ಗೋಣಿಕೊಪ್ಪ, ಮಾ. ೫: ಬಲ್ಯಮುಂಡೂರು ದುರ್ಗಾಪರಮೇಶ್ವರಿ ದೇವಿಯ ವಾರ್ಷಿಕೋತ್ಸವ ತಾ. ೬ ರಂದು (ಇಂದು) ಮತ್ತು ೭ ರಂದು ನಡೆಯಲಿದೆ.

ಭಾನುವಾರ ತುಲಾಭಾರ, ತಲೆಮುಡಿ, ಮಹಾಪೂಜೆ, ಸಾಯಂಕಾಲ ೪ ಗಂಟೆಗೆ ನೆರಪು, ಸೋಮವಾರ ಬೆಳಗ್ಗೆ ೯ ಗಂಟೆಯಿAದ ಪೂಜಾ ಕಾರ್ಯ ನಡೆಯಲಿದೆ. ಸಾಯಂಕಾಲ ೫.೩೦ ಗಂಟೆಗೆ ಉತ್ಸವಮೂರ್ತಿ ದರ್ಶನ, ಅವಭೃತ ಸ್ನಾನ, ವಸಂತ ಪೂಜೆ ನಡೆಯಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.