ನಾಪೋಕ್ಲು, ಮಾ. ೬: ಮೊಬೈಲ್ನಲ್ಲಿ ವಾಟ್ಸಪ್, ಫೇಸ್ಬುಕ್, ಇನ್ಸಾ÷್ಟಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣಗಳನ್ನು ಬಳಸುವವರು ಹೆಚ್ಚಿನ ಜಾಗೃತೆಯಿಂದಿರಬೇಕು ಎಂದು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಸಲಹೆ ನೀಡಿದರು.
ಸಮೀಪದ ರಾಫಲ್ಸ್ ಆಂಗ್ಲ ಮಾಧ್ಯಮ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಸ್ನೇಹ ಬೆಳೆಸಿಕೊಳ್ಳುವ ನೆಪದಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ಹೆಚ್ಚಾಗಿ ನಡೆಯುತ್ತಿದೆ. ಇದರ ಬಗ್ಗೆ ಹೆಣ್ಣು ಮಕ್ಕಳು ಹೆಚ್ಚು ಜಾಗೃತರಾಗಿರಬೇಕು. ಅಪರಿಚಿತರಿಗೆ ಫೋಟೋ ಕಳುಹಿಸಿ ಗೊಂದಲಕ್ಕೀಡಾ ಗುವದು ಬೇಡ ಎಂದು ಅವರು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿ ನಿರ್ದೇಶಕ ಹಮೀದ್ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತನ್ನು ಅಳವಡಿಸಿ ಕೊಳ್ಳಬೇಕು. ಆಗ ಮಾತ್ರ ಉತ್ತಮ ಹೆಸರುಗಳಿಸಲು ಸಾಧ್ಯ. ಪ್ರತೀ ದಿನ ಇಂಗ್ಲೀಷ್ ಸೇರಿದಂತೆ ಇತರ ಪತ್ರಿಕೆ ಗಳನ್ನು ಓದುವದರಿಂದ ಭಾಷೆಯ ಬಗ್ಗೆ ಜ್ಞಾನ ಹಾಗೂ ಸಮಾಜದ ಆಗುಹೋಗುಗಳನ್ನು ಅರಿಯಲು ಸಾಧ್ಯ ಎಂದು ಸಲಹೆ ನೀಡಿದರು.
ಕಾಲೇಜು ಪ್ರಾಂಶುಪಾಲ ತನ್ವೀರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕಿ ರೇಖಾ ವಿದ್ಯಾಸಂಸ್ಥೆಯ ವಾರ್ಷಿಕ ವರದಿ ವಾಚಿಸಿದರು.
ವೇದಿಕೆಯಲ್ಲಿ ಹೊದ್ದೂರು ಗ್ರಾ.ಪಂ. ಸದಸ್ಯ ಮೊÊದು, ನಾಪೋಕ್ಲು ಪಟ್ಟಣದ ಉದ್ಯಮಿ ಎಂ.ಎ. ಮನ್ಸೂರ್ ಅಲಿ ಇದ್ದರು. ಈ ಸಂದರ್ಭ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ ಬಹುಮಾನ ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು.