ಸೋಮವಾರಪೇಟೆ,ಮಾ.೭: ಜಾಗೃತ ಸಂಘಟನೆಯಿAದ ಮಾತ್ರ ಹಿಂದೂ ಧರ್ಮ ಉಳಿಯಲು ಸಾಧ್ಯ. ಈ ನಿಟ್ಟಿನಲ್ಲಿ ಸಮಸ್ತ ಹಿಂದೂ ಸಮಾಜ ಜಾಗೃತಗೊಳ್ಳಬೇಕು. ಹಿಂದೂ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ಕಾರ್ಯಕ್ಕೆ ಪ್ರತಿ ಮನೆಯಿಂದ ಕಾರ್ಯಕರ್ತರು ತಯಾರಾಗಬೇಕು ಎಂದು ದುರ್ಗಾವಾಹಿನಿಯ ಪ್ರಮುಖರಾದ ಚೈತ್ರಾ ಕುಂದಾಪುರ ಕರೆ ನೀಡಿದರು.
ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ-ದುರ್ಗಾವಾಹಿನಿಯ ಆಶ್ರಯದಲ್ಲಿ ಇಲ್ಲಿನ ಜೇಸೀ ವೇದಿಕೆಯಲ್ಲಿ ಆಯೋಜಿಸಿದ್ದ ಹಿಂದೂ ಜನ ಜಾಗೃತಿ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಹಿಂದುತ್ವ ಈ ದೇಶದ ಅಸ್ಮಿತೆಯಾಗಿದ್ದು, ಪ್ರಪಂಚಕ್ಕೆ ಬದುಕಿನ ಪಾಠ ಕಲಿಸಿದ ಶ್ರೇಷ್ಠ ಧರ್ಮವಾಗಿದೆ. ಇತ್ತೀಚಿನ ದಿನಗಳಲ್ಲಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಮೇಲೆ ಹಲ್ಲೆ, ಬೆದರಿಕೆ, ಹತ್ಯೆಯಂತಹ ಕೃತ್ಯಗಳು ಹೆಚ್ಚುತ್ತಿದ್ದು, ಇಂತಹವರಿಗೆ ಹಿಂದೂ ಸಮಾಜ ತಕ್ಕ ಪ್ರತ್ಯುತ್ತರ ನೀಡಬೇಕಾಗಿದೆ ಎಂದು ಚೈತ್ರಾ ಹೇಳಿದರು.
ಇತ್ತೀಚೆಗೆ ಶಿವಮೊಗ್ಗದಲ್ಲಿ ಭಜರಂಗದಳ ಕಾರ್ಯಕರ್ತ ಹರ್ಷನ ಹತ್ಯೆ ಮಾಡುವ ಮೂಲಕ ಹಿಂದೂ ವಿರೋಧಿಗಳು, ಹಿಂದೂ ಸಮಾಜದಲ್ಲಿ ಭಯ ಹುಟ್ಟಿಸುವ ಯತ್ನಕ್ಕೆ ಕೈಹಾಕಿದ್ದಾರೆ. ಆಳಂದದಲ್ಲಿ ನಡೆದ ಶಿವನ ಮೂರ್ತಿ ಅಪವಿತ್ರ ಘಟನೆಯ ಸಂದರ್ಭ ಸಮಾಜಘಾತುಕರು ತಲವಾರ್ ಪ್ರದರ್ಶಿಸಿದ್ದಾರೆ. ಸಾರ್ವಜನಿಕವಾಗಿ ಇಂತಹ ಕೃತ್ಯಗಳು ನಡೆದರೂ ಪೊಲೀಸ್ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಆರೋಪಿಸಿದ ಅವರು, ಇಂತಹ ಘಟನೆಗಳು ಮುಂದುವರೆದರೆ ಹಿಂದೂ ಸಮಾಜವೇ ತನ್ನ ರಕ್ಷಣೆಗೆ ಮುಂದಾಗಬೇಕಾಗುತ್ತದೆ ಎಂದರು.
ಹಿAದೂ ಸಮಾಜದ ಮೇಲೆ ಒಂದಿಲ್ಲೊAದು ರೀತಿಯಲ್ಲಿ ಆಕ್ರಮಣಗಳು ನಡೆಯುತ್ತಲೇ ಇವೆ. ಲವ್ ಜಿಹಾದ್, ಮತಾಂತರ, ಹಿಂದೂ ಕಾರ್ಯಕರ್ತರ ಹತ್ಯೆಯಂತಹ ಕೃತ್ಯಗಳು ಸಂಭವಿಸುತ್ತಿದ್ದು, ಈ ಬಗ್ಗೆ ಹಿಂದೂ ಸಮಾಜ ಜಾಗೃತ ಗೊಳ್ಳಬೇಕಿದೆ. ಧರ್ಮ ಹಾಗೂ ರಾಷ್ಟçವಿರೋಧಿ ಕೃತ್ಯಗಳಿಗೆ ಪ್ರೇರಣೆ ನೀಡುವ ಮನಸ್ಥಿತಿಯ ವ್ಯಕ್ತಿಗಳ ಬಗ್ಗೆ ಹಿಂದೂ ಸಮಾಜ ಜಾಗೃತವಾಗಬೇಕು. ಇಲ್ಲಿನ ಸೌಕರ್ಯಗಳನ್ನು ಬಳಸಿಕೊಂಡು ಇದೇ ರಾಷ್ಟçಕ್ಕೆ ದ್ರೋಹ ಬಗೆಯುವವರೊಂದಿಗೆ ಹಿಂದೂ ಸಮಾಜ ಸೌಜನ್ಯ ತೋರಬಾರದು ಎಂದರು.
(ಮೊದಲ ಪುಟದಿಂದ) ಲವ್ ಜಿಹಾದ್ ಮೂಲಕ ಹಿಂದೂ ಧರ್ಮದ ಯುವತಿಯರನ್ನು ಮತಾಂತರಗೊಳಿಸಿ, ದೇಶ ಹಾಗೂ ಧರ್ಮವಿರೋಧಿ ಕೃತ್ಯಗಳಿಗೆ ಬಳಸಿಕೊಳ್ಳುವ ಷಡ್ಯಂತ್ರö ನಡೆಯುತ್ತಿದೆ. ದೀಪ್ತಿ ಮಾರ್ಲ ಎಂಬಾಕೆ ಮತಾಂತರಗೊAಡು ಭಯೋತ್ಪಾದಕ ಚಟುವಟಿಕೆಗೆ ಸಹಕಾರ ನೀಡಿರುವುದೇ ಉದಾಹರಣೆಯಾಗಿದೆ. ಈಕೆ ಕೊಡಗಿನ ಮೂಲದವಳು ಎಂಬುದು ಗಮನಾರ್ಹ. ಮುಂದಿನ ದಿನಗಳಲ್ಲಿ ಕೊಡಗಿನ ಯಾವೊಬ್ಬ ಹೆಣ್ಣು ಮಗಳೂ ಸಹ ಇಂತಹ ಮೋಸದ ಬೆಲೆಗೆ ಬೀಳಬಾರದು ಎಂದರು.
ಆಧುನಿಕತೆಯ ಹೆಸರಿನಲ್ಲಿ ಹಿಂದೂ ಹೆಣ್ಣುಮಕ್ಕಳು ಸ್ವೇಚ್ಛಾಚ್ಚಾರದ ಬಲೆಗೆ ಸಿಲುಕಬಾರದು ಎಂದ ಚೈತ್ರಾ ಅವರು, ಮತಾಂತರದ ಪುಸ್ತಕ ಹಿಡಿದು ಮನೆ ಬಾಗಿಲಿಗೆ ಬರುವ ಮಿಷನರಿಗಳ ಬಗ್ಗೆ ಜಾಗೃತರಾಗಬೇಕು. ಇಂತಹವರಿಗೆ ಭಗವದ್ಗೀತೆ ನೀಡುವ ಮೂಲಕ ಹಿಂದೂ ಧರ್ಮದ ಶ್ರೇಷ್ಠತೆಯನ್ನು ತಿಳಿಸಬೇಕೆಂದರು.
ದೇಶಾಭಿಮಾನ ಮೂಡಿಸದ ಶಿಕ್ಷಣ ವ್ಯರ್ಥ. ಈ ನಿಟ್ಟಿನಲ್ಲಿ ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲೂ ಬದಲಾವಣೆಯಾಗಬೇಕು. ಹಿಂದೂ ಧರ್ಮದ ಶ್ರೇಷ್ಠತೆ, ಆಚಾರ ವಿಚಾರ, ಸಂಸ್ಕೃತಿಯ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡಬೇಕು. ಭಾರತೀಯ ಧರ್ಮ ಹಾಗೂ ದೇಶಾಭಿಮಾನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಬೇಕು ಎಂದು ಚೈತ್ರಾ ಅಭಿಪ್ರಾಯಿಸಿದರು.
ಸಮಾವೇಶದ ಸಾನ್ನಿಧ್ಯ ವಹಿಸಿದ್ದ ಅರಕಲಗೂಡು ಬಸವಾಪಟ್ಟಣ ತೋಂಟದಾರ್ಯ ಮಠದ ಸ್ವತಂತ್ರ ಬಸವಲಿಂಗ ಸ್ವಾಮೀಜಿ ಮಾತನಾಡಿ, ಭಾರತೀಯ ಸಂಸ್ಕೃತಿಯು ಸೋಲಿನ ಇತಿಹಾಸ ಹೊಂದಿಲ್ಲ, ಸಂಘರ್ಷದಿAದಲೇ ಗೆಲುವು ಸಾಧಿಸಿದ ಹಿರಿಮೆ ನಮ್ಮದು. ಕೇಸರಿಯು ತ್ಯಾಗ ಬಲಿದಾನದ ಸಂಕೇತವಾಗಿದೆ. ಕೇಸರಿ ತೊಟ್ಟ ಲಕ್ಷಾಂತರ ಯುವಕರು ಧರ್ಮ ರಕ್ಷಣೆಯ ಕಾರ್ಯದಲ್ಲಿ ತೊಡಗಿದ್ದಾರೆ ಎಂದರು.
ತ್ಯಾಗದ ಇತಿಹಾಸದಿಂದಲೇ ಭಾರತ ನಿರ್ಮಾಣವಾಗಿದೆ. ಸ್ವಾತಂತ್ರö್ಯದ ಸಂದರ್ಭದಲ್ಲಿಯೇ ೭ ಮಂದಿಯಿದ್ದ ಧ್ವಜ ಸಮಿತಿಯು ದೇಶಾದ್ಯಂತ ಸಂಚರಿಸಿ ಜನಸಾಮಾನ್ಯರ ಅಭಿಪ್ರಾಯ ಸಂಗ್ರಹಿಸಿದ್ದು, ಇದರಲ್ಲಿ ಕೇಸರಿ ಬಣ್ಣದ ಧ್ವಜ ಹಾಗೂ ಗಾಂಧೀಜಿ ಚರಕವನ್ನು ಅಳವಡಿಸಬೇಕೆಂಬ ಅಭಿಪ್ರಾಯ ಕೇಳಿಬಂದಿತ್ತು. ನಂತರ ರಾಜಕೀಯ ದುರುದ್ದೇಶದಿಂದ ಧ್ವಜ ಬದಲಾಯಿತು. ರಾಷ್ಟçಪ್ರೇಮಿ ಭಾರತೀಯರು ಇಂದಿಗೂ ರಾಷ್ಟçಧ್ವಜಕ್ಕೆ ಗೌರವ ನೀಡುತ್ತಲೇ ಬಂದಿದ್ದಾರೆ ಎಂದರು.
ಹಿಂದೂ ಸಮಾಜ ಇನ್ನಷ್ಟು ಜಾಗೃತಿ ಹಾಗೂ ಸಂಘಟನೆಯಾಗಬೇಕು. ಪ್ರಪಂಚದಲ್ಲಿರುವ ಏಕಮಾತ್ರ ಹಿಂದೂ ರಾಷ್ಟçವನ್ನು ಉಳಿಸಿಕೊಳ್ಳಬೇಕು. ರಾಜಕೀಯ ಕಾರಣಕ್ಕಾಗಿ ಹಿಂದೂ ಧರ್ಮ, ಕೇಸರಿ ಧ್ವಜವನ್ನು ದೂರಬಾರದು. ಚುನಾವಣೆ ಸಂದರ್ಭ ಕೇಸರಿಧಾರಿ ಸ್ವಾಮೀಜಿಗಳ ಕಾಲು ಹಿಡಿಯುವ ಕೆಲ ರಾಜಕಾರಣಿಗಳು, ನಂತರ ಕೇಸರಿ ಬಣ್ಣ, ಬಾವುಟದ ಬಗ್ಗೆ ಅಸಹನೆ ತೋರ್ಪಡಿಸುತ್ತಿದ್ದಾರೆ. ಇಂತಹವರಿಗೆ ಮುಂದಿನ ದಿನಗಳಲ್ಲಿ ಹಿಂದೂ ಸಮಾಜವೇ ಉತ್ತರ ನೀಡಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವ ಹಿಂದೂ ಪರಿಷತ್ ಪ್ರಖಂಡ ಅಧ್ಯಕ್ಷ ಹುಲ್ಲೂರಿಕೊಪ್ಪ ಚಂದ್ರು ವಹಿಸಿದ್ದರು. ವೇದಿಕೆಯಲ್ಲಿ ಕೊಡ್ಲಿಪೇಟೆ ಕಲ್ಲಳ್ಳಿ ಮಠಾಧೀಶರಾದ ರುದ್ರಮುನಿ ಸ್ವಾಮೀಜಿ, ಪರಿಷತ್‌ನ ಜಿಲ್ಲಾ ಸಂಚಾಲಕ ಕೃಷ್ಣಮೂರ್ತಿ, ಕಾರ್ಯಾಧ್ಯಕ್ಷ ಸುರೇಶ್ ಮುತ್ತಪ್ಪ, ಕಾರ್ಯದರ್ಶಿ ಪುದಿಯೊಕ್ಕಡ ರಮೇಶ್, ಆರ್‌ಎಸ್‌ಎಸ್ ಜಿಲ್ಲಾ ಸಂಘಚಾಲಕ್ ಚಕ್ಕೇರ ಮನು, ದುರ್ಗಾವಾಹಿನಿ ಜಿಲ್ಲಾ ಸಂಚಾಲಕಿ ಅಂಬಿಕಾ ಉತ್ತಪ್ಪ, ಮಾತೃ ಮಂಡಳಿ ಸಂಯೋಜಕಿ ಪವಿತ್ರ ಶೇಷಾದ್ರಿ, ಭಜರಂಗದಳ ಜಿಲ್ಲಾ ಸಂಚಾಲಕ್ ಅನೀಶ್, ತಾಲೂಕು ಸಂಚಾಲಕ ನೇಗಳ್ಳೆ ಜೀವನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.