ಮಡಿಕೇರಿ, ಮಾ. ೮: ಹಾಕತ್ತೂರು ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯಿAದ ಅವ್ಯವಹಾರ ನಡೆದಿದೆ ಎಂಬ ಆರೋಪವನ್ನು ನಿರಾಕರಿಸಿರುವ ಸಂಘದ ಅಧ್ಯಕ್ಷ ಮಂಞೆÃರ ಸಾಬು ತಿಮ್ಮಯ್ಯ ಅವರು ಇದು ಚುನಾವಣೆ ದೃಷ್ಟಿಯಿಂದ ಮಾಡುತ್ತಿರುವ ಆರೋಪ ಎಂದು ಸ್ಪಷ್ಟನೆ ನೀಡಿದ್ದಾರೆ. ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸದಸ್ಯರ ಆರೋಪ, ಸತ್ಯಕ್ಕೆ ದೂರವಾಗಿದೆ. ಕೃಷಿಪತ್ತಿನ ಸಹಕಾರ ಸಂಘಗಳ ಚುನಾವಣೆ ಸಮೀಪಿಸುತ್ತಿರುವುದರಿಂದ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ನಮ್ಮ ಸಂಘದಲ್ಲಿ ಯಾವುದೇ ರೀತಿಯ ಅವ್ಯವಹಾರ ನಡೆದಿರುವುದಿಲ್ಲ. ಸಂಘದ ಎಲ್ಲಾ ವಹಿವಾಟು ವ್ಯವಹಾರಗಳು ಕ್ರಮಬದ್ಧವಾಗಿದ್ದು, ಸದಸ್ಯರ ಹಿತದೃಷ್ಟಿಯಿಂದ ಸಮರ್ಪಕವಾಗಿ ಕಾಯನಿರ್ವಹಿಸುತ್ತಿದೆ. ಆದರೆ, ಇತ್ತೀಚೆಗೆ ಸದಸ್ಯರಾದ ಅಮ್ಮಾಟಂಡ ಚಿಣ್ಣಪ್ಪ ಅವರು ಮುಂಬರುವ ಚುನಾವಣೆ ಉದ್ದೇಶದಿಂದ ಆಡಳಿತ ಮಂಡಳಿಗೆ ಕೆಟ್ಟ ಹೆಸರು ತರಲು ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ್ದಾರೆ ಎಂದು ಹೇಳಿದರು.
ಸಂಘದ ನಿವೃತ್ತ ಮಹಿಳಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಡೆದಿರುವ ರಜೆ ವೇತನದ ಬಗ್ಗೆ ಮಹಾಸಭೆಯಲ್ಲಿ ಪ್ರಶ್ನಿಸಿ ಸಭೆಯ ತೀರ್ಮಾನದಂತೆ ಅಧಿಕಾರಿಯಿಂದ ರಜೆ ವೇತನದ ಹಣವನ್ನು ಬಡ್ಡಿಯೊಂದಿಗೆ ರೂ.೨,೭೬,೧೯೪ ವಸೂಲಿ ಮಾಡಲಾಗಿದೆ. ಹೀಗಿದ್ದರೂ ಆಡಳಿತ ಮಂಡಳಿಯವರು ತಮಗೆ ಇಷ್ಟಬಂದAತೆ ಆಡಳಿತ ನಡೆಸುತ್ತಿರುವುದಾಗಿ ಆರೋಪಿಸಿ ಸಂಘದ ಬಗ್ಗೆ ಅಪಪ್ರಚಾರ ಮಾಡುತ್ತಿರುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.
ಸಂಘದಿAದ ಯಾವುದೇ ಅನಾವಶ್ಯಕ ಕಾರ್ಯಕ್ರಮಗಳಿಗೆ ದುಂದು ವೆಚ್ಚ ಮಾಡಿರುವುದಿಲ್ಲ. ಸಂಘದಲ್ಲಿ ವ್ಯಾಪಾರ ವಹಿವಾಟುಗಳು ಕ್ರಮ ಬದ್ಧವಾಗಿದೆ. ಸಂಘದ ಸದಸ್ಯರು ಇಂತಹ ಸುಳ್ಳು ಆರೋಪಗಳಿಗೆ ಕಿವಿಗೊಡದೆ ಎಂದಿನAತೆ ಸಂಘದಲ್ಲಿ ವ್ಯವಹರಿಸುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಇಂದ್ರಕುಮಾರ್, ನಿರ್ದೇಶಕರಾದ ಉಳುವಾರನ ಪಳಂಗಪ್ಪ, ತೋರೆರ ಅಯ್ಯಪ್ಪ ಇದ್ದರು.