ಗೋಣಿಕೊಪ್ಪ ವರದಿ, ಮಾ. ೫ : ಶ್ರೀಮಂಗಲದಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಿರುವ ೬೬ ಕೆ.ವಿ. ವಿದ್ಯುತ್ ಮಾರ್ಗದ ಭೂ ಮಾಲೀಕರಿಗೆ ಸರ್ಕಾರದಿಂದ ಪರಿಹಾರ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಹೇಳಿದರು.
ಶ್ರೀಮಂಗಲ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ವಿದ್ಯುತ್ ಮಾರ್ಗದ ಭೂ ಪರಿಹಾರದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಈಗಾಗಲೇ ೩೩ ಕೆ.ವಿ ಇರುವ ವಿದ್ಯುತ್ ಮಾರ್ಗವನ್ನು ೬೬ ಕೆ.ವಿಗೆ ಮೇಲ್ದರ್ಜೆಗೇರಿಸಲು ಉದ್ದೇಶಿಸಲಾಗಿದೆ. ವಿದ್ಯುತ್ ಸಮಸ್ಯೆ ಪರಿಹರಿಸಲು ಕ್ರಮಕೈಗೊಳ್ಳಲಾಗಿದೆ. ಇದರಂತೆ ಪೊನ್ನಂಪೇಟೆ ಮೂಲಕ ಹಾದು ಬರುವ ಮಾರ್ಗದ ಭೂ ಮಾಲೀಕರಿಗೆ ಸೂಕ್ತ ಪರಿಹಾರ ನೀಡಲು ಯೋಜನೆ
(ಮೊದಲ ಪುಟದಿಂದ) ರೂಪಿಸಲಾಗಿದ್ದು, ಅರಣ್ಯ ಇಲಾಖೆ, ಕೃಷಿ, ತೋಟಗಾರಿಕಾ ಇಲಾಖೆ ಮೂಲಕ ಮಾಹಿತಿ ಪಡೆದು ನಿರ್ಧರಿಸಲಾಗುವುದು. ಶೀಘ್ರದಲ್ಲಿಯೇ ಮತ್ತೊಂದು ಸಭೆ ನಡೆಸಿ ಪರಿಹಾರದ ಮೊತ್ತ ತಿಳಿಸಲಾಗುವುದು. ಸ್ಥಳೀಯರು ಯೋಜನೆ ಅನುಷ್ಠಾನಕ್ಕೆ ಬೆಂಬಲ ನೀಡಬೇಕಿದೆ, ಎಲ್ಲರ ಸಹಕಾರ ಅಗತ್ಯ ಎಂದರು.
ಪೊನ್ನಂಪೇಟೆ ತಹಶೀಲ್ದಾರ್ ಎನ್. ಎಸ್. ಪ್ರಶಾಂತ್, ವೀರಾಜಪೇಟೆ ಡಿವೈಎಸ್‌ಪಿ ಜಯಕುಮಾರ್, ಜಿಲ್ಲಾ ಸೆಸ್ಕ್ ಕಾರ್ಯನಿರ್ವಹಣಾ ಅಭಿಯಂತರ ಅಶೋಕ್, ಗೋಣಿಕೊಪ್ಪ ಎಇಇ ಡಿ. ಎನ್. ನೀಲಶೆಟ್ಟಿ, ಕೆಪಿಟಿಸಿಎಲ್ ಮೈಸೂರು ವಿಭಾಗದ ಮುಖ್ಯ ಅಭಿಯಂತರ ಕೋದಂಡಪಾಣಿ, ಕಾರ್ಯನಿರ್ವಾಹಕ ಅಭಿಯಂತರ ಮಾದೇಶ್ ಇದ್ದರು.