ಅನ್ನೀರ ಹರೀಶ್ ಮಾದಪ್ಪ ಶ್ರೀಮಂಗಲ, ಮಾ. ೬: ಅಲ್ಪಸಂಖ್ಯಾತರಾಗಿರುವ ಕೊಡವ ಸಮುದಾಯದ ವಿಶಿಷ್ಟ ಸಂಸ್ಕೃತಿ- ಪರಂಪರೆಯನ್ನು ಸರಕಾರ ಮತ್ತು ಕೊಡವ ಸಮುದಾಯ ವಿಶೇಷ ಮುತುವರ್ಜಿ ವಹಿಸಿ ಸಂರಕ್ಷಣೆ ಮಾಡುವುದರೊಂದಿಗೆ ಕೊಡಗಿನ ಪರಿಸರವನ್ನು ಕಾಪಾಡಬೇಕಾಗಿದೆ ಎಂದು ನ್ಯಾಷನಲ್ ಸೆಕ್ಯುರಿಟಿ ಗಾರ್ಡ್ ನ (ಎನ್.ಎಸ್.ಜಿ) ಡೈರೆಕ್ಟರ್ ಜನರಲ್ ಮನೆಯಪಂಡ ಎ. ಪವನ್ ಗಣಪತಿ ಪ್ರತಿಪಾದಿಸಿದರು.
ಪೊನ್ನಂಪೇಟೆ ಕೊಡವ ಸಮಾಜದ ಆಶ್ರಯದಲ್ಲಿ ಪೊನ್ನಂಪೇಟೆ ರಿಕ್ರಿಯೇಶನ್ ಕ್ಲಬ್ ಸಭಾಂಗಣದಲ್ಲಿ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಉನ್ನತ ಶಿಕ್ಷಣ ಮತ್ತು ಉದ್ಯೋಗ ಹಿನ್ನಲೆ ೪೧ ವರ್ಷಗಳ ಹಿಂದೆ ಕೊಡಗಿನಿಂದ ತೆರಳಿದ್ದೆ. ಈಗಿನ ಕೊಡಗು ತುಂಬಾ ಬದಲಾಗಿದೆ. ಆಗ ಎಲ್ಲಾ ಗೊತ್ತಿರುವ ಮುಖಗಳಿತ್ತು, ಈಗ ತ್ಯಾಜ್ಯ ಸಂಗ್ರಹ, ಪರಿಸರ ನಾಶ, ಹೊಸ ಮುಖಗಳು ಕಾಣುತ್ತಿವೆ. ಬದಲಾವಣೆ ಅಗತ್ಯ ಆದರೇ ಅನಗತ್ಯ ಮರ ಕಡಿಯುವುದು, ಪರಿಸರ ನಾಶದಿಂದ ಪ್ರಾಕೃತಿಕ ವಿಕೋಪಕ್ಕೆ ಕಾರಣ ವಾಗುತ್ತದೆ. ಪ್ರಾಕೃತಿಕ ವಿಕೋಪದಿಂದ ದೇಶದ ಹಲವು ಪ್ರದೇಶ ನಾಶವಾಗಿರುವ ಉದಾಹರಣೆ ಇದೆ. ಕೊಡಗು ಪ್ರಾಕೃತಿಕ ವಿಕೋಪದ ಜಿಲ್ಲೆಯಾಗಿರುವುದು ವಿಪರ್ಯಾಸ, ಇಲ್ಲಿ ರಾಷ್ಟಿçÃಯ ಪ್ರಾಕೃತಿಕ ವಿಕೋಪ ಪರಿಹಾರ ತಂಡವನ್ನು ನಿಯೋಜಿಸು ವಂತೆ ಆಗಿದೆ. ಪರಿಸರ ಕಾಪಾಡಿ ಕೊಳ್ಳುವ ಚಿಂತನೆ ಮೂಲಕ ಕೊಡಗನ್ನು ಉಳಿಸಿಕೊಳ್ಳಬೇಕಿದೆ. ಕೊಡಗಿನಲ್ಲಿ
(ಮೊದಲ ಪುಟದಿಂದ) ವನ್ಯಪ್ರಾಣಿ-ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು.
ಕಠಿಣ ಪರಿಶ್ರಮ ಅಗತ್ಯ: ಯಾರು ಏನನ್ನಾದರೂ ಸಾಧನೆ ಮಾಡ ಬಹುದು, ಅದಕ್ಕೆ ಕಠಿಣ ಪರಿಶ್ರಮ ಅಗತ್ಯ ಎಂದು ಅಭಿಪ್ರಾಯಪಟ್ಟರು. ಬೇರೆಯವರಿಂದ ಕಲಿಯಬೇಕಾಗಿದ್ದು, ಇನ್ನೊಬ್ಬರ ತಪ್ಪನ್ನು ನೋಡಿ ಕಲಿಯಬೇಕಾಗಿದ್ದು ಇರುತ್ತದೆ ಎಂದರು.
ಕೊಡವರು ಮತ್ತು ಕೊಡಗು ಜಿಲ್ಲೆ ವಿಶೇಷತೆ ಹೊಂದಿದ್ದು, ಕೊಡವ ಜನಾಂಗವನ್ನು ಯಶಸ್ವಿ ಜನಾಂಗವೆAದು ಗುರುತಿಸಲಾಗಿದೆ. ಸರಕಾರಿ ಸೇವೆಯ ಲ್ಲಿರುವ ಕೊಡವ ಅಧಿಕಾರಿಗಳು ಕ್ಲಿಷ್ಟಕರ ಸಮಯ ದಲ್ಲಿಯೂ ಕ್ಷಿಪ್ರಗತಿಯಲ್ಲಿ ನಿರ್ಧಾರ ಕೈಗೊಳ್ಳುವ ಪ್ರವೃತ್ತಿಯಿಂದ ಮೆಚ್ಚುಗೆಗಳಿಸಿದ್ದಾರೆ ಎಂದರು.
ಕೊಡಗಿನಲ್ಲಿ ಸೇನೆಗೆ ಸೇರುವವರÀ ಸಂಖ್ಯೆ ಕಡಿಮೆಯಾಗಿದೆ.ಕಾರ್ಪೊರೇಟ್ ಕಂಪೆನಿಗಳಲ್ಲಿ ಉದ್ಯೋಗದತ್ತ ಹೆಚ್ಚಿನ ಗಮನ ನೀಡುತ್ತಿದ್ದಾರೆ. ಜಿಲ್ಲೆಯ ಹಿತಾಸಕ್ತಿ ಕಾಪಾಡಲು ಸರಕಾರದ ಮುಖ್ಯ ವಾಹಿನಿಯಲ್ಲಿ ಕೊಡಗಿನವರು ಗುರುತಿಸಿಕೊಳ್ಳಬೇಕಾಗಿದೆ. ದೇಶದ ಮಾಧ್ಯಮ, ಉನ್ನತ ಸರಕಾರಿ ಸೇವೆಯಲ್ಲಿ ತೊಡಗಿಸಿಕೊಂಡಾಗ ದೇಶದಲ್ಲಿ ಸಣ್ಣ ಜಿಲ್ಲೆಯಾದ ಕೊಡಗಿನ ಬೇಕು ಬೇಡಿಕೆ ಬಗ್ಗೆ ಗಮನ ಸೆಳೆಯಲು ಸಹಕಾರಿಯಾಗಲಿದೆ ಎಂದರು.
ಪಾರ್ಸಿ ಜನಾಂಗದAತೆ ಕೊಡವ ಜನಾಂಗ ಅಲ್ಪಸಂಖ್ಯಾತ ಜನಾಂಗವಾಗಿದೆ. ಸರಕಾರದೊಂದಿಗೆ ಅಥವಾ ಸರಕಾರದ ನೆರವು ಇಲ್ಲದೆಯೂ ಕೊಡವ ಜನಾಂಗವನ್ನು ಕಾಪಾಡುವ ಯೋಜನೆ ರೂಪಿಸಬೇಕಾಗಿದೆ. ಈ ನಿಟ್ಟಿನಲ್ಲಿ ಕೊಡವ ಸಮಾಜ, ಸಂಘ ಸಂಸ್ಥೆ ಮುತುವರ್ಜಿ ವಹಿಸಬೇಕಾಗಿದೆ ಎಂದು ಪವನ್ ಗಣಪತಿ ಅಭಿಪ್ರಾಯಪಟ್ಟರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಚೊಟ್ಟೆಕ್'ಮಾಡ ರಾಜೀವ್ ಬೋಪಯ್ಯ ಅವರು ಮಾತನಾಡಿ, ಕೊಡಗನ್ನು ಕಾಪಾಡಬೇಕು ಎನ್ನುವ ನಿಟ್ಟಿನಲ್ಲಿ ಕೃಷಿಯೇತರ ಭೂಪರಿವರ್ತನೆ, ವಿನಾಶಕಾರಿ ಯೋಜನೆಗಳ ವಿರುದ್ಧ ದ್ವನಿ ಎತ್ತುವವರನ್ನು ಕೆಲವು ಮುಖಂಡರು, ಕೆಲವು ಗುಂಪು ನಕಲಿ ಪರಿಸರವಾದಿ ಹಣೆಪಟ್ಟಿ ಕಟ್ಟಿ ಜಿಲ್ಲೆಯಿಂದ ಗಡಿಪಾರು ಮಾಡಲು ಕರೆ ನೀಡುತ್ತಾರೆ. ಜಿಲ್ಲೆಯ ಜನರ ಅಭಿಪ್ರಾಯ ಕೇಳಲು ಜಿಲ್ಲಾಧಿಕಾರಿಗಳು ಕರೆದ ಸಭೆಯಲ್ಲಿ ಕೊಡಗಿನ ಸಂರಕ್ಷಣೆಗೆ ಮಾತನಾಡಿದರೆ ಅಂತವರ ಮೇಲೆ ಕೇಸು ಹಾಕುತ್ತಾರೆ. ಇಂತದರ ನಡುವೆ ಉನ್ನತ ಸ್ಥಾನದಲ್ಲಿರುವ ಪವನ್ ಗಣಪತಿ ಅವರು ದೇಶದೊಂದಿಗೆ ಕೊಡಗಿನ ಉಳಿವಿನ ಬಗ್ಗೆ ಪ್ರತಿಪಾದಿಸಿರುವುದು ಯುವ ಪೀಳಿಗೆಗೆ ಪ್ರೇರಣೆಯಾಗಿದೆ ಎಂದರು. ಫಿ. ಮಾ. ಕಾರ್ಯಪ್ಪ, ಜನರಲ್ ತಿಮ್ಮಯ್ಯ, ಸ್ಕಾ÷್ವಡ್ರನ್ ಲೀಡರ್ ದೇವಯ್ಯ, ಮಂಗೇರಿರ ಮುತ್ತಣ್ಣ ಸೇರಿದಂತೆ ಮಹಾನ್ ನಾಯಕರ ಮೂಲಕ ಕೊಡವರನ್ನು ದೇಶ, ವಿದೇಶದಲ್ಲಿ ಗುರುತಿಸಲಾಗಿದೆ, ಇವರೆಲ್ಲರೂ ನಮಗೆ ದೊಡ್ಡ ಕಿರೀಟದಂತೆ ಹಾಗೆಯೇ ಮನೆಯಪಂಡ ಪವನ್ ಗಣಪತಿ ಅವರ ಎನ್. ಎಸ್.ಜಿ. ಅತ್ಯುನ್ನತ ಹುದ್ದೆಯಲ್ಲಿರುವುದು ಕೊಡಗು ಮತ್ತು ಕೊಡವ ಜನಾಂಗಕ್ಕೆ ಹೆಮ್ಮೆಯಾಗಿದೆ ಎಂದರು.
ಈ ಸಂದರ್ಭ ಪೊನ್ನಂಪೇಟೆ ಕೊಡವ ಸಮಾಜ, ಪೊನ್ನಂಪೇಟೆ ನಾಗರಿಕ ವೇದಿಕೆ, ಟಿ. ಶೆಟ್ಟಿಗೇರಿ ಕೊಡವ ಸಮಾಜ, ಕ್'ಗ್ಗಟ್ಟ್ನಾಡ್ ಕೊಡವ ಹಿತರಕ್ಷಣಾ ಬಳಗದಿಂದ ಪವನ್ ಗಣಪತಿ ಅವರ ತಂದೆ- ತಾಯಿ ಮನೆಯಪಂಡ ಅಪ್ಪಯ್ಯ-ಪ್ರೇಮಲತಾ ಅವರನ್ನು ಸನ್ಮಾನಿಸಲಾಯಿತು.
ಚಿರಿಯಪಂಡ ಸಾಕ್ಷಿ ಪ್ರಾರ್ಥಿಸಿದರು.ಕೊಡವ ಸಮಾಜದ ಖಜಾಂಚಿ ಮೂಕಳೆರ ಲಕ್ಷ್ಮಣ ನಿರೂಪಿಸಿ,ಕೊಡವ ಸಮಾಜ ಒಕ್ಕೂಟದ ಮಾಜಿ ಕಾರ್ಯದರ್ಶಿ ವಕೀಲ ಮಾಚಿಮಂಡ ಸುರೇಶ್ ಅವರು ಪವನ್ ಗಣಪತಿ ಅವರ ವ್ಯಕ್ತಿ ಪರಿಚಯ ಮಾಡಿದರು.
ವೇದಿಕೆಯಲ್ಲಿದ್ದ ನಿವೃತ್ತ ಪೊಲೀಸ್ ಸೂಪರಿಟೆಂಡೆAಟ್ ಮುಕ್ಕಾಟೀರ ಚೋಟು ಅಪ್ಪಯ್ಯ,ಕೊಡವ ಸಮಾಜ ನ್ಯಾಯಪೀಠ ಅಧ್ಯಕ್ಷ ಚಿರಿಯಪಂಡ ಉಮೇಶ್ ಉತ್ತಪ್ಪ, ರಾಜ್ಯ ಅರಣ್ಯ ನಿಗಮದ ಮಾಜಿ ಉಪಾಧ್ಯಕ್ಷೆ ಮಾಂಗೇರ ಪದ್ಮಿನಿ ಪೊನ್ನಪ್ಪ, ಪೊನ್ನಂಪೇಟೆ ಕೊಡವ ಸಮಾಜ ಕ್ಲಬ್‌ನ ಗೌರವ ಅಧ್ಯಕ್ಷ ಚೆಪ್ಪುಡಿರ ಪೊನ್ನಪ್ಪ, ಮತ್ತು ಸಭೆಯಲ್ಲಿದ್ದ ಬಿ.ಜೆ.ಪಿ.ಮಾಜಿ ಜಿಲ್ಲಾಧ್ಯಕ್ಷ ಮಾಚಿಮಾಡ ರವೀಂದ್ರ,ನಿವೃತ ಕರ್ನಲ್ ಆಲೆಮಾಡ ಕರುಂಬಯ್ಯ, ನಾಗರಿಕ ವೇದಿಕೆಯ ಎರ್ಮು ಹಾಜಿ, ಕ್'ಗ್ಗಟ್ಟ್ ನಾಡ್ ಕೊಡವ ಹಿತರಕ್ಷಣಾ ಬಳಗದ ಅಧ್ಯಕ್ಷ ಚಿರಿಯಪಂಡ ರಾಜ ನಂಜಪ್ಪ, ಕಳಕಂಡ ಸುಮತಿ ನಾಣಯ್ಯ, ಅವರು ಪವನ್ ಗಣಪತಿ ಅವರ ಸೇವೆ ಬಗ್ಗೆ ಮಾತನಾಡಿದರು.
ಯುಕೊ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ, ಕರ್ನಲ್ ಚೆಪ್ಪುಡಿರ ಮುತ್ತಣ್ಣ, ಕೊಡವ ಸಮಾಜ ಮಾಜಿ ಅಧ್ಯಕ್ಷ ಸುಳ್ಳಿಮಾಡ ಗೋಪಾಲ್ ತಿಮ್ಮಯ್ಯ, ಮಚ್ಚಮಾಡ ಆನೀಶ್ ಮಾದಪ್ಪ, ಟಿ. ಶೆಟ್ಟಿಗೇರಿ ಕೊಡವ ಸಮಾಜದ ಅಧ್ಯಕ್ಷ ಚೊಟ್ಟೆಯಾಂಡಮಾಡ ವಿಶ್ವನಾಥ್, ಕಾರ್ಯದರ್ಶಿ ಮನ್ನೆರ ರಮೇಶ್, ನಿರ್ದೇಶಕಿ ಚಂಗುಲAಡ ಅಶ್ವಿನಿ ಸತೀಶ್, ನಾಗರಿಕ ವೇದಿಕೆಯ ಪೊಕ್ಕಳಿಚಂಡ ಪೂಣಚ್ಚ, ಮತ್ರಂಡ ಅಪ್ಪಚ್ಚು, ಮೂಕಳೆರ ಕುಶಾಲಪ್ಪ, ಚೆಪ್ಪುಡಿರ ಸೋಮಯ್ಯ, ಪೊನ್ನಂಪೇಟೆ ಕೊಡವ ಸಮಾಜದ ಆಡಳಿತ ಮಂಡಳಿ ಸದಸ್ಯರು, ಬಿರುನಾಣಿ ಕೊಡವ ಸಮಾಜದ ಅಧ್ಯಕ್ಷ ಮಲ್ಲೆಂಗಡ ಪೆಮ್ಮಯ್ಯ, ಖಜಾಂಚಿ ಕಾಯಪಂಡ ಸುನಿಲ್, ಕ್'ಗ್ಗಟ್ಟ್ನಾಡ್ ಕೊಡವ ಹಿತರಕ್ಷಣಾ ಬಳಗದ ಕಾರ್ಯದರ್ಶಿ ಗಾಂಡAಗಡ ಕೌಶಿಕ್ ಮತ್ತು ಸದಸ್ಯರು ಹಾಜರಿದ್ದರು.