ಮಡಿಕೇರಿ/ಕಣಿವೆ, ಮಾ. ೫ : ರಷ್ಯಾ ಆಕ್ರಮಿತ ಉಕ್ರೇನ್ನ ಯುದ್ಧಭೂಮಿಯಲ್ಲಿ ಸಿಲುಕಿ ನೀರು - ಆಹಾರವಿಲ್ಲದೇ ಸಂಕಷ್ಟದಲ್ಲಿ ಸಿಲುಕಿದ್ದ ಕೊಡಗಿನ ಹಲವು ವಿದ್ಯಾರ್ಥಿಗಳು ಸೈನಿಕರ ನಾಡು ತಮ್ಮ ತವರಿಗೆ ಸುರಕ್ಷಿತವಾಗಿ ಆಗಮಿಸಿದ್ದಾರೆ.
ವೈದ್ಯಕೀಯ ಶಿಕ್ಷಣ ಪಡೆಯಲು ಉಕ್ರೇನ್ಗೆ ತೆರಳಿದ್ದ ಗೋಣಿಕೊಪ್ಪ ನಿವಾಸಿ ಗಫೂರ್ ಅವರ ಪುತ್ರಿ ಮಧೀಹ ಎಮ್.ಜಿ ಮೊದಲಿಗೆ ತಾ.೧ ರಂದೇ ಜಿಲ್ಲೆಗೆ ಆಗಮಿಸಿದರು.
ಬಳಿಕ ಆಲಿಶಾ ಸಯ್ಯದ್ ಅಲಿ, ಅಶ್ವಿನ್ ಕುಮಾರ್, ಪೊನ್ನಂಪೇಟೆಯ ಸಿನಿಯಾ ವಿ.ಜೆ, ಶನಿವಾರಸಂತೆಯ ಅಶ್ವಿನ್ ಕುಮಾರ್, ವೀರಾಜಪೇಟೆ ಹೆಗ್ಗಳ ಗ್ರಾಮದ ಡಯಾನ ಮೇರಿ, ಅಮ್ಮತ್ತಿ ಹೊಸೂರಿನ ಎಂ.ಪಿ ನಿರ್ಮಲಾ ಅವರುಗಳು ಕೂಡ ಮನೆಗೆ ವಾಪಸ್ಸಾಗಿದ್ದಾರೆ. ಕೆಲ ವಿದ್ಯಾರ್ಥಿಗಳ ಪೋಷಕರು ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ತೆರಳಿ ತಮ್ಮ ಮಕ್ಕಳನ್ನು ಬರಮಾಡಿಕೊಂಡರೆ, ಇನ್ನು ಕೆಲ ವಿದ್ಯಾರ್ಥಿಗಳ ಪೋಷಕರು, ಮನೆಯಲ್ಲಿಯೇ ಮಕ್ಕಳನ್ನು ಸ್ವಾಗತಿಸಿದರು.
ಕುಶಾಲನಗರ ತಾಲೂಕಿನ ಕೂಡ್ಲೂರು ಗ್ರಾಮದ ಕೆ.ಕೆ. ಮಂಜುನಾಥಕುಮಾರ್ ಅವರ ಪುತ್ರ ಚಂದನ್ಗೌಡ ಹಾಗೂ ಗುಮ್ಮನಕೊಲ್ಲಿ ಗ್ರಾಮದ ಲಿಖಿತ್ ಅವರುಗಳು ಮನೆಗೆ ಬಂದಾಗ ಅವರ ಅಮ್ಮಂದಿರು ಆರತಿ ಮಾಡಿ ತಮ್ಮ ಮಕ್ಕಳನ್ನು ಬರಮಾಡಿಕೊಂಡರು.
ಪೊನ್ನAಪೇಟೆ ನಿವಾಸಿ ಜೋಸ್ ಅವರ ಪುತ್ರಿ ಸಿನಿಯಾ ಅವರು ತಮ್ಮ ಅನುಭವ ಹಂಚಿಕೊAಡಿದ್ದು, ರೈಲು ಪಯಣದಲ್ಲಿ ಅನುಭವಿಸಿದ ಕಷ್ಟವನ್ನು ವಿವರಿಸಿದರು. ಕೆಲ ವಿದ್ಯಾರ್ಥಿಗಳಿಗೆ ರೈಲು ಏರಲು ಉಕ್ರೇನಿನವರು ನಿರಾಕರಿಸಿದ ಕಾರಣ, ಟಿಕೆಟ್ ಕಲೆಕ್ಟರ್ ಅವರ ಮುಖಾಂತರ ಹೇಗೋ ರೈಲನ್ನು ಏರಿ ರೈಲಿನ ಶೌಚಾಲಯದಲ್ಲಿ ಕುಳಿತು ಕ್ವಿವ್ನಿಂದ ಉಕ್ರೇನಿನ ಗಡಿವರೆಗೆ ಪ್ರಯಾಣಿಸಿದ್ದಾಗಿ ಮಾಹಿತಿ ಇತ್ತರು. ಚಂದನ್ ಗೌಡ ಅವರು ತಮ್ಮ ಅನುಭವ ಹಂಚಿಕೊAಡಿದ್ದು, ಕಳೆದ ನಾಲ್ಕು ದಿನಗಳ ಹಿಂದಷ್ಟೇ ಗುಂಡೇಟಿಗೆ ಬಲಿಯಾದ ರಾಣೆಬೆನ್ನೂರಿನ ನವೀನ್ ತಮ್ಮೊಂದಿಗೆ ಬಂಕರ್ನಲ್ಲಿದ್ದ. ಒಟ್ಟು ಒಂಭತ್ತು ಮಂದಿ ತಾವು ಒಟ್ಟಿಗೆ ಇದ್ದೆವು. ಈ ಮಧ್ಯೆ ತಾವು ಜೀವದ ಹಂಗು ತೊರೆದು ಕಾಲ್ನಡಿಗೆಯಲ್ಲಿ ರೈಲ್ವೆ ನಿಲ್ದಾಣಕ್ಕೆ ತೆರಳಿ ಭಾರೀ ಸಂಕಷ್ಟದ ಸ್ಥಿತಿಯಲ್ಲಿ ಪ್ರಯಾಣಿಸುತ್ತಿದ್ದಾಗ ನವೀನ್ ಮೃತಪಟ್ಟ ಬಗ್ಗೆ ತಮಗೆ ಮಾಹಿತಿ ಬಂದಾಗ ನಾವು ಕುಸಿದು ಬಿದ್ದೆವು. ಮತ್ತೋರ್ವ ಗೆಳೆಯ ಬೆಂಗಳೂರಿನ ಯಶವಂತ್ ಜೊತೆಗೂಡಿ ಆಹಾರ ತರಲು ಬಂಕರ್ ನಿಂದ ನವೀನ್ ಹೊರಹೋಗಿದ್ದ. ಆ ಸಂದರ್ಭ ಭಾರೀ ಚಳಿ ಇದ್ದ ಕಾರಣ ಯಶವಂತ್ ಜರ್ಕಿನ್ ಹಾಗೂ ಚಾಕಲೇಟ್ ಖರೀದಿಸಲು ಬೇರೆ ಕಡೆ ತೆರಳಿದಾಗ, ನವೀನ್ ಹತನಾಗಿದ್ದ. ಒಂದು ವೇಳೆ ಯಶವಂತ್ ಕೂಡ ನವೀನ್ ಒಟ್ಟಿಗೆ ಇದ್ದಿದ್ದರೆ ಯಶವಂತ್ ಕೂಡ ಬದುಕುಳಿಯುತ್ತಿರಲಿಲ್ಲ ಎಂದು ವಿವರಿಸುತ್ತಾ ಭಾವುಕರಾದರು.
ಶನಿವಾರಸಂತೆ: ಪಟ್ಟಣದ ಉದ್ಯಮಿ ಬಿ.ಕೆ. ವಿನಯ್ ಕುಮಾರ್ - ವಿಜಯಲಕ್ಷಿö್ಮ ದಂಪತಿಯ ಪುತ್ರ ಅಶ್ವಿನ್ ಕುಮಾರ್ ‘ಶಕ್ತಿ’ಯೊಂದಿಗೆ ಮಾತನಾಡಿ, ಯುದ್ಧ ಆರಂಭವಾ ಗುವ ವಿಷಯ ತಿಳಿಯುತ್ತಿದ್ದಂತೆ ೩ ವಾರಗಳಿಗಾಗುವಷ್ಟು ಆಹಾರ, ನೀರು ಸಂಗ್ರಹಿಸಿ ಅಪಾರ್ಟ್ಮೆಂಟ್ನ ‘ಬೇಸ್ಮೆಂಟ್’ನಲ್ಲಿ ಉಳಿದಿದ್ದುದಾಗಿ ವಿವರಿಸಿದರು. ಫೆ.೨೭ರಂದು ೧೦೦ ವಿದ್ಯಾರ್ಥಿಗಳೊಂದಿಗೆ ಮೆಟ್ರೋದಲ್ಲಿ ಸವಾರಿ ಮಾಡಿ ಕಾಲ್ನಡಿಗೆಯಲ್ಲಿ ೫ ಕಿ.ಮೀ. ನಡೆದು ರೈಲು ನಿಲ್ದಾಣ ತಲುಪಿ, ೨ ದಿನಗಳ ಕಾಲ ಅಲ್ಲೇ ಮಲಗಿದ್ದ ಬಗ್ಗೆ ಕಹಿ ಅನುಭವ ಹಂಚಿಕೊAಡರು.