ಸುಂಟಿಕೊಪ್ಪ, ಮಾ. ೬ : ಮಾದಾಪುರ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಬಿ. ನಿರೂಪ ಆಯ್ಕೆಯಾಗಿದ್ದಾರೆ. ಈ ಹಿಂದೆ ಅಧ್ಯಕ್ಷರಾಗಿದ್ದ ಕೆ.ಸಿ. ಶೀಲಾ ಅವರು ರಾಜೀನಾಮೆ ನೀಡಿದ್ದು, ತೆರವಾದ ಸ್ಥಾನಕ್ಕೆ ನಿರೂಪ ಅವಿರೋಧವಾಗಿ ಆಯ್ಕೆಯಾದರು.
೧೬ ಸದಸ್ಯ ಬಲ ಇರುವ ಮಾದಾಪುರ ಗ್ರಾಮ ಪಂಚಾಯಿತಿಯಲ್ಲಿ ೧೩ ಮಂದಿ ಬಿಜೆಪಿ ಬೆಂಬಲಿತ ಸದಸ್ಯರಿದ್ದಾರೆ. ಪಕ್ಷದಲ್ಲಿ ಅಧಿಕಾರ ಹಂಚಿಕೆ ಒಡಂಬಡಿಕೆ ಅನ್ವಯ ಶೀಲ ಅವರು ೧ ವರ್ಷ ೨ ತಿಂಗಳು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ನಂತರ ರಾಜೀನಾಮೆ ನೀಡಿದ್ದರು. ಉಪಾಧ್ಯಕ್ಷೆ ಗೋಪಿ, ಪಿಡಿಓ ಪೂರ್ಣಕುಮಾರ್ ಹಾಗೂ ಮಾಜಿ ಅಧ್ಯಕ್ಷೆ ಶೀಲ ಹಾಗೂ ಎಲ್ಲಾ ಸದಸ್ಯರುಗಳು ಈ ಸಂದರ್ಭ ಹಾಜರಿದ್ದರು.