ಮಡಿಕೇರಿ, ಮಾ. ೬: ಕೊಡವ ಭಾಷೆಯ ಬೆಳವಣಿಗೆಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯು ‘ಕೊಡವ ತಕ್ಕ್ಕ್ ತಕ್ಕಾರ’ (ಕೊಡವ-ಕನ್ನಡ-ಹಿಂದಿ-ಇAಗ್ಲೀಷ್-ಶಬ್ದಕೋಶ) Weಟಛಿome ಣo ಏoಜಚಿvಚಿ ಣhಚಿಞಞ (ಏoಜಚಿvಚಿ-ಏಚಿಟಿಟಿಚಿಜಚಿ-ಊiಟಿಜi-ಇಟಿgಟish-ಗಿoಛಿಚಿbuಟಚಿಡಿಥಿ)ಎನ್ನುವ “ಕೊಡವ ಶಬ್ದಕೋಶ”ಪುಸ್ತಕವನ್ನು ಮುದ್ರಣ ಮಾಡಿದೆ.
ಕೊಡವ ಭಾಷೆ ತಿಳಿಯದವರಿಗೂ ಕಲಿಯಲು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅವಕಾಶ ಮಾಡಿ ಕೊಟ್ಟಿದೆ. ಭಾಷೆಯ ಅಭಿಮಾನವಿರು ವವರು, ಭಾಷೆಯನ್ನು ಕಲಿಯುವವರು, ಭಾಷೆಯ ಅಧ್ಯಯನ ಮಾಡುವವರು, ಸಂಶೋಧನೆ ಮಾಡುವವರಿಗೆ ಈ ಶಬ್ದಕೋಶ ತುಂಬಾ ಪ್ರಯೋಜನ ವಾಗುವುದು. ಆದ್ದರಿಂದ ಎಲ್ಲಾ ಶಾಲೆಗಳಲ್ಲೂ, ವಿಶ್ವವಿದ್ಯಾನಿಲಯ ದಲ್ಲೂ ಅಧ್ಯಯನ ಕೇಂದ್ರ, ಸಂಶೋಧನಾ ಕೇಂದ್ರದಲ್ಲೂ ಈ ಪುಸ್ತಕವಿರಬೇಕು. ಈ ಹೈಟೆಕ್ ಯುಗ ದಲ್ಲಿ, ಆಂಗ್ಲ ಭಾಷೆ ಪ್ರಧಾನವಾಗಿ ರುವಾಗ ಸುಲಭವಾಗಿ ಭಾಷೆ ಕಲಿಯಲು ಈ ಶಬ್ದಕೋಶ ತುಂಬಾ ಉಪಯೋಗವಾಗುವುದು.
ಈ ಶಬ್ದಕೋಶದಲ್ಲಿ ಅಂತರಾಷ್ಟಿçÃಯ ಸ್ವರ ಮೂಲವನ್ನು Iಟಿಣeಡಿಟಿಚಿಣioಟಿಚಿಟ Phoಟಿeಣiಛಿ ಂಟಠಿhಚಿbeಣs (IPಂ) ಉಪಯೋಗಿಸಿ ರುವುದರಿಂದ ಪ್ರಪಂಚದ ಯಾವುದೇ ಮೂಲೆಯಲ್ಲೂ ಕೊಡವ ಭಾಷೆ ಕಲಿಯಲು ಸುಲಭವಾಗುವುದು. ಸುಮಾರು ಎರಡು ವರ್ಷದ ಅವಧಿಯಲ್ಲಿ ೩೭ ಸಭೆಯನ್ನು ಅಕಾಡೆಮಿಯಲ್ಲಿ ನಡೆಸಿ ಪ್ರತಿ ಶಬ್ದಕ್ಕೂ ಸೂಕ್ತ ಕೊಡವ ಶಬ್ದವನ್ನು ತಯಾರಿಸಲಾಗಿದೆ. ಈ ಶಬ್ದಕೋಶ ಪುಸ್ತಕದಲ್ಲಿ ೪೭ ಭಾಗಗಳಿದ್ದು, ಸುಮಾರು ೭೦೦೦ ಶಬ್ದಗಳ ಭಾಷಾಂತ ರವಾಗಿದೆ. ಒಟ್ಟು ೪೮೦ ಪುಟಗಳನ್ನು ಈ ಶಬ್ದಕೋಶ ಒಳಗೊಂಡಿದೆ.
ಬಾಚರಣಿಯಂಡ ಪಿ.ಅಪ್ಪಣ್ಣ, ಡಾ. ಉಳ್ಳಿಯಡ ಎಂ. ಪೂವಯ್ಯ, ರಾಣು ಅಪ್ಪಣ್ಣ, ಅಜ್ಜಿನಿಕಂಡ ಮಹೇಶ್ ನಾಚಯ್ಯ, ಡಾ.ಶ್ರೀಧರ್ ಹೆಗಡೆ, ದಿ.ಮುಲ್ಲೇಂಗಡ ಬೇಬಿ ಚೋಂದಮ್ಮ ಹಾಗೂ ಕೊಡವ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಗೌರಮ್ಮ ಮಾದಮ್ಮಯ್ಯ, ಡಾ.ಮುಲ್ಲೇಂಗಡ ರೇವತಿ ಪೂವಯ್ಯ, ತೇಲಪಂಡ ಕವನ್ ಕಾರ್ಯಪ್ಪ, ಇವರೆಲ್ಲ ಈ ಶಬ್ದಕೋಶ ಪುಸ್ತಕವನ್ನು ತಯಾರು ಮಾಡುವಲ್ಲಿ ತಜ್ಞರಾಗಿ ಕಾರ್ಯನಿರ್ವಹಿಸಿದ್ದಾರೆ.
ಈ ಶಬ್ದಕೋಶವನ್ನು ತಾ. ೮ ರಂದು ಮಧ್ಯಾಹ್ನ ೩ ಗಂಟೆಗೆ ನಗರದ ಪತ್ರಿಕಾ ಭವನದಲ್ಲಿ ಬಿಡುಗಡೆಗೊಳಿಸ ಲಾಗುವುದು. ಈ ಶಬ್ದಕೋಶ ಬಿಡುಗಡೆಯ ಕಾರ್ಯಕ್ರಮವನ್ನು ಕೊಡಗು ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಡಾ. ಬಿ.ಸಿ. ಸತೀಶ, ಅವರು ಉದ್ಘಾಟಿ ಸಲಿದ್ದಾರೆ. ಕೊಡವ ಅರಿವೋಲೆಯನ್ನು ಬರೆದ ಡಾ. ಪ್ರೊ. ಬೊವ್ವೇರಿಯಂಡ ಚೆಟ್ಟಿಚ ಉತ್ತಯ್ಯ ಹಾಗೂ ಬೊವ್ವೇರಿಯಂಡ ಉತ್ತಯ್ಯ ತಂಗಮ್ಮ ಅವರು ಈ ಶಬ್ದಕೋಶ ಬಿಡುಗಡೆ ಮಾಡುವರು.
ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿಗಳಾದ ಬಾಚರಣಿಯಂಡ ಪಿ. ಅಪ್ಪಣ್ಣ, ಶಬ್ದಕೋಶ ಸಲಹೆಗಾರರಾದ ಪ್ರೋ ಸ್ಟೀವನ್ ಕ್ವಾಡ್ರಸ್ ಪೆರ್ಮುಡೆ ಉಪಸ್ಥಿತರಿರುವರು. ಅಲ್ಲದೆ ಶಬ್ದಕೋಶ ತಜ್ಞರು, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಹಾಗೆಯೇ ಕೊಡವ ಭಾಷೆಯ ವ್ಯಾಕರಣ ಪುಸ್ತಕವೂ ಸಿದ್ಧವಾಗಿದೆ. ಶೀಘ್ರದಲ್ಲೆ ಅದನ್ನು ಕೂಡ ಬಿಡುಗಡೆ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.