ಕೂಡಿಗೆ, ಮಾ. ೬: ಉಕ್ರೇನ್‌ನಲ್ಲಿ ಸಿಲುಕಿದ್ದ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲೇನಹಳ್ಳಿ ವಿದ್ಯಾರ್ಥಿನಿ ಸುರಕ್ಷಿತವಾಗಿ ಭಾನುವಾರ ಮನೆ ಸೇರಿದರು.

ಮಲ್ಲೇನಹಳ್ಳಿ ಗ್ರಾಮದ ನಿವಾಸಿ ಐಮುಡಿಯಂಡ ರಮೇಶ್ ಎಂಬವರ ಪುತ್ರಿ ಅಕ್ಷಿತಾ ಅಕ್ಕಮ್ಮ ಖಾರ್ಕಿವ್ ನ್ಯಾಷನಲ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ ದ್ವಿತೀಯ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದು, ತವರಿಗೆ ಸುರಕ್ಷಿತವಾಗಿ ತಲುಪಿ ಖಾರ್ಕಿವ್‌ನಲ್ಲಿ ಘಟಿಸಿದ ಅನಿರೀಕ್ಷಿತ ಬೆಳವಣಿಗೆಗಳು ಹಾಗೂ ಅಲ್ಲಿಂದ ಭಾರತಕ್ಕೆ ತಲುಪಲು ಮಾಡಿದ ಸಾಹಸದ ಬಗ್ಗೆ ವಿವರಿಸಿದರು. ಭಾರತೀಯರ ಸಂರಕ್ಷಣೆಗೆ ಕೇಂದ್ರ, ರಾಜ್ಯ ಸರಕಾರ ತೋರಿದ ದಿಟ್ಟ ನಡೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.