ಮಡಿಕೇರಿ, ಮಾ. ೬ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾ ಸ್ತಿçÃಶಕ್ತಿ ಒಕ್ಕೂಟ ಇವರ ಸಹಯೋಗದಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಸಮರ್ಪಕ ಅನುಷ್ಠಾನ ಮತ್ತು ಸಾರ್ವಜನಿಕರಲ್ಲಿ ವ್ಯಾಪಕ ಅರಿವು ಮೂಡಿಸುವ ವೀಡಿಯೋ ಆನ್ ವೀಲ್ಸ್ ವಾಹನದ ಮುಖಾಂತರ ಬಾಲ್ಯ ವಿವಾಹ ನಿಷೇಧ ಅಭಿಯಾನಕ್ಕೆ ನಗರದ ಗಾಂಧಿ ಮೈದಾನದಲ್ಲಿ ಗಣ್ಯರು ಚಾಲನೆ ನೀಡಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧಿಶರಾದ ಸುಬ್ರಮಣ್ಯ ಅವರು ಮಾತನಾಡಿ ವೀಡಿಯೋ ಆನ್ ವೀಲ್ಸ್ ವಾಹನದ ಮುಖಾಂತರ ಬಾಲ್ಯ ವಿವಾಹ ನಿಷೇಧ ಅಭಿಯಾನ ಕಾರ್ಯಕ್ರಮ ಸರ್ಕಾರ ಆಯೋಜಿಸಿರುವುದು ಶ್ಲಾಘನೀಯವಾಗಿದೆ. ಬಾಲ್ಯ ವಿವಾಹ ಪದ್ದತಿಯು ಸಮಾಜಕ್ಕೆ ಅಂಟಿದ ಪಿಡುಗು. ಇಂತಹ ಪಿಡುಗನ್ನು ಬೇರು ಸಮೇತ ನಿರ್ಮೂಲನೆ ಮಾಡಬೇಕಾದರೆ ಸಾರ್ವಜನಿಕರಲ್ಲಿ ಬಾಲ್ಯ ವಿವಾಹ ಕಾಯ್ದೆ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸುವುದು ಅವಶ್ಯಕವಾಗಿದೆ ಎಂದರು.

ಯಾವುದೇ ಒಂದು ಕಾಯ್ದೆಯನ್ನು ಅನುಷ್ಠಾನಗೊಳಿಸುವ ಮುಂಚಿತವಾಗಿ ಆ ಕಾಯ್ದೆಯ ಉದ್ದೇಶವನ್ನು ಜನಸಾಮಾನ್ಯರಿಗೆ ಅರಿವು ಮೂಡಿಸಿದ್ದಲ್ಲಿ ಕಾಯ್ದೆಯು ಸಫಲದಾಯಕವಾಗುತ್ತದೆ.

(ಮೊದಲ ಪುಟದಿಂದ) ಇಂತಹ ಕಾಯ್ದೆಗಳನ್ನು ಅನುಷ್ಠಾನಗೊಳಿಸಲು ಮುಖ್ಯ ಕಾರಣವೆಂದರೆ ಭಾರತ ದೇಶವು ಅಂರ‍್ರಾಷ್ಟಿçÃಯ ಒಡಂಬಡಿಕೆಗೆ ಸಹಿ ಮಾಡಿದೆ. ಮಹಿಳೆಯರ ಮತ್ತು ಮಕ್ಕಳ ರಕ್ಷಣೆಯು ಪ್ರತಿಯೊಬ್ಬರ ಜವಬ್ದಾರಿ ಮತ್ತು ಕರ್ತವ್ಯವಾಗಿದೆ ಎಂದು ಅವರು ಹೇಳಿದರು.

ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ ಸರ್ಕಾರದಿಂದ ಸಾರ್ವಜನಿಕರಲ್ಲಿ ವ್ಯಾಪಕ ಅರಿವು ಮೂಡಿಸಲು ಈ ಅಭಿಯಾನವು ಅತ್ಯುತ್ತಮವಾಗಿದೆ. ಬಾಲ್ಯ ವಿವಾಹ ಪದ್ಧತಿಯು ಇನ್ನು ಕೆಲವು ಕಡೆ ಜಾರಿಯಲ್ಲಿದೆ. ತಂದೆ- ತಾಯಿಗೆ ಹೆಣ್ಣು ಮಕ್ಕಳು ಹೊರೆ ಎಂದು ಬಾವಿಸಿ ಅವರಿಗೆ ೧೪ ರಿಂದ ೧೫ ವರ್ಷ ತುಂಬಿದ ತಕ್ಷಣ ಮದುವೆ ಮಾಡುತ್ತಿದ್ದರು. ಆದರೆ ಕಾಲ ಈಗ ಬದಲಾಗಿದ್ದು, ‘ಬೇಟಿ ಬಚ್ಚಾವೋ ಬೇಟಿ ಪಡಾವೋ’ ಯೋಜನೆ ಸೇರಿದಂತೆ ಅನೇಕ ಯೋಜನೆಗಳು ಹೆಣ್ಣು ಮಕ್ಕಳ ಭವಿಷ್ಯಕಾಗಿಯೇ ಅನುಷ್ಠಾನ ಗೊಳಿಸಲಾಗಿದೆ ಎಂದು ಹೇಳಿದರು.

ಬಾಲ್ಯ ವಿವಾಹದಿಂದ ಮಕ್ಕಳ ಭವಿಷ್ಯ ಕುಂಠಿತಗೊಳ್ಳುತ್ತಿದೆ. ಇಂತಹ ಅನಿಷ್ಟ ಪದ್ಧತಿ ಸಮಾಜದಲ್ಲಿ ಹೆಮ್ಮರವಾಗಿ ಬೆಳೆಯುತ್ತಿರುವುದನ್ನು ಎಲ್ಲರೂ ಒಗ್ಗೂಡಿ ಶಾಶ್ವತವಾಗಿ ನಿರ್ಮೂಲನೆ ಮಾಡಬೇಕು. ಹೆಣ್ಣು ಮಕ್ಕಳ ಕನಸನ್ನು ನನಸಾಗಿಸಲು ಹಾಗೂ ಸದೃಢ ಸಮಾಜವನ್ನು ನಿರ್ಮಾಣ ಮಾಡಲು ಪ್ರತಿಯೊಬ್ಬರು ಕೈ ಜೋಡಿಸಬೇಕು ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಎಂ. ಮುದ್ದಣ್ಣ ಮಾತನಾಡಿ ಜಿಲ್ಲೆಯ ಪ್ರತಿ ಹಳ್ಳಿ ಹಳ್ಳಿಗಳಲ್ಲಿಯೂ ಬಾಲ್ಯ ವಿವಾಹ ನಿಷೇಧ ಕುರಿತು ಜಾಗೃತಿ ಮೂಡಿಸುತ್ತಿರುವುದು ಉತ್ತಮ ಹೆಜ್ಜೆಯಾಗಿದೆ. ಮಹಿಳೆಯರು ಮತ್ತು ಮಕ್ಕಳ ಮೇಲೆ ದೌರ್ಜನ್ಯಗಳು ಹಾಗೂ ಬಾಲ್ಯ ವಿವಾಹ ನಡೆಯುವ ಘಟನೆಗಳು ಕಂಡು ಬಂದಲ್ಲಿ ಕೂಡಲೇ ಮಕ್ಕಳ ಸಹಾಯವಾಣಿ ೧೦೯೮ ಗೆ ಕರೆ ಮಾಡಬಹುದು. ಹಾಗೂ ಮಕ್ಕಳ ರಕ್ಷಣಾ ಘಟಕಕ್ಕೆ ಅಥವಾ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ನೇರವಾಗಿ ಬಂದು ಮಾಹಿತಿ ನೀಡಿದಲ್ಲಿ ತಕ್ಷಣ ಕಾನೂನು ರೀತಿಯ ಕ್ರಮ ತೆಗದುಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅರುಂಧತಿ ಪ್ರಮಾಣ ವಚನವನ್ನು ಬೋಧಿಸಿದರು.

ಜಿಲ್ಲಾಧಿಕಾರಿ ಡಾ. ಬಿ.ಸಿ.ಸತೀಶ, ಜಿ.ಪಂ. ಸಿಇಒ ಭಂವರ್ ಸಿಂಗ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ. ಅಯ್ಯಪ್ಪ, ನಗರಸಭೆ ಉಪಾಧ್ಯಕ್ಷೆ ಸವಿತಾ ರಾಕೇಶ್, ಕಾರ್ಯಕ್ರಮ ಅಧಿಕಾರಿ ಪೂಣಚ್ಚ, ಸ್ತಿçÃಶಕ್ತಿ ಒಕ್ಕೂಟದ ಅಧ್ಯಕ್ಷೆ ರೆಹನಾ ಸುಲ್ತಾನ್, ಅಧಿಕಾರಿಗಳು ಇತರರು ಇದ್ದರು.

ಪ್ರಚಾರಂದೋಲನ ವಿವರ : ತಾ. ೭ ರಂದು (ಇಂದು) ಬೆಳಿಗ್ಗೆ ೧೦.೩೦ ಗಂಟೆಗೆ ಬೆಟ್ಟಗೇರಿ ಶ್ರೀ ಉದಯ ಪ್ರೌಢಶಾಲೆ, ಬೆ. ೧೧.೩೦ ಗಂಟೆಗೆ ಚೇರಂಬಾಣೆಯ ಅರುಣ ಪದವಿ ಪೂರ್ವ ಕಾಲೇಜು, ಮಧ್ಯಾಹ್ನ ೧೨.೩೦ ಗಂಟೆಗೆ ಭಾಗಮಂಡಲ ತಾವೂರು ಶ್ರೀ ಪದವಿ ಪೂರ್ವ ಕಾಲೇಜು, ಮಧ್ಯಾಹ್ನ ೨ ಗಂಟೆಗೆ ನಾಪೋಕ್ಲು ಸರ್ಕಾರಿ ಪ್ರೌಢಶಾಲೆ, ಮಧ್ಯಾಹ್ನ ೩.೩೦ ಗಂಟೆಗೆ ನೆಲಜಿ ಸರ್ಕಾರಿ ಪ್ರೌಢಶಾಲೆ, ತಾ. ೮ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಚೆಟ್ಟಳ್ಳಿ ಗ್ರಾ.ಪಂ., ಬೆ. ೧೧.೩೦ ಗಂಟೆಗೆ ಸುಂಟಿಕೊಪ್ಪ ಅಂಬೇಡ್ಕರ್ ಭವನ, ಮಧ್ಯಾಹ್ನ ೧೨.೩೦ ಗಂಟೆಗೆ ಮಾದಾಪುರ ಗ್ರಾ.ಪಂ., ಮಧ್ಯಾಹ್ನ ೨ ಗಂಟೆಗೆ ಬೇಳೂರು ಗಣಪತಿ ದೇವಸ್ಥಾನ, ಮಧ್ಯಾಹ್ನ ೩.೩೦ ಗಂಟೆಗೆ ಹಾನಗಲ್ಲು ಗ್ರಾ.ಪಂ., ತಾ. ೯ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಶಾಂತಳ್ಳಿ ಸಮುದಾಯ ಭವನ, ಬೆಳಿಗ್ಗೆ ೧೧.೩೦ ಗಂಟೆಗೆ ಸೋಮವಾರಪೇಟೆಯ ಸೆಂಟ್ ಜೋಸೆಫ್ ಕಾಲೇಜು, ಮಧ್ಯಾಹ್ನ ೧೨.೩೦ ಗಂಟೆಗೆ ಸೋಮವಾರಪೇಟೆ ಜೆ.ಸಿ.ವೇದಿಕೆ (ತಾಲೂಕು ಕಚೇರಿ ಹತ್ತಿರ), ಮಧ್ಯಾಹ್ನ ೨ ಗಂಟೆಗೆ ಗೌಡಳ್ಳಿ ಹಳೇ ಪೋಸ್ಟ್ ಆಫೀಸ್, ಮಧ್ಯಾಹ್ನ ೩.೩೦ ಗಂಟೆಗೆ ಶನಿವಾರಸಂತೆಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತ, ತಾ. ೧೦ ರಂದು ಬೆ.೧೦.೩೦ ಗಂಟೆಗೆ ಕೊಡ್ಲಿಪೇಟೆ ಗ್ರಾ.ಪಂ., ಬೆ. ೧೧.೩೦ ಗಂಟೆಗೆ ಆಲೂರು ಸಿದ್ದಾಪುರ ಗ್ರಾ.ಪಂ., ಮಧ್ಯಾಹ್ನ ೧೨.೩೦ ಗಂಟೆಗೆ ನೇರುಗಳಲೆ ಗ್ರಾ.ಪಂ. (ಅಬ್ಬೂರುಕಟ್ಟೆ), ಮಧ್ಯಾಹ್ನ ೨ ಗಂಟೆಗೆ ಕುಶಾಲನಗರ ತಾಲೂಕಿನ ಶಿರಂಗಾಲ ನಂದಿನಿ ಸಭಾಂಗಣ, ಮಧ್ಯಾಹ್ನ ೩.೩೦ ಗಂಟೆಗೆ ಹೆಬ್ಬಾಲೆ ಗ್ರಾ.ಪಂ., ತಾ. ೧೧ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಕುಶಾಲನಗರ ಜೂನಿಯರ್ ಕಾಲೇಜು, ಬೆ: ೧೧.೩೦ ಗಂಟೆಗೆ ಕೂಡು ಮಂಗಳೂರು ಗ್ರಾ.ಪಂ., ಮಧ್ಯಾಹ್ನ ೧೨.೩೦ ಗಂಟೆಗೆ ಕುಶಾಲನಗರ ಬಸ್ ನಿಲ್ದಾಣ, ಮಧ್ಯಾಹ್ನ ೨ ಗಂಟೆಗೆ ಗುಡ್ಡೆ ಹೊಸೂರು ಗ್ರಾ.ಪಂ., ಮಧ್ಯಾಹ್ನ ೩.೩೦ ಗಂಟೆಗೆ ನೆಲ್ಲಿ ಹುದಿಕೇರಿ ಗ್ರಾ.ಪಂ., ತಾ. ೧೨ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ವೀರಾಜಪೇಟೆ ತಾಲೂಕಿನ ಸಿದ್ದಾಪುರ, ಬೆ: ೧೧.೩೦ ಗಂಟೆಗೆ ಮಾಲ್ದಾರೆ, ಮಧ್ಯಾಹ್ನ ೧೨.೩೦ ಗಂಟೆಗೆ ಚೆನ್ನಯ್ಯನಕೋಟೆ, ಮಧ್ಯಾಹ್ನ ೨ ಗಂಟೆಗೆ ಪಾಲಿಬೆಟ್ಟ, ಮಧ್ಯಾಹ್ನ ೩.೩೦ ಗಂಟೆಗೆ ಅಮ್ಮತ್ತಿ, ತಾ. ೧೩ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ವೀರಾಜಪೇಟೆ ಪಟ್ಟಣ, ಬೆ: ೧೧.೩೦ ಗಂಟೆಗೆ ವೀರಾಜಪೇಟೆ ಪಟ್ಟಣ, ಮಧ್ಯಾಹ್ನ ೧೨.೩೦ ಗಂಟೆಗೆ ಗೋಣಿಕೊಪ್ಪ, ಮಧ್ಯಾಹ್ನ ೨ ಗಂಟೆಗೆ ಗೋಣಿಕೊಪ್ಪ, ಮಧ್ಯಾಹ್ನ ೩.೩೦ ಗಂಟೆಗೆ ತಿತಿಮತಿ, ತಾ. ೧೪ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಬಾಳೆಲೆ, ಬೆಳಗ್ಗೆ ೧೧.೩೦ ಗಂಟೆಗೆ ಕಾನೂರು, ಮಧ್ಯಾಹ್ನ ೧೨.೩೦ ಗಂಟೆಗೆ ನಾಲ್ಕೇರಿ, ಮಧ್ಯಾಹ್ನ ೨ ಗಂಟೆಗೆ ನಾಣಚ್ಚಿ, ಮಧ್ಯಾಹ್ನ ೩.೩೦ ಗಂಟೆಗೆ ಕುಟ್ಟ, ತಾ. ೧೫ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಶ್ರೀಮಂಗಲ, ಬೆ. ೧೧.೩೦ ಗಂಟೆಗೆ ಟಿ.ಶೆಟ್ಟಿಗೇರಿ, ಮಧ್ಯಾಹ್ನ ೧೨.೩೦ ಗಂಟೆಗೆ ಬಿರುನಾಣಿ, ಮಧ್ಯಾಹ್ನ ೨ ಗಂಟೆಗೆ ಹುದಿಕೇರಿ, ಮಧ್ಯಾಹ್ನ ೩.೩೦ ಗಂಟೆಗೆ ಪೊನ್ನಂಪೇಟೆ. ಇಲ್ಲಿ ಎಲ್‌ಇಡಿ ವಾಹನದ ಮೂಲಕ ಪ್ರಚಾರಾಂದೋಲನ ನಡೆಯಲಿದೆ.