ಮಡಿಕೇರಿ, ಮಾ. ೫: ಕೊಡವ ಬುಡಕಟ್ಟು ಮಹಿಳೆಯರಿಗೆ ರಾಜಕೀಯ-ಸಾಂವಿಧಾನಿಕ ಹಕ್ಕುಗಳ ಅಧಿಕಾರ ನೀಡುವ ಸಲುವಾಗಿ ಅಂರ‍್ರಾಷ್ಟಿçÃಯ ಮಹಿಳಾ ದಿನದ ಆಚರಣೆಗೆ ಹೊಸ ಆಯಾಮವನ್ನು ನೀಡಿ, ತಾ. ೮ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಶಾಂತಿಯುತ ಸಮಾವೇಶ ನಡೆಯಲಿದೆ ಎಂದು ಸಿ.ಎನ್.ಸಿ. ಅಧ್ಯಕ್ಷ ಎನ್.ಯು. ನಾಚಪ್ಪ ತಿಳಿಸಿದ್ದಾರೆ.

ಈ ವರ್ಷದ ಅಂರ‍್ರಾಷ್ಟಿçÃಯ ಮಹಿಳಾ ದಿನದ ವಿಷಯ ಅಸಮಾನತೆಯನ್ನು ಮುರಿಯುವುದು ಎಂದಾಗಿದ್ದು, ಲಿಂಗ ಸಮಾನತೆ, ತಾರತಮ್ಯ ಮುಕ್ತವಾದ ಜಗತ್ತನ್ನು ಸೃಷ್ಟಿಸುವ ಗುರಿ ಇದೆ. ಸತ್ಯಾಗ್ರಹ ಬಳಿಕ ಸರಕಾರಕ್ಕೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಗುವುದಾಗಿ ಎನ್.ಯು. ನಾಚಪ್ಪ ಅವರು ತಿಳಿಸಿದ್ದಾರೆ.