ಮಡಿಕೇರಿ, ಮಾ. ೬: ಅಕ್ರಮವಾಗಿ ಮಾರಾಟ ಮಾಡಲು ಗಾಂಜಾ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಅಬಕಾರಿ ಇಲಾಖೆ ಬಂಧಿಸಿ ಮಾಲು ಹಾಗೂ ಕೃತ್ಯಕ್ಕೆ ಬಳಸಿದ್ದ ಎರಡು ಹೋಂಡಾ ಆಕ್ಟೀವ ದ್ವಿಚಕ್ರ ವಾಹನಗಳನ್ನು ವಶಪಡಿಸಿ ಕೊಂಡಿದೆ.

ನಗರದ ಓಂಕಾರೇಶ್ವರ ದೇವಸ್ಥಾನ ರಸ್ತೆಯಲ್ಲಿ ದಾಳಿ ನಡೆದಿದ್ದು, ಇಬ್ಬರು ಆರೋಪಿಗಳಾದ ಕಡಗದಾಳುವಿನ ದರ್ಶನ್ ಎಸ್. ಹಾಗೂ ಮಕ್ಕಂದೂರಿನ ಪ್ರತಾಪ ಹೆಚ್.ಎಸ್. ಇವರುಗಳನ್ನು ಬಂಧಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಅಬಕಾರಿ ಉಪ ಅಧೀಕ್ಷಕರಾದ ಆಶಾರಾಣಿ, ಮಡಿಕೇರಿ ವಲಯ ಅಬಕಾರಿ ನಿರೀಕ್ಷಕರಾದ ಸ್ವರ್ಣಶ್ರೀ ವಿ., ಅಬಕಾರಿ ಕಾನ್‌ಸ್ಟೇಬಲ್‌ಗಳಾದ ರಾಜು ಹೆಚ್.ಎ., ಮೋಹನಕುಮಾರ ಡಿ.ಎಸ್. ಹಾಗೂ ವಾಹನ ಚಾಲಕ ಲೋಕೇಶ್ ಪಾಲ್ಗೊಂಡಿದ್ದರು. -ಟಿ.ಜಿ. ಸತೀಶ್.