ಚೆಟ್ಟಳ್ಳಿ, ಮಾ. ೭: ಮಾಜಿ ಸೈನಿಕರು ಹಾಗೂ ಅವಲಂಬಿತ ಕುಟುಂಬದಲ್ಲಿ ಹಲವು ಸಮಸ್ಯೆಗಳಿದ್ದು, ಅವನ್ನು ಜಿಲ್ಲಾಧಿಕಾರಿಗಳ ಮೂಲಕ ಸರಕಾರದ ಗಮನಕ್ಕೆ ತರಲು ತಾ.೧೧ರೊಳಗೆ ಮಾಹಿತಿ ನೀಡುವಂತೆ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಕೊಡಗು ಜಿಲ್ಲೆಯ ಅಧ್ಯಕ್ಷ ಕೊಟ್ಟುಕತ್ತಿರ ಸೋಮಣ್ಣ ಮನವಿ ಮಾಡಿದ್ದಾರೆ.

ಸೇನೆಯಲ್ಲಿ ದುಡಿಯುತ್ತಿರುವ ಹಾಗೂ ನಿವೃತ್ತರಾದ ಸೈನಿಕರ ಹಾಗೂ ಅವಲಂಬಿತ ಕುಟುಂಬದವರ ಜಾಗದ ದಾಖಲಾತಿಯ ಸಮಸ್ಯೆ, ಸರಕಾರದ ಸೌಲಭ್ಯಗಳು ದೊರಕದೇ ಇರುವುದು ಹೀಗೆ ಹತ್ತು ಹಲವು ಸಮಸ್ಯೆಗಳಿದ್ದು, ಅದರ ಬಗ್ಗೆ ಸೈನಿಕ ಕಲ್ಯಾಣ ಮತ್ತು ಪನರ್ವಸತಿ ಇಲಾಖೆ, ಜಿಲ್ಲಾಧಿಕಾರಿಗಳಿಗೂ ಸಂಫದ ಪರವಾಗಿ ಹಲವು ಬಾರಿ ಮನವಿ ಮಾಡಿದ್ದೆವು. ಇದಕ್ಕೆ ಸ್ಪಂದಿಸಿದ್ದು, ತಾ. ೧೧ರೊಳಗೆ ಮಾಜಿ ಸೈನಿಕರ ಕುಂದು ಕೊರತೆಗಳನ್ನು ಸಲ್ಲಿಸಲು ಸಿದ್ಧತೆ ನಡೆಯುತ್ತಿದೆ. ತಾ.೧೮ರಂದು ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ಪೂರ್ವಾಹ್ನ ೧೧ ಗಂಟೆಗೆ ಸಭೆ ಕರೆಯಲಾಗಿದ್ದು, ಅಂದು ಸಂಘದ ಪದಾಧಿಕಾರಿಗಳು ಯೋಧರ ಕುಟುಂಬದ ಸಮಸ್ಯೆಯನ್ನು ಕೂಲಂಕಶವಾಗಿ ತಿಳಿಸಲಾಗುವುದು. ಮಾಜಿ ಸೈನಿಕರು ಹಾಗೂ ಅವಲಂಬಿತ ಕುಟುಂಬದ ಸಮಸ್ಯೆಗಳನ್ನು ದಾಖಲೆ ಸಹಿತ ಸಲ್ಲಿಸಲು ಅವಕಾ± Àವಿರುವುದರಿಂದ ಸಮಸ್ಯೆಗಳನ್ನು ಅರ್ಜಿಯ ಮೂಲಕ ಸಂಘಕ್ಕೆ ಸಲ್ಲಿಸಬೇಕಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೊಟ್ಟುಕತ್ತಿರ ಸೋಮಣ್ಣ- ೯೪೪೮೪ ೪೭೧೫೮ ಅವರನ್ನು ಸಂಪರ್ಕಿಸಲು ಕೋರಲಾಗಿದೆ.