ಸುಂಟಿಕೊಪ್ಪ, ಮಾ.೫: ೭ನೇ ಹೊಸಕೋಟೆಯ ಕಲ್ಲುಕೋರೆ ಗ್ರಾಮದ ಶ್ರೀಭದ್ರಕಾಳಿ ದೇವಸ್ಥಾನದ ೪೫ನೇ ವರ್ಷದ ಭರಣಿ ಮಹಾಪೂಜೆ ತಾ. ೭ರಂದು ನಡೆಯಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಮುರುಗೇಶ್ ತಿಳಿಸಿದ್ದಾರೆ.

ತಾ. ೭ ರಂದು ಸೋಮವಾರ ಬೆಳಿಗ್ಗೆ ೬ ಗಂಟೆಗೆ ಗಣಪತಿ ಹೋಮ, ೭.೩೦ ಗಂಟೆಗೆ ನಾಗದೇವರ ಪೂಜೆ, ೮.೩೦ ಗಂಟೆಗೆ ದೇವಿಪೂಜೆ, ೧೦ ಗಂಟೆಗೆ ದೇವಿ ದರ್ಶನ, ೧೧.೩೦ ಗಂಟೆಗೆ ಮಹಾಮಂಗಳಾರತಿ, ಅಪರಾಹ್ನ ೧೨ ಗಂಟೆಗೆ ಗುರುದಿಪೂಜೆ, ೧೨.೩೦ ಗಂಟೆಗೆ ಪ್ರಸಾದ ವಿತರಣೆ, ೧ ಗಂಟೆಗೆ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ ೬ ಗಂಟೆಗೆ ದೀಪಾರಾಧನೆ ಹಾಗೂ ಮಹಾಮಂಗಳಾರತಿ, ೭ ಗಂಟೆಗೆ ಭೈರವೇಶ್ವರಿ ದೇವಿಗೆ ಪೂಜೆ, ೭.೩೦ ಗಂಟೆಗೆ ಪ್ರಸಾದ ವಿತರಿಸಲಾಗುವುದು, ೮ ಗಂಟೆಗೆ ಚಂಡೆಮೇಳ ಹಾಗೂ ೮.೩೦ ಗಂಟೆಗೆ ಅನ್ನ ಸಂತರ್ಪಣೆ ನಡೆಯಲಿದೆ. ದೇವಾಲಯದಲ್ಲಿ ನಡೆಯುವ ವಿಶೇಷ ಪೂಜಾ ಕೈಂಕರ್ಯಗಳಲ್ಲಿ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಆಶೀರ್ವಚನ ಪಡೆದುಕೊಳ್ಳುವಂತೆ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಮುರುಗೇಶ್ ಹಾಗೂ ಕಾರ್ಯದರ್ಶಿ ಸಂತೋಷ್ ತಿಳಿಸಿದ್ದಾರೆ.