಂ. ಸಾಮಾನ್ಯ ಸಭೆಯು ಅಧ್ಯಕ್ಷೆ ಇಂದಿರಾ ರಮೇಶ್ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ಹಿಂದಿನ ತಿಂಗಳ ಜಮಾ ಖರ್ಚಿನ ಬಗ್ಗೆ ಚರ್ಚಿಸ ಲಾಯಿತು. ೨೦೨೨-೨೩ನೇ ಸಾಲಿನ ಹದಿನೈದನೇ ಹಣಕಾಸು ಯೋಜನೆಯ ಕ್ರಿಯಾಯೋಜನೆಗೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು. ಕೂಡುಮಂಗಳೂರು ಗ್ರಾ.ಪಂ. ಗೆ ವಸತಿ ಯೋಜನೆಯಡಿ ಹೆಚ್ಚುವರಿ ಮನೆಗಳನ್ನು ನೀಡುವಂತೆ ಕೋರಿ ಶಾಸಕರಿಗೆ ಪತ್ರ ಬರೆಯುವಂತೆ ತೀರ್ಮಾನಿಸಲಾಯಿತು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂತೋಷ್ ಅವರು, ಆಯವ್ಯಯವನ್ನು ಸಭೆಗೆ ಮಂಡಿಸಿದರು.
ಕೂಡುಮಂಗಳೂರು ಗ್ರಾ.ಪಂ ಅನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸುವ ಸಂಬAಧ ಕೇಂದ್ರೀಯ ಸಮಿತಿಯವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಭೆ ನಡೆಸುವಂತೆ ಸದಸ್ಯ ಕೆ.ಬಿ.ಶಂಶುದ್ಧೀನ್ ಪ್ರಸ್ತಾಪಿಸಿದರು. ಪಂಚಾಯಿತಿ ವ್ಯಾಪ್ತಿಯಲ್ಲಿ ಜಲ್ಜೀವನ್ ಮಿಷನ್ ಯೋಜನೆಯ ಕಾಮಗಾರಿಯಿಂದಾಗಿ ಜನರು ಬಹಳಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಅಲ್ಲದೆ ಕಾಮಗಾರಿ ಕೂಡ ಕಳಪೆಯಿಂದ ನಡೆಸಲಾಗುತ್ತಿವೆ ಎಂದು ಆರೋಪಗಳು ಕೇಳಿ ಬರುತ್ತಿದ್ದು, ಇದರ ಬಗ್ಗೆ ಆದಷ್ಟು ಬೇಗ ತುರ್ತು ಸಭೆಯನ್ನು ನಡೆಸಬೇಕು ಎಂದು ಅವರು ಆಗ್ರಹಿಸಿದರು.
ಬಸವನತ್ತೂರು ವಾರ್ಡ್ ನಲ್ಲಿ ನಾಲ್ಕು ಜನರು ಸದಸ್ಯರಿದ್ದಾರೆ. ಆದರೆ ಅಧ್ಯಕ್ಷರು ಹಾಗೂ ಪಿಡಿಓ ಯಾವುದೇ ಕೆಲಸಗಳ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡದೇ ಸದಸ್ಯರನ್ನು ಕಡೆಗಣಿಸು ತ್ತಿದ್ದಾರೆ ಎಂದು ಹಿರಿಯ ಸದಸ್ಯರಾದ ಫಿಲೋಮಿನಾ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಸದಸ್ಯೆ ಗೌರಮ್ಮ ಧ್ವನಿಗೂಡಿಸಿದರು.
ಮುಳ್ಳುಸೋಗೆಯಲ್ಲಿರುವ ಕೋರೆ ಯಿಂದಾಗಿ ಕೂಡುಮಂಗಳೂರು ಗ್ರಾ.ಪಂ.ನ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ ದೂರು ಕೇಳಿ ಬಂದ ಹಿನ್ನಲೆ ಜಿಲ್ಲಾಧಿಕಾರಿ ಗಳಿಗೆ ಪತ್ರ ವ್ಯವಹಾರ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಅದರಂತೆ ಸಂಬAಧಪಟ್ಟ ಅಧಿಕಾರಿಗಳು ಕೋರೆ ಪರಿಶೀಲನೆ ನಡೆಸಿ ದಾಖಲಾತಿಗಳನ್ನು ಇಲಾಖೆಗೆ ನೀಡುವಂತೆ ತಿಳಿಸಿದ್ದರು. ಆದರೆ ಇದರ ಬಗ್ಗೆ ಪಂಚಾಯಿತಿ ಅಧ್ಯಕ್ಷರು ದಾಖಲಾತಿ ಪರಿಶೀಲನೆ ನಡೆಸದೆ, ಕೋರೆಯು ಅಧಿಕೃತವಾಗಿ ನಡೆಯುತ್ತಿದೆ ಎಂದು ಪತ್ರಿಕೆ ಹೇಳಿಕೆ ನೀಡಿದ ಬಗ್ಗೆ ಸದಸ್ಯೆ ಫಿಲೋಮಿನಾ ಅಸಮಾಧಾನ ವ್ಯಕ್ತಪಡಿಸಿದರು. ಧ್ವನಿಗೂಡಿಸಿದ ಸದಸ್ಯ ಕೆ.ಬಿ. ಷಂಶುದ್ದೀನ್, ಜವಬ್ದಾರಿಯುತ ಸ್ಥಾನದಲ್ಲಿರುವವರು ಈ ರೀತಿ ತಪ್ಪು ಹೇಳಿಕೆಗಳನ್ನು ನೀಡಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಕೋರೆಯಲ್ಲಿ ಸ್ಫೋಟಕಗಳನ್ನು ಬಳಸಲಾಗುತ್ತದೆ. ಪರ್ಮಿಟ್ ಪಡೆಯದೆ ಕೋರೆಯಿಂದ ಲೆಕ್ಕವಿಲ್ಲದೇ ಕಲ್ಲು ಸಾಗಾಟ ಮಾಡುತ್ತಿದ್ದಾರೆ. ಇದರಿಂದ ಸುಂದರನಗರದ ರಸ್ತೆ ಹಾಳಾಗಿವೆ. ಈ ಸಮಸ್ಯೆಗಳನ್ನು ಮನಗಾಣದೆ ಅಧ್ಯಕ್ಷರು ಕೋರೆ ಪರವಾಗಿ ಪತ್ರಿಕಾ ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭ ಪಂಚಾಯತ್ ಸದಸ್ಯರು ಹಾಗೂ ಸಿಬ್ಬಂದಿಗಳು ಇದ್ದರು.