ಶನಿವಾರಸಂತೆ, ಮಾ. ೫: ಸಮೀಪದ ಕೊಡ್ಲಿಪೇಟೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವದ ಸಂಭ್ರಮದ ನೆನಪಿನ ಕಾಣಿಕೆಯಾಗಿ ೩,೪೨೧ ಸದಸ್ಯರಿಗೆ ೮ ಗ್ರಾಂ ತೂಕದ ಬೆಳ್ಳಿ ನಾಣ್ಯವನ್ನು ವಿತರಿಸಲಾಯಿತು. ಬೆಳ್ಳಿ ನಾಣ್ಯ ವಿತರಣೆ ಸಂದರ್ಭ ಸಂಘದ ನಿರ್ದೇಶಕರಾದ ವಹಾಬ್, ಭಾನುಮತಿ, ಮಾಜಿ ನಿರ್ದೇಶಕ ಜಿ.ಆರ್. ಸುಬ್ರಮಣ್ಯ ಹಾಗೂ ವ್ಯವಸ್ಥಾಪಕ ಹಾಜರಿದ್ದರು.