ಕೂಡಿಗೆ, ಮಾ. ೬: ಕೂಡಿಗೆಯಲ್ಲಿ ಕೇಂದ್ರ ಸರಕಾರದ ವತಿಯಿಂದ ನೂತನವಾಗಿ ಕಣ್ಣಿನ ಆಸ್ಪತ್ರೆ vರೆÀಯುವ ಉದ್ದೇಶದಿಂದ ಕೂಡಿಗೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ಸಮೀಪದಲ್ಲಿ ಖಾಲಿ ಇರುವ ಜಾಗವನ್ನು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೇಂದ್ರ ಸರ್ಕಾರದ ಸೂಚನೆ ಯಂತೆ ಕೊಡಗು ಜಿಲ್ಲೆಯಲ್ಲಿ ಸುಸಜ್ಜಿತವಾದ ಕಣ್ಣಿನ ಆಸ್ಪತ್ರೆಯನ್ನು ತೆರೆಯುವ ಚಿಂತನೆ ನಡೆದಿದ್ದು ಈಗಾಗಲೇ ಸಂಬAಧಿಸಿದ ಇಲಾಖೆಯ ಮೂಲಕ ಎಲ್ಲಾ ಪತ್ರ ವ್ಯವಹಾರಗಳು ನಡೆದಿವೆ. ಸ್ಥಳದ ಪರಿಶೀಲನೆ ಇದೀಗ ನಡೆಯುತ್ತಿದೆ.

ಈಗಾಗಲೇ ಕೂಡಿಗೆಯ ಕೃಷಿ ಕ್ಷೇತ್ರದ ಆವರಣದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ಸಮೀಪದಲ್ಲಿ ಮೂರು ಎಕರೆಗಳಷ್ಟು ಪ್ರದೇಶದ ಖಾಲಿ ಜಾಗವಿದ್ದು ಇದರ ಪರಿಶೀಲನೆಯನ್ನು ಮಾಡಲಾಗಿದೆ ಮುಂದಿನ ದಿನಗಳಲ್ಲಿ ರಾಜ್ಯ ಮಟ್ಟದ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ವರದಿ ನೀಡಿದ ನಂತರ. ಯೋಜನೆ ಯನ್ನು ಕಾರ್ಯಗತ ಗೊಳ್ಳಿಸಲಾಗು ವುದು ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ತಿಳಿಸಿದರು

ಈ ಸಂದರ್ಭದಲ್ಲಿ ಕೂಡುಮಂಗಳೂರು ಗ್ರಾ.ಪಂ. ಅಧ್ಯಕ್ಷೆ ಇಂದಿರಾ ರಮೇಶ್ ಶಾಸಕರ ಆಪ್ತ ಕಾರ್ಯದರ್ಶಿ ರವಿ, ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.