ಉಕ್ರೇನ್‌ನಿಂದ ೧೦ ದಿನಗಳಲ್ಲಿ ೧.೫ ಮಿಲಿಯನ್ ನಿರಾಶ್ರಿತರ ವಲಸೆ

ಉಕ್ರೇನ್, ಮಾ. ೬: ರಷ್ಯಾ ಯುದ್ಧ ಘೋಷಿಸಿರುವ ಹಿನ್ನೆಲೆಯಲ್ಲಿ ಉಕ್ರೇನ್ ತೊರೆಯುತ್ತಿರುವ ನಿರಾಶ್ರಿತರ ಸಂಖ್ಯೆ ೧.೫ ಮಿಲಿಯನ್ ದಾಟಿದೆ ಎಂದು ವಿಶ್ವಸಂಸ್ಥೆ ಹೇಳಿದೆ. ಇದು ವಿಶ್ವ ಯುದ್ಧ-೨ ರ ನಂತರದಲ್ಲಿ ಯೂರೋಪ್‌ನಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ನಿರಾಶ್ರಿತ ಬಿಕ್ಕಟ್ಟಾಗಿದೆ ಎಂದು ವಿಶಸಂಸ್ಥೆ ಹೇಳಿದೆ. ೧೦ ದಿನಗಳಲ್ಲಿ ಉಕ್ರೇನ್‌ನಿಂದ ೧.೫ ಮಿಲಿಯನ್ ನಿರಾಶ್ರಿತರು ನೆರೆ ರಾಷ್ಟçಗಳಿಗೆ ತೆರಳಿದ್ದಾರೆ ಎಂದು ವಿಶ್ವಸಂಸ್ಥೆ ಮಾಹಿತಿ ನೀಡಿದೆ. ಈ ನಡುವೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಉಕ್ರೇನ್‌ನ ರಾಜ್ಯತ್ವ ಅಪಾಯದಲ್ಲಿದ್ದು, ಪಶ್ಚಿಮ ದೇಶಗಳ ನಿರ್ಬಂಧಗಳನ್ನು ಯುದ್ಧ ಘೋಷಣೆಗೆ ಹೋಲಿಕೆ ಮಾಡಿದ್ದಾರೆ ಹಾಗೂ ಮುತ್ತಿಗೆ ಹಾಕಲಾಗಿರುವ ಮರಿಯುಪೋಲ್ ಬಂದರು ನಗರದಲ್ಲಿ ಕದನ ವಿರಾಮದ ಭರವಸೆ ನೀಡಿದ್ದಾರೆ. ಶನಿವಾರ ರಾತ್ರಿಯಿಂದ ರಷ್ಯಾ ಪಡೆಗಳು ಮರಿಯುಪೋಲ್ ನಗರದ ಮೇಲೆ ಶೆಲ್ಲಿಂಗ್‌ನ್ನು ತೀವ್ರಗೊಳಿಸಿವೆ.

ಗುಂಡಿನ ದಾಳಿ : ೫ ಸೈನಿಕರು ಸಾವು

ಅಮೃತಸರ, ಮಾ. ೬: ಪಂಜಾಬ್‌ನ ಅಮೃತಸರದ ಫೋರ್ಸ್ ಕ್ಯಾಂಪ್‌ನಲ್ಲಿ ಭಾನುವಾರ ಬಿಎಸ್‌ಎಫ್ ಜವಾನ ತನ್ನ ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿದ್ದು, ಘಟನೆಯಲ್ಲಿ ಕನಿಷ್ಟ ಐವರು ಗಡಿ ಭದ್ರತಾ ಪಡೆ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರತ-ಪಾಕಿಸ್ತಾನ ಅಂರ‍್ರಾಷ್ಟಿçÃಯ ಗಡಿ ಅಟ್ಟಾರಿ-ವಾಘಾ ಗಡಿ ದಾಟುವಿಕೆಯಿಂದ ಸುಮಾರು ೨೦ ಕಿ.ಮೀ. ದೂರದಲ್ಲಿರುವ ಖಾಸಾ ಪ್ರದೇಶದ ಫೋರ್ಸ್ಮೆಸ್‌ನಲ್ಲಿ ಈ ಘಟನೆ ನಡೆದಿದೆ. ಗುಂಡಿನ ದಾಳಿ ನಡೆಸಿದ ಜವಾನ ಸೇರಿದಂತೆ ಐವರು ಯೋಧರ ಮೃತಪಟ್ಟಿದ್ದಾರೆ. ದಾಳಿಯಲ್ಲಿ ಓರ್ವ ಯೋಧ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಗಡಿ ಭದ್ರತಾ ಪಡೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.

ಸ್ವಲ್ಪ ತಾಳ್ಮೆಯಿಂದಿರಿ: ಭಾರತೀಯ ವಿದ್ಯಾರ್ಥಿಗಳಿಗೆ ರಾಯಭಾರಿ ಕಚೇರಿ ಮನವಿ

ನವದೆಹಲಿ, ಮಾ. ೬: ಯುದ್ಧಪೀಡಿತ ಪೂರ್ವ ಉಕ್ರೇನಿಯನ್ ನಗರವಾದ ಸುಮಿಯಿಂದ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳುತ್ತಿದೆ ಎಂದು ಉಕ್ರೇನ್‌ನ ಭಾರತೀಯ ರಾಯಭಾರಿ ಪಾರ್ಥ ಸತ್ಪತಿ ಹೇಳಿದ್ದಾರೆ. ಸುಮಿಯಲ್ಲಿರುವ ಭಾರತೀಯ ವಿದ್ಯಾರ್ಥಿಗಳು ರಷ್ಯಾದ ಗಡಿಗೆ ತೆರಳಲು ನಿರ್ಧರಿಸಿದ್ದಾರೆ ಮತ್ತು ಅವರಿಗೆ ಏನಾದರೂ ಸಂಭವಿಸಿದರೆ ಭಾರತ ಸರ್ಕಾರ ಮತ್ತು ಉಕ್ರೇನಕನಲ್ಲಿರುವ ರಾಯಭಾರ ಕಚೇರಿ ಹೊಣೆ ಎಂದು ಹೇಳುವ ವೀಡಿಯೊಗಳನ್ನು ಪೋಸ್ಟ್ ಮಾಡಿದ ಗಂಟೆಗಳ ನಂತರ ಬಂದ ಸಂದೇಶದಲ್ಲಿ ಸತ್ಪತಿ ಈ ಹೇಳಿಕೆಯನ್ನು ನೀಡಿದ್ದಾರೆ. ರಾಯಭಾರ ಕಚೇರಿಯ ಭರವಸೆಯ ನಂತರ ಪೂರ್ವ ಉಕ್ರೇನಿಯನ್‌ನಲ್ಲಿರುವ ವಿದ್ಯಾರ್ಥಿಗಳು ಅಲ್ಲಿಯೇ ತಂಗಿದ್ದಾರೆ, ಕಳೆದ ಎರಡು ವಾರಗಳು ನಮಗೆಲ್ಲರಿಗೂ ಅತ್ಯಂತ ದುಃಖಕರ ಮತ್ತು ಸವಾಲಿನದ್ದಾಗಿತ್ತು. ನಮ್ಮ ಜೀವನದಲ್ಲಿ ಇಂತಹ ನೋವು ಮತ್ತು ಅಡೆತಡೆಗಳನ್ನು ಯಾರೂ ನೋಡಿರಲಿಲ್ಲ ಎಂದು ಸತ್ಪತಿ ಹೇಳಿದರು. ಅದೇನೇ ಇದ್ದರೂ, ಈ ಕಷ್ಟದ ಸಮಯದಲ್ಲಿ ಧೈರ್ಯಶಾಲಿಯಾಗಿರಲು ನಮ್ಮ ಭಾರತೀಯ ಪ್ರಜೆಗಳು, ವಿಶೇಷವಾಗಿ ಯುವ ಭಾರತೀಯ ವಿದ್ಯಾರ್ಥಿಗಳು ಪ್ರದರ್ಶಿಸಿದ ಪ್ರಬುದ್ಧತೆ ಮತ್ತು ಸ್ಥೆöÊರ್ಯದ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಹೇಳಿದ್ದಾರೆ. “ಭಾರತೀಯ ವಿದ್ಯಾರ್ಥಿಗಳ ಸುರಕ್ಷಿತ ಸ್ಥಳಾಂತರವನ್ನು ಖಚಿತಪಡಿಸಿಕೊಳ್ಳಲು ನಮ್ಮ ರಾಯಭಾರ ಕಚೇರಿಯು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ, ಈ ಸಮಯದಲ್ಲಿ ನಮ್ಮ ವಿದ್ಯಾರ್ಥಿಗಳು ಬಹಳಷ್ಟು ಅನುಭವಿಸಿದ್ದಾರೆ ಮತ್ತು ಸಾಟಿಯಿಲ್ಲದ ಶಕ್ತಿ ಮತ್ತು ನಿರ್ಣಯವನ್ನು ತೋರಿಸಿದ್ದಾರೆ ಎಂದು ನನಗೆ ತಿಳಿದಿದೆ ಎಂದು ಟ್ವೀಟ್ ಮಾಡಿದ್ದಾರೆ. ನಿಮ್ಮ ಸುರಕ್ಷತೆಯೇ ನಮಗೆ ಪ್ರಮುಖವಾದದ್ದು, ಹೀಗಾಗಿ ಸ್ವಲ್ಪ ಸಹನೆ ಮತ್ತು ತಾಳ್ಮೆಯಿಂದಿರಬೇಕೆAದು ಮನವಿ ಮಾಡಿದ್ದಾರೆ.

ಡ್ರಗ್ಸ್ ದಂಧೆ: ನಾಲ್ವರು ಆರೋಪಿಗಳ ಬಂಧನ

ಬೆAಗಳೂರು, ಮಾ. ೬: ಸಾರ್ವಜನಿಕ ಪ್ರದೇಶಗಳಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರು ವಿದೇಶಿ ಪ್ರಜೆಗಳು, ಓರ್ವ ಮಾದಕ ವ್ಯಸನಿ ಸೇರಿದಂತೆ ನಾಲ್ವರು ಆರೋಪಿಗಳನ್ನು ಯಲಹಂಕ ಪೊಲೀಸರು ಭಾನುವಾರ ಬಂಧನಕ್ಕೊಳಪಡಿಸಿದ್ದಾರೆ. ಬಂಧಿತರನ್ನು ಉಡೇ ಉಡೇ ಊಜಾ (೩೬), ಎಕೆಚುಕ್ವು ಡೇನಿಯಲ್ (೩೯), ತಸ್ಲೀಂ (೨೦), ಮೊಹಮ್ಮದ್ ಉಮರ್ ಮುಕ್ತಿಯಾರ್ (೨೩) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ರೂ. ೨.೮೫ ಲಕ್ಷ ಮೌಲ್ಯದ ೧೦೫ ಗ್ರಾಂ ಎಂಡಿಎAಎ ವಶಕ್ಕೆ ಪಡೆಯಲಾಗಿದೆ. ಈ ಕುರಿತು ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಡಿಸಿಪಿ ಅನೂಪ್ ಶೆಟ್ಟಿ ಹೇಳಿದ್ದಾರೆ.

ಮಹಿಳಾ ಪೋಲೀಸ್-ವಕೀಲರಿಗೆ ಅಶ್ಲೀಲ ಸಂದೇಶ : ವ್ಯಕ್ತಿ ಬಂಧನ

ಬೆAಗಳೂರು, ಮಾ. ೬: ಮಹಿಳಾ ವಕೀಲರು ಮತ್ತು ಪೊಲೀಸ್ ಸಿಬ್ಬಂದಿ ಸೇರಿದಂತೆ ೧೦೦ಕ್ಕೂ ಹೆಚ್ಚು ಜನರಿಗೆ ಅಶ್ಲೀಲ ಸಂದೇಶಗಳು ಮತ್ತು ವೀಡಿಯೋಗಳನ್ನು ಕಳುಹಿಸುವ ಮೂಲಕ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ೩೭ ವರ್ಷದ ವ್ಯಕ್ತಿಯನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ. ತುಮಕೂರು ಜಿಲ್ಲೆಯ ಮಧುಗಿರಿ ಮೂಲದ ದಿವ್ಯರಾಜ್ ಬಂಧಿತ ಆರೋಪಿ. ಈತ ಕೃಷ್ಣ, ರಾಮಕೃಷ್ಣ, ಮಂಜುನಾಥ್, ಚೂಲ್, ಪ್ರಶಾಂತ್, ಪ್ರವೀಣ್ ಸೇರಿದಂತೆ ಬೇರೆ ಬೇರೆ ಹೆಸರುಗಳಲ್ಲಿ ಪರಿಚಯ ಮಾಡಿಕೊಳ್ಳುತ್ತಿದ್ದ. ಈತನ ವಿರುದ್ಧ ವಿವಿಧ ಠಾಣೆಗಳಲ್ಲಿ ೧೪ ಪ್ರಕರಣಗಳು ದಾಖಲಾಗಿವೆ. ತನ್ನನ್ನು ಬಂಧಿಸುವAತೆ ಪೊಲೀಸರಿಗೆ ಸವಾಲು ಹಾಕಿದ್ದ ಆತ ಕಳೆದ ಆರು ತಿಂಗಳಿAದ ಬಂಧನದಿAದ ತಪ್ಪಿಸಿಕೊಳ್ಳುತ್ತಿದ್ದ ಎಂದು ಮೂಲಗಳು ತಿಳಿಸಿವೆ. ಪೊಲೀಸರು ಆತನ ಮೊಬೈಲ್ ಫೋನ್ ವಶಪಡಿಸಿಕೊಂಡ ನಂತರ, ಆತ ಮಹಿಳೆಯರಿಗೆ ಕರೆ ಮಾಡುವ ಮೂಲಕ ಕಿರುಕುಳ ನೀಡುತ್ತಿದ್ದ. ವಾಟ್ಸಾಪ್‌ನಲ್ಲಿ ಅಶ್ಲೀಲ ಸಂದೇಶಗಳು ಮತ್ತು ವೀಡಿಯೋಗಳನ್ನು ಕಳುಹಿಸುತ್ತಿದ್ದ ಎಂಬುದು ತಿಳಿದುಬಂದಿದೆ. ಈತನಿಂದ ಕಿರುಕುಳಕ್ಕೊಳಗಾದವರು ತಮ್ಮ ನಿವಾಸ ವ್ಯಾಪ್ತಿಯಲ್ಲಿ ಬರುವ ಪೊಲೀಸರನ್ನು ಸಂಪರ್ಕಿಸುವAತೆ ಡಿಸಿಪಿ ಮನವಿ ಮಾಡಿದ್ದಾರೆ. ರಾಜ್ ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದು, ಮಹಿಳೆಯರಿಗೆ ಕಿರುಕುಳ ನೀಡುವ ಮೂಲಕ ಥ್ರಿಲ್ ಪಡೆದಿದ್ದೇನೆ ಎಂದು ಹೇಳಿದ್ದಾನೆ. ಕೆಲವು ಸಂತ್ರಸ್ತರೊAದಿಗೆ ದೈಹಿಕ ಸಂಬAಧ ಹೊಂದಿರುವುದು ತಿಳಿದು ಬಂದಿದೆ. ಪೊಲೀಸರ ಪ್ರಕಾರ, ರಾಜ್ ತನ್ನ ಸ್ನೇಹಿತರಿಗೆ ಕಾನೂನು ಸಹಾಯ ಪಡೆಯುವ ನೆಪದಲ್ಲಿ ಮಹಿಳಾ ವಕೀಲರ ಸಂಪರ್ಕ ವಿವರಗಳನ್ನು ಸಂಗ್ರಹಿಸುತ್ತಿದ್ದ. ಅಂತೆಯೇ, ಮಹಿಳೆಯರು ದೂರು ಸಲ್ಲಿಸಲು ಸಹಾಯ ಮಾಡುವ ನೆಪದಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿಯ ಸಂಪರ್ಕ ವಿವರಗಳನ್ನು ಪಡೆಯಲು ಪೊಲೀಸ್ ಠಾಣೆಗಳಿಗೆ ಕರೆ ಮಾಡುತ್ತಿದ್ದ ಎಂಬುದಾಗಿ ತಿಳಿದು ಬಂದಿದೆ.