*ಗೋಣಿಕೊಪ್ಪ, ಮಾ. ೯: ತಿತಿಮತಿ ಗ್ರಾಮದ ಕರಡಿಕೊಪ್ಪ ಶ್ರೀ ಮುತ್ತಪ್ಪ ದೇವರ ಉತ್ಸವ ತಾ. ೨೫, ೨೬ ಮತ್ತು ೨೭ರಂದು ನಡೆಯಲಿದೆ.

ತಾ.೨೫ರಂದು ಬೆಳಿಗ್ಗೆ ೬ ಗಂಟೆಗೆ ಗಣಪತಿ ಹೋಮ, ನಂತರ ಸಣ್ಣಮಕ್ಕಳ ಭವಿಷ್ಯಕ್ಕಾಗಿ ಮೌನ ಜ್ಞಾನ ಏರ್ಪಡಿಸಲಾಗಿದೆ. ಸಂಜೆ ೪ ಗಂಟೆಗೆ ಬಾಳುಮನಿ ಗಣಪತಿ ದೇವಸ್ಥಾನದಿಂದ ಕಳಸ ತರುವುದು, ತೀರ್ಥ ಪ್ರಸಾದ ವಿತರಣೆ ನಡೆಯಲಿದೆ.

ತಾ. ೨೬ ಹಾಗೂ ತಾ. ೨೭ರಂದು ನಡೆಯುವ ಉತ್ಸವದಲ್ಲಿ ಮುತ್ತಪ್ಪನ್, ತಿರುವಪ್ಪನ್, ಕಾರಣೋರ್, ಪೋದಿ, ವಸೂರಿಮಲಾ, ಗುಳಿಗನ್, ಕಂಡಕರ್ಣನ್, ವಿಷ್ಣುಮೂರ್ತಿ, ಶಾಸ್ತಪ್ಪನ್ (ಕುಟ್ಟಿಚಾತನ್) ಮುಂತಾದ ತೆರೆಗಳು ನಡೆಯಲಿವೆ. ನೆರದ ಭಕ್ತಾಧಿಗಳಿಗೆ ಅನ್ನದಾನ ಏರ್ಪಡಿಸಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.