ಶನಿವಾರಸಂತೆ, ಮಾ. ೬: ಮಕ್ಕಳಲ್ಲಿ ರಾಷ್ಟಿçÃಯ ಹಬ್ಬಗಳ ಜೊತೆ ಧಾರ್ಮಿಕ ಹಬ್ಬಗಳ ಆಚರಣೆಯ ಮಹತ್ವದ ಅರಿವು ಮೂಡಿಸುವ ಸದುದ್ದೇಶದಿಂದ ಸಂಸ್ಥೆಯಲ್ಲಿ ಶಾರದಾ ಪೂಜೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ ಎಂದು ಬ್ರೆöÊಟ್ ಅಕಾಡೆಮಿ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಹೇಮಾ ಪರಮೇಶ್ ಅಭಿಪ್ರಾಯಪಟ್ಟರು.

ಪಟ್ಟಣದ ಬ್ರೆöÊಟ್ ಅಕಾಡೆಮಿ ವಿದ್ಯಾಸಂಸ್ಥೆಯಲ್ಲಿ ನಡೆದ ಶಾರದಾ ಪೂಜೆ ಹಾಗೂ ಸೌಹಾರ್ದ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಂಸ್ಥೆಯಲ್ಲಿ ೭೫ ವಿದ್ಯಾರ್ಥಿಗಳಿದ್ದು, ವೈವಿಧ್ಯಮಯ ಸಾಂಪ್ರದಾಯಿಕ ಉಡುಗೆ ಧರಿಸಿ ಪೂಜಾ ಸಮಾರಂಭದಲ್ಲಿ ಪಾಲ್ಗೊಂಡರು. ಹಾಡು ಹಾಗೂ ನೃತ್ಯ ಕಾರ್ಯಕ್ರಮ ಪ್ರದರ್ಶಿಸಿ ರಂಜಿಸಿದರು.

ಸAಸ್ಥೆ ಅಧ್ಯಕ್ಷ ಪರಮೇಶ್, ನಿರ್ದೇಶಕಿ ಸೀತಮ್ಮ, ಲೇಖಕಿ ನಯನತಾರಾ, ಪತ್ರಕರ್ತರಾದ ಪ್ರಕಾಶ್ ಚಂದ್ರ, ನರೇಶ್ಚಂದ್ರ, ಪ್ರಾಂಶುಪಾಲೆ ಟಿ.ಎನ್. ಚೈತ್ರಾ, ಶಿಕ್ಷಕಿಯರಾದ ಭ್ರಾಮ್ಯಾ, ಸೌಮ್ಯಾ, ಪವಿತ್ರಾ, ಕವನಾ, ಸಿಬ್ಬಂದಿ ರುಕ್ಮಿಣಿ, ಸಚಿನ್ ಹಾಜರಿದ್ದರು.