ಮಡಿಕೇರಿ, ಮಾ. ೮ : ಗರಗಂದೂರು ಕಾಜೂರು ಉರೂಸ್ ಹಾಗೂ ಸ್ವಲಾತ್ ಶ್ರದ್ಧಾಭಕ್ತಿಯಿಂದ ಜರುಗಿತು. ಕಾರ್ಯಕ್ರಮದ ನೇತೃತ್ವವನ್ನು ಸಯ್ಯದ್ ಇಲ್ಯಾಸ್ ಸಖಾಫಿ ಅಲ್ ಹೈದ್ರೂಸಿ(ಎರುಮಾಡ್ ತಂಙಳ್) ವಹಿಸಿದ್ದರು. ಫಾರೂಕ್ ಅಹಮ್ಮದ್ ಸಖಾಫಿ ಎರುಮಾಡ್ ಮುಖ್ಯ ಭಾಷಣ ಮಾಡಿದರು.
ಸಮಾರೋಪ ಸಮಾರಂಭದಲ್ಲಿ ಕುಂಞÂ ಮೊಯಿದೀನ್ ಸಖಾಫಿ ಆಲಪುಝ ಮುಖ್ಯ ಪ್ರಭಾಷಣ ಮಾಡಿದರು. ಜಮಾಅತ್ ಅಧ್ಯಕ್ಷÀ ಉಮ್ಮರ್ ಹಾಜಿ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಸಯ್ಯದ್ ಸೈಫುದ್ದೀನ್ ತಂಙಳ್ ಎರುಮಾಡ್, ಸಯ್ಯದ್ ಆದೂರ್ ತಂಙಳ್, ಅಶ್ರಫ್ ಸಖಾಫಿ ಕುಂಬಕೋಡ್, ಬಷೀರ್ ಸಖಾಫಿ ಮಾದಾಪುರ, ಆಬಿದ್ ಮಿಸ್ಬಾಹಿ ಹೊಸತೋಟ, ಬಷೀರ್ ಸಖಾಫಿ ಸುಳ್ಯ, ಅಬ್ದುಲ್ಲ ಸಖಾಫಿ ವಯನಾಡ್, ಹಮೀದ್ ಮುಸ್ಲಿಯಾರ್, ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಎಂ.ಎ.ಉಸ್ಮಾನ್ ಸುಂಟಿಕೊಪ್ಪ, ಹನೀಫ್ ಗರಗಂದೂರು, ಮುಹಮ್ಮದ್ ಅಲಿ ಸಖಾಫಿ ಮಾದಾಪುರ, ಆಬಿದ್ ಮಿಸ್ಬಾಹಿ, ರಫೀಕ್ ಸಅದಿ ಅಂಬಟ್ಟಿ, ಬುರ್ಹಾನುದ್ದೀನ್ ಸಖಾಫಿ ಕೊಟ್ಟಮುಡಿ, ಎಂ.ಎ.ಉಸ್ಮಾನ್, ಲತೀಫ್ ಸುಂಟಿಕೊಪ್ಪ, ಹನೀಫ್ ಗರಗಂದೂರು ಮತ್ತಿತರರು ಉಪಸ್ಥಿತರಿದ್ದರು.
ನಮಾಜ಼್ ನ ನಂತರÀ ಮೌಲೂದ್ ಪಾರಾಯಣ ನಡೆಸಿ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಮಾಡಲಾಯಿತು.