ಮಡಿಕೇರಿ, ಮಾ. ೮: ಕೊಡವ ಬುಡಕಟ್ಟು ಜನಾಂಗದ ಮಹಿಳೆಯರಿಗೆ ಸಾಂವಿಧಾನಿಕ, ರಾಜಕೀಯ ಸಬಲೀಕರಣಕ್ಕೆ ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಮಹಿಳಾ ದಿನದ ಪ್ರಯುಕ್ತ ಜಿಲ್ಲಾಧಿಕಾರಿಗಳ ಕಚೇರಿ ಎದುರು ಮೌನ ಸತ್ಯಾಗ್ರಹ ನೆರವೇರಿತು.
ಅಲ್ಪಸಂಖ್ಯಾತ ಕೊಡವ ಮಹಿಳೆಯರಿಗೆ ರಾಜಕೀಯ-ಸಾಂವಿಧಾನಿಕ ಹಕ್ಕುಗಳ ಅಧಿಕಾರ ನೀಡುವ ಮೂಲಕ, ಅಂತರರಾಷ್ಟಿçÃಯ ಮಹಿಳಾ ದಿನಾಚರಣೆಗೆ ಹೊಸ ಆಯಾಮವನ್ನು ನೀಡುವಂತೆ ಸಿ.ಎನ್.ಸಿ ಅಧ್ಯಕ್ಷ ನಂದಿನೆರವAಡ ಯು. ನಾಚಪ್ಪ ಅವರು ಒತ್ತಾಯಿಸಿದರು. ಮಹಿಳೆಯರ ಸಾಧನೆಗಳನ್ನು ಆಚರಿಸುವಂತಾಗಬೇಕು, ಪಕ್ಷಪಾತದ ವಿರುದ್ಧ ಜಾಗೃತಿ ಮೂಡಿಸಬೇಕು ಹಾಗೂ ಸಮಾನತೆಗಾಗಿ ಕ್ರಮ ಕೈಗೊಳ್ಳುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.
ಕೊಡವ ಮಹಿಳೆಯರು ಸ್ವಾತಂತ್ರ÷್ಯ, ಬುದ್ಧಿವಂತಿಕೆ ಮತ್ತು ಹೃದಯ ವೈಶಾಲ್ಯತೆಗೆ ಮಾದರಿಯಾಗಿದ್ದಾರೆ. ಕೊಡವ ಜನಾಂಗದ ಅಭಿವೃದ್ಧಿಗೆ ಮಹಿಳೆಯರು ಶ್ರಮಪಟ್ಟಿದ್ದಾರೆ. ಕೊಡವ ಮಹಿಳೆಯರ ಮಾದರಿಯಲ್ಲಿಯೇ ದೇಶದ ಎಲ್ಲಾ ಮಹಿಳೆಯರು ಕಾರ್ಯೋನ್ಮುಖರಾದರೆ ಮಹಿಳೆಯರ ಸಬಲೀಕರಣವಾಗಲಿದೆ ಎಂದು ನಾಚಪ್ಪ ಅಭಿಪ್ರಾಯಪಟ್ಟರು.
ಸತ್ಯಾಗ್ರಹದಲ್ಲಿ ಕಲಿಯಂಡ ಮೀನಾ ಪ್ರÀಕಾಶ್, ಪಟ್ಟಮಾಡ ಲಲಿತಾ ಗಣಪತಿ, ಪುಲ್ಲೇರ ಸ್ವಾತಿ ಕಾಳಪ್ಪ, ಅಜ್ಜಿನಿಕಂಡ ಇನಿತಾ ಮಾಚಯ್ಯ, ಬೊಟ್ಟಂಗಡ ಸವಿತಾ ಗಿರೀಶ್, ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಮುಕ್ಕಾಟಿರ ರೋಜಿ ಗಣಪತಿ, ಅರೆಯಡ ಸವಿತಾ ಗಿರೀಶ್, ಚೋಳಪಂಡ ಜ್ಯೋತಿ ನಾಣಯ್ಯ, ನಂದಿನೆರವAಡ ಬೀನಾ ಅಯ್ಯಣ್ಣ, ನಂದಿನೆರವAಡ ನಿಶಾ ಅಚ್ಚಯ್ಯ, ಪಟ್ರಪಂಡ ಜಾಜಿ ಮೋಹನ್, ಕಲಿಯಂಡ ಪ್ರಕಾಶ್, ಬೊಟ್ಟಂಗಡ ಗಿರೀಶ್, ಪುಲ್ಲೇರ ಕಾಳಪ್ಪ, ಅಜ್ಜಿಕುಟ್ಟೀರ ಲೋಕೇಶ್, ಅರೆಯಡ ಗಿರೀಶ್, ಕಿರಿಯಮಾಡ ಶೆರಿನ್, ಬೇಪಡಿಯಂಡ ದಿನು, ಬೇಪಡಿಯಂಡ ಬಿದ್ದಪ್ಪ, ಅಪ್ಪಾರಂಡ ಪ್ರಸಾದ್, ಮೇದೂರ ಕಂಠಿ ನಾಣಿಯಪ್ಪ, ಕೂಪದಿರ ಸಾಬು, ಪುಟ್ಟಿಚಂಡ ದೇವಯ್ಯ, ನಂದಿನೆರವAಡ ಅಯ್ಯಣ್ಣ, ಪಟ್ಟಮಾಡ ಕುಶ, ನಂದಿನೆರವAಡ ವಿಜು, ಚೋಳಪಂಡ ನಾಣಯ್ಯ, ನಂದಿನೆರವAಡ ಅಪ್ಪಯ್ಯ, ಮಂದಪAಡ ಮನೋಜ್, ಚೀಯಬೇರ ಸತೀಶ್, ಬಡುವಂಡ ವಿಜಯ, ಆಳಮಂಡ ನೆಹರು, ಪುದಿಯೊಕ್ಕಡ ಕಾಶಿ, ಅಮ್ಮಾಟಂಡ ದೇವಯ್ಯ ಇದ್ದರು.
ಸಿ.ಎನ್.ಸಿ.ಯ ವಿವಿಧ ಬೇಡಿಕೆಗಳುಳ್ಳ ಮನವಿಯನ್ನು ಎಡಿಸಿ ಡಾ.ನಂಜುAಡೇಗೌಡ ಅವರ ಮೂಲಕ ಸರಕಾರಕ್ಕೆ ಕಳುಹಿಸಲಾಯಿತು.
ಬೇಡಿಕೆಗಳು
ಸಂಸತ್ತು, ರಾಜ್ಯ ಅಸೆಂಬ್ಲಿ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಪ್ರಸ್ತಾವಿತ ಶೇ.೩೩ ಸೀಟುಗಳಲ್ಲಿ ಕೊಡವ ಮಹಿಳೆಯರಿಗೆ ಪ್ರತ್ಯೇಕವಾಗಿ ಆಂತರಿಕ ಕೋಟಾವನ್ನು ನೀಡಬೇಕು. ಕೊಡಗಿನಲ್ಲಿ ಪ್ರತಿ ಕೊಡವತಿಗೆ ಕಡ್ಡಾಯವಾಗಿ ೫ ಎಕರೆ ಭೂಮಿಯನ್ನು ಕೃಷಿ ಉದ್ದೇಶಕ್ಕಾಗಿ ನೀಡಬೇಕು. ರಾಜ್ಯ ಸರಕಾರದ ‘ಸಪ್ತಪತಿ ಭಾಗ್ಯ’ ಯೋಜನೆಯಂತೆಯೇ ಕೊಡವ ವಧುಗಳಿಗೆ ‘ಪತ್ತಾಕ್ ಭಾಗ್ಯ’ ಕಲ್ಪಿಸಬೇಕು.
ಬಡ ಕೊಡವತಿ ಗರ್ಭಿಣಿಯರಿಗೆ "ಸೀಮಂತ ಭಾಗ್ಯ"ದ ಬದಲಿಯಾಗಿ "ಕೂಪಧಿ ಕೂಳ್ ಭಾಗ್ಯ" ಕಲ್ಪಿಸಬೇಕು. ಕರ್ನಾಟಕ ಸರ್ಕಾರ ಬಡ ವರ್ಗದ ಗರ್ಭಿಣಿಯರಿಗೆ "ಸೀಮಂತ ಭಾಗ್ಯ" ನೀಡುತ್ತಿದೆ. ಗರ್ಭಿಣಿ ಕೊಡವ ಮಹಿಳೆಯರಿಗೆ "ಕೂಪದಿ ಕೂಳ್" ಮೂಲಕ ಸಹಾಯ ಮಾಡಿ, ಸರಕಾರದ 'ಸೀಮಂತ ಭಾಗ್ಯ' ಯೋಜನೆಯನ್ನು ಕೊಡವತಿಯ ಗರ್ಭಿಣಿಯರಿಗೆ "ಕೂಪದಿ ಕೂಳ್ ಭಾಗ್ಯ" ಎಂದು ವಿಸ್ತರಿಸಬೇಕು.