ಮಡಿಕೇರಿ, ಮಾ. ೮: ಕೊಡಗು ಜಿಲ್ಲೆ ಯಲ್ಲಿ ವನ್ಯಜೀವಿ - ಮಾನವ ಸಂಘರ್ಷ ಪ್ರಕರಣಗಳು ವರ್ಷಂಪ್ರತಿ ಹೆಚ್ಚಾಗುತ್ತಲೇ ಇರುವದು ವಾಸ್ತವವಾಗಿದೆ. ಅದರಲ್ಲೂ ಕಳೆದ ಕೆಲವು ವರ್ಷಗಳಿಂದ ಜಿಲ್ಲೆಯಲ್ಲಿ ಕಾಡಾನೆ ಹಾಗೂ ಹುಲಿ ದಾಳಿಯ ಘಟನೆಗಳು ಅಧಿಕವಾಗಿವೆ. ಕಳೆದ ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ ಘಟಿಸಿರುವ ದುರಂತಗಳ ಸರಮಾಲೆಯನ್ನು ಅವಲೋಕಿಸಿದರೆ ಇದು ತೀರಾ ಆತಂಕಕಾರಿಯಾದ ಹಂತವನ್ನು ತಲುಪಿರುವದು ಕಂಡು ಬರುತ್ತದೆ.

ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಅವರು ಜಿಲ್ಲೆಯಲ್ಲಿ ಕಾಡಾನೆ - ಹುಲಿ ಹಾವಳಿ ಕುರಿತಾಗಿ ವಿಧಾನ ಪರಿಷತ್‌ನಲ್ಲಿ ಹಲವು ಪ್ರಶ್ನೆಗಳನ್ನು ಕೇಳಿದ್ದು, ಅರಣ್ಯ ಸಚಿವ ಉಮೇಶ್ ವಿ. ಕತ್ತಿ ಅವರು ನೀಡಿರುವ ಪೂರ್ಣ ವಿವರದಲ್ಲಿ ಇದು ಬಹಿರಂಗವಾಗಿದೆ.

ಕಾಡಾನೆ ಹಾವಳಿ ಕುರಿತಂತೆ...

ಕಳೆದ ಮೂರು ವರ್ಷಗಳಲ್ಲಿ ಕೊಡಗಿನಲ್ಲಿ ಕಾಡಾನೆ ದಾಳಿಯಿಂದ ೧೮ ಜನರು ಮೃತಪಟ್ಟಿದ್ದಾರೆ. ವಿವಿಧ ರೀತಿಯ ನಷ್ಟಕ್ಕೆ ಸಂಬAಧಿಸಿದAತೆ ಒಟ್ಟು ೧೩,೬೭೯ ಪ್ರಕರಣಗಳು ಜಿಲ್ಲೆಯ ವಿವಿಧ ಅರಣ್ಯ ವಿಭಾಗಗಳಲ್ಲಿ ದಾಖಲಾಗಿದೆ. ೨೦೧೯-೨೦ರಲ್ಲಿ ಕಾಡಾನೆ ದಾಳಿಗೆ ಐದು ಸಾವು ೨೦೨೦-೨೧ರಲ್ಲಿ ೬ ಸಾವು ಹಾಗೂ ೨೦೨೧-೨೨ ರಲ್ಲಿ ೮ ಮಂದಿ ಸೇರಿ ಒಟ್ಟು ೧೯ ಮಂದಿ ಬಲಿಯಾಗಿದ್ದಾರೆ.

ನಷ್ಟ ಪ್ರಕರಣಗಳು

ಮಡಿಕೇರಿ ವಿಭಾಗದಲ್ಲಿ ೨೦೧೮-೧೯ರಲ್ಲಿ ೧೧೧೭ ನಷ್ಟ ಪ್ರಕರಣ, ೨೦೧೯-೨೦ರಲ್ಲಿ ೧೨೫೯, ೨೦೨೦-೨೧ರಲ್ಲಿ ೧೪೨೮, ೨೦೨೧-೨೨ರಲ್ಲಿ ೧೪೮೭ ನಷ್ಟ ಪ್ರಕರಣ ಸೇರಿ ಒಟ್ಟು ೫೨೯೧ ಪ್ರಕರಣ ದಾಖಲಾಗಿವೆ. ಇದಕ್ಕೆ ಸಂಬAಧಿಸಿ ದಂತೆ ಒಟ್ಟು ೩೨೧.೨೭ ಲಕ್ಷದಷ್ಟು ಪರಿಹಾರವನ್ನು ವಿತರಿಸಲಾಗಿದೆ. ವೀರಾಜಪೇಟೆ ವಿಭಾಗದಲ್ಲಿ ೨೦೧೮-೧೯ರಲ್ಲಿ ೧೩೨೮,೨೦೧೯-೨೦ರಲ್ಲಿ ೧೧೪೬, ೨೦೨೦-೨೧ರಲ್ಲಿ ೧೪೩೦ ಹಾಗೂ ೨೦೨೧- ೨೨ರಲ್ಲಿ ೧೫೨೦ ಪ್ರಕರಣ ಸೇರಿ ಒಟ್ಟು ೫೪೨೪ ಪ್ರಕರಣ ನಡೆದಿದೆ. ಇದಕ್ಕೆ ಸಂಬAಧಿಸಿದAತೆ ರೂ. ೩೪೯.೭೫ ಲಕ್ಷವನ್ನು ಪರಿಹಾರವಾಗಿ ವಿತರಿಸಲಾಗಿದೆ.

ವನ್ಯಜೀವಿ ವಿಭಾಗ ಮಡಿಕೇರಿಯಲ್ಲಿ ೨೦೧೮-೧೯ರಲ್ಲಿ ೮೩೭, ೨೦೧೯-೨೦ರಲ್ಲಿ

(ಮೊದಲ ಪುಟದಿಂದ) ೭೪೪, ೨೦೨೦-೨೧ರಲ್ಲಿ ೭೯೭ ಹಾಗೂ ೨೦೨೧-೨೨ರಲ್ಲಿ ೫೮೬ ಪ್ರಕರಣ ಸೇರಿ ಒಟ್ಟು ೨೯೬೪ ಘಟನೆ ವರದಿಯಾಗಿದ್ದು, ಇದಕ್ಕೆ ೧೭೫.೬೭ ಲಕ್ಷ ಪರಿಹಾರ ನೀಡಿರುವದಾಗಿ ಉಮೇಶ್ ಕತ್ತಿ ಅವರು ಲಿಖಿತ ಉತ್ತದಲ್ಲಿ ಮಾಹಿತಿ ಒದಗಿಸಿದ್ದಾರೆ.

ಹುಲಿ ದಾಳಿ ಮಾಹಿತಿ

ಹುಲಿದಾಳಿಗೆ ೨೦೨೦-೨೧ರಲ್ಲಿ ವೀರಾಜಪೇಟೆ ತಾಲೂಕಿನಲ್ಲಿ ಮೂವರು ಬಲಿಯಾಗಿದ್ದಾರೆ. ಇವರ ಕುಟುಂಬಕ್ಕೆ ತಲಾ ರೂ. ೭.೫ ಲಕ್ಷದಂತೆ ಪರಿಹಾರ ನೀಡಲಾಗಿದೆ.

ಜಾನುವಾರು ಸಾವು

೨೦೧೮-೧೯ರಲ್ಲಿ ೪೬, ೨೦೧೯-೨೦ರಲ್ಲಿ ೫೫, ೨೦೨೦-೨೧ರಲ್ಲಿ ೭೭ ಹಾಗೂ ೨೦೨೧-೨೨ರಲ್ಲಿ (ಫೆಬ್ರವರಿ ಅಂತ್ಯಕ್ಕೆ) ೩೧ ಸಾಕು ಪ್ರಾಣಿಗಳು ವ್ಯಾಘ್ರಗಳಿಗೆ ತುತ್ತಾಗಿವೆ. ಇದಕ್ಕೆ ಸಂಬAಧಿಸಿದAತೆ ಒಟ್ಟು ೮,೯೦,೦೦೦ ಮೊತ್ತವನ್ನು ಪರಿಹಾರವಾಗಿ ನೀಡಲಾಗಿದೆ.

೩ ಹುಲಿ ಸೆರೆ

ತಾ. ೨೦.೫.೨೦೨೦ ರಂದು ಕುಮಟೂರು ಗ್ರಾಮದಲ್ಲಿ ಒಂದು ಹುಲಿ, ತಾ ೨೩.೧೨.೨೦೨೦ ರಂದು ತಿತಿಮತಿ ವಲಯದಲ್ಲಿ ಒಂದು ಹುಲಿ ಹಾಗೂ ತಾ. ೨೦.೨.೨೦೨೧ ರಂದು ಪೊನ್ನಂಪೇಟೆ ವಲಯದಲ್ಲಿ ಒಂದು ಹುಲಿ ಸೇರಿ ಒಟ್ಟು ಮೂರು ಹುಲಿಯನ್ನು ಸೆರೆಹಿಡಿಯ ಲಾಗಿದೆ ಎಂದು ಸುಜಾ ಪ್ರಶ್ನೆಗೆ ಸಚಿವ ಉಮೇಶ್ ಕತ್ತಿ ಉತ್ತರ ನೀಡಿದ್ದಾರೆ.