*ಗೋಣಿಕೊಪ್ಪ, ಮಾ. ೫: ಅಂಗಡಿಗೆ ಹೋಗಿ ಬರುತ್ತೇನೆ ಎಂದು ಮನೆಯಿಂದ ಹೊರಟ ಜೋಡುಬೀಟಿ ನಿವಾಸಿ ಪಂಜರಿಯರವರ ಕಾಳ ಕಳೆದ ೧೫ ದಿನಗಳಿಂದ ಕಾಣೆಯಾಗಿದ್ದಾರೆ ಎಂದು ಪೊನ್ನಂಪೇಟೆ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಾಳ ಅವರ ಪತ್ನಿ ಪತಿ ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದಾರೆ. ೬ ಅಡಿ ಎತ್ತರವಿರುವ ೪೯ ವರ್ಷ ಪ್ರಾಯದ ಕಾಳ ಬಿಳಿ ಬಣ್ಣ ಶರ್ಟ್ ಮತ್ತು ನೀಲಿ ಪ್ಯಾಂಟ್ ಧರಿಸಿದ್ದು, ಕನ್ನಡ, ಯರವ, ಕೊಡವ ಭಾಷೆಗಳನ್ನು ಬಲ್ಲವರಾಗಿದ್ದಾರೆ.

ಇವರು ಪತ್ತೆಯಾದಲ್ಲಿ ೦೮೨೭೪-೨೪೯೦೪೪ ಪೊನ್ನಂಪೇಟೆ ಠಾಣೆ, ೦೮೨೭೪ – ೨೪೭೨೦೯ ಗೋಣಿಕೊಪ್ಪ ವೃತ್ತ ನಿರೀಕ್ಷರ ಕಚೇರಿಯನ್ನು ಸಂಪರ್ಕಿಸುವAತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

*ಗೋಣಿಕೊಪ್ಪ: ಪೊನ್ನಂಪೇಟೆ ಠಾಣಾ ವ್ಯಾಪ್ತಿಯ ಪಿ.ಜಿ. ನಂಜಪ್ಪ ಎಂಬವರು ಕಳೆದ ಕೆಲ ದಿನಗಳಿಂದ ಕಾಣೆಯಾಗಿದ್ದಾರೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

ಬಾಳೆಲೆ ಗ್ರಾಮದ ಪಿ.ಜಿ. ನಂಜಪ್ಪ ಫೆಬ್ರವರಿ ೨೬ ರಂದು ಮನೆಯಿಂದ ಹೊರಹೋದವರು ಹಿಂದಿರುಗಿ ಬಂದಿಲ್ಲ ಎಂದು ನಂಜಪ್ಪ ಅವರ ಮಗಳು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

೮೫ ವರ್ಷ ಪ್ರಾಯದ ನಂಜಪ್ಪ ಅವರು ಬೂದು ಬಣ್ಣದ ಶರ್ಟ್, ಕಪುö್ಪ ಪ್ಯಾಂಟ್ ಧರಿಸಿದ್ದು, ಕನ್ನಡ, ಕೊಡವ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಪೊನ್ನಂಪೇಟೆ ಉಪನಿರೀಕ್ಷಕರ ಠಾಣೆ ಸಂಖ್ಯೆ ೦೮೨೭೪-೨೪೯೦೪೪ ತಿಳಿಸಬಹುದಾಗಿದೆ.