ಮಡಿಕೇರಿ, ಮಾ. ೬: ಕೊಡಗು ಜಿಲ್ಲೆ ವ್ಯಾಪ್ತಿಯಲ್ಲಿ ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕರ ಸಮೀಕ್ಷೆ ಮೂಲಕ ಗುರುತಿಸಲು ಅರ್ಹ ಸರ್ಕಾರೇತರ ಸಂಘ ಸಂಸ್ಧೆಗಳಿAದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಯನ್ನು ಸೂಕ್ತ ದಾಖಲೆಗಳ ಸಮೇತ ಸಲ್ಲಿಸುವುದು. ಸರ್ಕಾರೇತರ ಸಂಸ್ಧೆಗಳು ನಿಗಧಿತ ದಾಖಲೆಗಳೊಂದಿಗೆ ತಾ. ೧೬ ರೊಳಗೆ ಕಾರ್ಮಿಕ ಅಧಿಕಾರಿಗಳು, ಕಾರ್ಮಿಕ ಇಲಾಖೆ ಮೊದಲನೆ ಮಹಡಿ ಕೊಠಡಿ ಸಂಖ್ಯೆ ೧೧, ಜಿಲ್ಲಾಡಳಿತ ಭವನ, ಮಡಿಕೇರಿ ಕೊಡಗು ಜಿಲ್ಲೆ ಇವರಿಗೆ ತಲುಪುವಂತೆ ಅರ್ಜಿ ಸಲ್ಲಿಸಲು ತಿಳಿಸಿಲಾಗಿದೆ. ಅಪೂರ್ಣ ಅರ್ಜಿ ಮತ್ತು ತದನಂತರ ಸ್ವೀಕೃತವಾದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
ಅರ್ಜಿ ಸಲ್ಲಿಸುವ ಸರ್ಕಾರೇತರ ಸಂಘ ಸಂಸ್ಧೆಗಳ ಅರ್ಹತೆಗಳು: ಸಂಸ್ಧೆಯು ಸಕ್ಷಮ ನೋಂದಣಾಧಿಕಾರಿಗಳಲ್ಲಿ ನೋಂದಣಿ ಹೊಂದಿರಬೇಕು ಮತ್ತು ಕನಿಷ್ಟ ೦೩ ವರ್ಷಗಳ ಅವಧಿಯಾಗಿರಬೇಕು. ಕಾಲ ಕಾಲಕ್ಕೆ ನವೀಕರಿಸಿದ ಪ್ರಮಾಣ ಪತ್ರ ಹೊಂದಿರಬೇಕು. ಈ ಹಿಂದೆ ಇಂತಹ ಯಾವುದಾದರು ಸಮೀಕ್ಷೆ ನಡೆಸಿದ ಅನುಭವ ಹೊಂದಿದ್ದಲ್ಲಿ, ಅನುಭವ ಪ್ರಮಾಣ ಪತ್ರವನ್ನು ಲಗತ್ತಿಸಬೇಕು. ಸಮೀಕ್ಷೆಯನ್ನು ಯಶಸ್ವಿಯಾಗಿ ನಡೆಸಿ, ದತ್ತಾಂಶ ಸಂಗ್ರಹಿಸಿ, ವಿಶ್ಲೇಷಿಸಿ ಸಾಫ್ಟ್ ಹಾಗೂ ಹಾರ್ಡ್ ಕಾಫಿ ಪ್ರತಿ ಒದಗಿಸಬೇಕು.
ಅಪಾಯಕಾರಿ ಹಾಗೂ ಅಪಾಯಕಾರಿ ಅಲ್ಲದ ಸಂಸ್ಧೆಗಳಲ್ಲಿ ದುಡಿಯುತ್ತಿರುವ ಬಾಲಕಾರ್ಮಿಕರನ್ನು ಗುರುತಿಸುವ ಕಾರ್ಯವನ್ನು ಬೆಳಗ್ಗೆ ೧೦ ಗಂಟೆಯಿAದ ಸಂಜೆ ೬ ರವರೆಗೆ ಮಾಡುವುದು. ಆಯ್ಕೆಯಾಗುವ ಸರ್ಕಾರೇತರ ಸಂಸ್ಧೆಯ ಸಮೀಕ್ಷೆದಾರರಿಗೆ ತರಬೇತಿ ನೀಡಲಾಗುವುದು. ಸಮೀಕ್ಷೆ ಕಾರ್ಯವನ್ನು ಕೈಗೊಳ್ಳಲು ಆದೇಶ ನೀಡಿದ ೧೫ ದಿನಗಳಲ್ಲಿ ಪೂರ್ಣಗೊಳಿಸಬೇಕು. ಜಿಲ್ಲಾ/ ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಅಪಾಯಕಾರಿ ಹಾಗೂ ಅಪಾಯಕಾರಿ ಅಲ್ಲದ ಸಂಸ್ಧೆಗಳಿಗೆ ಭೇಟಿ ನೀಡಿ ನಮೂನೆ ಭರ್ತಿ ಮಾಡುವುದು. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಆದಿವಾಸಿಗಳು/ ಅಲ್ಪಸಂಖ್ಯಾತ/ ಕೊಳಗೇರಿ ಪ್ರದೇಶಗಳನ್ನು ಗುರುತಿಸಿ, ಭೇಟಿ ಮಾಡಿ ನಮೂನೆಯನ್ನು ಭರ್ತಿ ಮಾಡುವುದು. ಸಮೀಕ್ಷೆ ಮಾಡಿದ ಮಾಹಿತಿಯು ಶೇ.೧೦ ಕ್ಕಿಂತ ಹೆಚ್ಚು ತಪ್ಪು ಎಂದು ಕಂಡುಬAದಲ್ಲಿ ಅಂತಹ ಸರ್ಕಾರೇತರ ಸಂಸ್ಧೆಗೆ ಹಣ ಪಾವತಿಮಾಡುವುದಿಲ್ಲ.
ಹೆಚ್ಚಿನ ಮಾಹಿತಿಯನ್ನು ಯೋಜನಾ ನಿರ್ದೇಶಕರು, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ, ಮೊದಲನೆ ಮಹಡಿ, ಕೊಠಡಿ ಸಂಖ್ಯೆ ೧೧, ಜಿಲ್ಲಾಢಳಿತ ಭವನ, ಕೊಡಗು ಜಿಲ್ಲೆ, ಮಡಿಕೇರಿ, ಜಛಿಟಠಿsmಚಿಜiಞeಡಿi@gmಚಿiಟ.ಛಿom ದೂ.ಸಂ.೦೮೨೭೨-೨೨೦೨೨೪ ನ್ನು ಸಂಪರ್ಕಿಸಬಹುದು.