(ಕೋವರ್ ಕೊಲ್ಲಿ ಇಂದ್ರೇಶ್)

ಮಡಿಕೇರಿ, ಮಾ. ೬: ಉಕ್ರೇನ್ ಮತ್ತು ರಷ್ಯಾ ನಡುವೆ ನಡೆಯುತ್ತಿರುವ ಯುದ್ಧದ ಕಾರಣದಿಂದಾಗಿ ಅಡುಗೆ ಎಣ್ಣೆಯ ಮತ್ತು ಕಚ್ಚಾ ತೈಲದ ದರ ಏರುಮುಖವಾಗಿದೆ. ಅಡುಗೆ ಎಣ್ಣೆ ದರ ವಾರದ ಹಿಂದೆ ಲೀಟರಿಗೆ ೧೩೫-೧೪೦ ರೂಪಾಯಿ ಇದ್ದುದ್ದು ಈಗ ೧೭೫-೧೮೦ ರೂಪಾಯಿಗಳಿಗೆ ಏರಿಕೆ ಆಗಿದೆ. ಆದರೆ ಜಿಲ್ಲೆಯ ಜನತೆಯ ಜೀವನಾಡಿ ಆಗಿರುವ ಕಾಫಿ ದರ ಕುಸಿತ ದಾಖಲಿಸುತ್ತಿದೆ.

ಕೊಡಗು ಹಾಗೂ ಚಿಕ್ಕಮಗಳೂರಿನ ಕಾಫಿ ಮಾರುಕಟ್ಟೆಗಳಲ್ಲಿ ಶನಿವಾರ ಅರೇಬಿಕಾ ಪಾರ್ಚ್ಮೆಂಟ್ ಕಾಫಿ ದರ ೫೦ ಕೆಜಿಯ ಚೀಲವೊಂದಕ್ಕೆ ೧೫,೬೦೦ ರೂಪಾಯಿಗೆ ಇಳಿಕೆ ಆಗಿದೆ. ಕೇವಲ ವಾರದ ಹಿಂದೆ ೫೦ ಕೆಜಿಗೆ ೧೬,೧೦೦-೨೦೦ ರೂಪಾಯಿಗೆ ಮಾರಾಟವಾಗಿ ಬೆಳೆಗಾರರಿಗೆ ಸಂತಸ ನೀಡಿದ್ದ, ಕಾಫಿಯ ದರ ಕುಸಿತ ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದೆ. ವಿಶ್ವದಲ್ಲಿ ಅತ್ಯಂತ ದೊಡ್ಡ ಅರೇಬಿಕಾ ಕಾಫಿ ಬೆಳೆಗಾರ ದೇಶವಾಗಿರುವ ಬ್ರೆಜಿಲ್‌ನಲ್ಲಿ ಹಿಮಪಾತದಿಂದಾಗಿ ಅಂರ‍್ರಾಷ್ಟಿçÃಯ ಕಾಫಿ ಮಾರುಕಟ್ಟೆಗೆ ಅರೇಬಿಕಾ ಕಾಫಿಯ ಸರಬರಾಜು ಕಡಿಮೆ ಆದ ಕಾರಣಕ್ಕಾಗಿಯೇ ಅರೇಬಿಕಾ ಕಾಫಿಯ ದರ ಮೂರು ತಿಂಗಳ ಹಿಂದೆ ೧೨ ಸಾವಿರ ರೂಪಾಯಿಗಳ ಆಸುಪಾಸಿನಲ್ಲಿ ಇದ್ದುದು, ನಂತರ ೧೬,೨೦೦ರ ವರೆಗೂ ಜಿಗಿದಿತ್ತು. ಅರೇಬಿಕಾ ಜತೆಗೇ ಅರೇಬಿಕಾ ಚೆರಿ, ರೋಬಸ್ಟಾ ಚೆರಿ ಮತ್ತು ಪಾರ್ಚ್ಮೆಂಟ್ ಕಾಫಿಯ ದರವೂ ಚೀಲವೊಂದಕ್ಕೆ ೨೦೦ ರಿಂದ ೪೦೦ ರೂಪಾಯಿಗಳಷ್ಟು ದರ ಇಳಿಕೆ ದಾಖಲಿಸಿವೆ. ಸಂಕಷ್ಟದಲ್ಲಿರುವ ಕಾಫಿ ಬೆಳೆಗಾರರಿಗೆ ದರ ಕುಸಿತ ಮತ್ತೆ ಚಿಂತೆಗೆ ಕಾರಣವಾಗಿದೆ.

ದರ ಕುಸಿತಕ್ಕೆ ಉಕ್ರೇನ್-ರಷ್ಯಾದ ಯುದ್ಧವೇ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ರಷ್ಯಾ, ಉಕ್ರೇನ್ ಎರಡೂ ದೇಶಗಳೂ ಭಾರತದ ಕಾಫಿಯ ಆಮದುದಾರ ರಾಷ್ಟçಗಳೇ ಆಗಿವೆ.

(ಮೊದಲ ಪುಟದಿಂದ) ಕಾಫಿ ಮಂಡಳಿಯ ಮೂಲಗಳ ಪ್ರಕಾರ ಕಳೆದ ೨೦೨೧ ಏಪ್ರಿಲ್‌ನಿಂದ ಜನವರಿ ೩೧ರ ವರೆಗೆ ಭಾರತದಿಂದ ೬,೬೦೪ ಮೆಟ್ರಿಕ್ ಟನ್ ಹಸಿರು ಬೀನ್, ಇನ್‌ಸ್ಟಂಟ್ ಮತ್ತು ಹುರಿದ ಕಾಫಿಯನ್ನು ಉಕ್ರೇನ್‌ಗೆ ಮತ್ತು ೨೩,೫೧೯ ಮೆಟ್ರಿಕ್ ಟನ್‌ಗಳಷ್ಟು ಕಾಫಿಯನ್ನು ರಷ್ಯಾಕ್ಕೆ ರಫ್ತು ಮಾಡಲಾಗಿದೆ.

೨೦೧೮-೧೯ರ ಆರ್ಥಿಕ ವರ್ಷದಲ್ಲಿ ಉಕ್ರೇನ್‌ಗೆ ಒಟ್ಟು ೭,೩೨೭ ಮೆಟ್ರಿಕ್ ಟನ್‌ಗಳಷ್ಟು ಕಾಫಿಯನ್ನು ರಫ್ತು ಮಾಡಲಾಗಿತ್ತು ಮತ್ತು ೨೦೧೯-೨೦ರಲ್ಲಿ ಇದು ೬,೯೪೭ ಮೆಟ್ರಿಕ್ ಟನ್‌ಗಳಷ್ಟಿತ್ತು. ಸಿಐಎಸ್ (ಅommoಟಿತಿeಚಿಟಣh oಜಿ Iಟಿಜeಠಿeಟಿಜeಟಿಣ sಣಚಿಣes) ಒಕ್ಕೂಟದ ೧೧ ದೇಶಗಳು ಭಾರತದಿಂದ ಕಾಫಿಯನ್ನು ಆಮದು ಮಾಡಿಕೊಳ್ಳುವ ಸಾಂಪ್ರದಾಯಿಕ ದೇಶಗಳಾಗಿವೆ. ಈ ಸಿಐಎಸ್ ಒಕ್ಕೂಟವನ್ನು ೧೯೯೧ರಲ್ಲಿ ರಚನೆ ಮಾಡಲಾಗಿದ್ದು ಇದರಲ್ಲಿ ಅರ್ಮೇನಿಯ, ಬೆಲಾರಸ್, ಕಝಕಿ ಸ್ಥಾನ, ಕಿರ್ಗಿಸ್ಥಾನ, ಮೊಲ್ಡಾವಿಯ, ಉಜ್ಬೇಕಿಸ್ಥಾನ್, ತಜಕಿಸ್ಥಾನ್, ರಷ್ಯಾ, ತುರ್ಕಮೆನಿಸ್ಥಾನ್ ಮತ್ತು ಉಕ್ರೇನ್ ಇವೆ. ಕಾಫಿ ಬೋರ್ಡ್ ಹಂಚಿಕೊAಡ ಮಾಹಿತಿಯ ಪ್ರಕಾರ, ಈ ದೇಶಗಳಿಗೆ ಭಾರತದಿಂದ ರಫ್ತಾಗುವ ಕಾಫಿಯಲ್ಲಿ ರಷ್ಯಾ ಶೇಕಡಾ ೭೫ ರಷ್ಟು ಪಾಲನ್ನು ಹೊಂದಿದ್ದು ಉಕ್ರೇನ್ ೨೦% ಕ್ಕಿಂತ ಹೆಚ್ಚು ಪಾಲನ್ನು ಹೊಂದಿದೆ.

ಮಾರುಕಟ್ಟೆ ತಜ್ಞರ ಪ್ರಕಾರ ರಷ್ಯಾ ಉಕ್ರೇನ್ ಯುದ್ಧದಿಂದಾಗಿ ಸಿಐಎಸ್ ದೇಶಗಳಿಗೆ ಕಾಫಿಯ ರಫ್ತು ಸ್ಥಗಿತಗೊಂಡಿರುವುದು ದರ ಕುಸಿತಕ್ಕೆ ನೇರ ಕಾರಣವಲ್ಲ. ಯೂರೋಪಿ ಯನ್ ರಾಷ್ಟçಗಳಲ್ಲಿ ಯುದ್ಧದ ಭೀತಿ ಮತ್ತು ಅನಿಶ್ಚಿತತೆಯೇ ದರ ಕುಸಿತಕ್ಕೆ ಮುಖ್ಯ ಕಾರಣವಾಗಿದೆ. ಈ ಎರಡೂ ದೇಶಗಳ ನಡುವೆ ನಡೆಯುತ್ತಿರುವ ಯುದ್ದವು ಸದ್ಯಕ್ಕೆ ನಿಲ್ಲುವ ಲಕ್ಷಣಗಳೇನೂ ಕಾಣುತ್ತಿಲ್ಲ ಬದಲಿಗೆ ತೀವ್ರವಾಗುತ್ತಾ ಸಾಗಿದೆ. ಯುದ್ಧವು ಮುಂದುವರಿದಲ್ಲಿ ಅಡುಗೆ ಎಣ್ಣೆ ದರ ಇನ್ನೂ ಗಗನಮುಖಿ ಆಗಲಿದೆ ಎನ್ನಲಾಗಿದೆ. ಉಕ್ರೇನ್ ಎಣ್ಣೆ ಕಾಳುಗಳ ಅತಿ ದೊಡ್ಡ ಉತ್ಪಾದಕ ದೇಶವಾಗಿರುವುದೇ ಇದಕ್ಕೆ ಕಾರಣ. ಆದರೆ ಕಾಫಿಯ ದರವೂ ಗಣನೀಯವಾಗಿ ಕುಸಿತ ಕಾಣಲಿದೆ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ.