ಚೆಯ್ಯಂಡಾಣೆ, ಮಾ. ೫: ಕೊಡಗಿನ ಇತಿಹಾಸ ಪ್ರಸಿದ್ಧ ಅಧ್ಯಾತ್ಮಿಕ ಹಾಗೂ ಸರ್ವಧರ್ಮೀಯರ ಅಭಯ ಕೇಂದ್ರವಾದ ಎಮ್ಮೆಮಾಡು ಸೂಫಿ ಶಹೀದ್ ಹಾಗೂ ಹಸ್ಸನ್ ಸಖಾಫ್ ತಂಙಳ್ ಅವರ ಹೆಸರಿನಲ್ಲಿ ವರ್ಷಂಪ್ರತಿ ಆಚರಿಸುವ ಉರೂಸ್ ಕಾರ್ಯಕ್ರಮಕ್ಕೆ ಅಧಿಕೃತವಾಗಿ ತೆರೆ ಎಳೆಯಲಾಯಿತು.

ಸಹಸ್ರಾರು ಭಕ್ತಾದಿಗಳ ಉಪಸ್ಥಿತಿಯಲ್ಲಿ ಎಂಟು ದಿನಗಳ ಕಾಲ ಸಂಪನ್ಮೂಲ ವ್ಯಕ್ತಿಗಳ ಸಾರಥ್ಯದಲ್ಲಿ ನಡೆದ ಉರೂಸ್ ಸಮಾರಂಭದಲ್ಲಿ ಸಮಾರೋಪ ಜುಮಾ ನಮಾಝ್ ಬಳಿಕ ಕೊಡಗು ಜಿಲ್ಲಾ ನಾಯಿಬ್ ಖಾಝಿ ಶಾದುಲಿ ಪೈಝಿ ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾ ಕಾರ್ಯದರ್ಶಿ ಹಾಗೂ ಕಲ್ಲಿಕೋಟೆಯ ಮರ್ಕಝ್ ಸಂಸ್ಥೆಯ ಪ್ರಾಚಾರ್ಯ ಕಾಂತಪುರA ಎ.ಪಿ. ಮುಹಮ್ಮದ್ ಮುಸ್ಲಿಯಾರ್ ನೆರವೇರಿಸಿದರು. ಸೂಫಿ ಶಹೀದ್ ದರ್ಗಾ ಶಾಂತಿ ಸೌಹಾರ್ದತೆಗೆ ಹೆಸರುವಾಸಿಯಾಗಿದೆ.

ಇಲ್ಲಿ ಸಂಗಮಗೊAಡ ಸಹಸ್ರಾರು ಭಕ್ತಾದಿಗಳ ಪೈಕಿ ಯಥೇಚ್ಛವಾಗಿ ಇತರ ಧರ್ಮೀಯರ ಉಪಸ್ಥಿತಿ ಇದಕ್ಕೆ ಉದಾಹರಣೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕರ್ತರಾಗಿ ಆಗಮಿಸಿದ ಎಸ್.ವೈ.ಎಸ್. ರಾಜ್ಯಾಧ್ಯಕ್ಷ ಡಾ. ಎಂ.ಎಸ್.ಎA. ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ ಕಕ್ಕಿಂಜೆ ಮಾತನಾಡಿ, ಶಾಂತಿ ಸೌಹಾರ್ದತೆಯಿಂದ ಬಾಳುವ ನಾಡು ನಮ್ಮ ಭಾರತ. ಇಲ್ಲಿ ಎಲ್ಲಾ ಜಾತಿ, ಧರ್ಮಗಳಿಗೂ ಸಮಾನವಾಗಿ ಜೀವಿಸುವ ಹಕ್ಕಿದೆ. ಎಲ್ಲಾ ಧರ್ಮಗಳ ಮಧ್ಯೆ ಕಲಹ ಉಂಟುಮಾಡುವ ಕೆಲಸವಾಗಕೂಡದು. ಇಸ್ಲಾಂ ಎಂದಿಗೂ ಜನರನ್ನು ಭಯಪಡಿಸುವ ಹಾಗೂ ಯಾವುದೇ ತೊಂದರೆಯಾಗುವ ರೀತಿಯಲ್ಲಿ ವರ್ತಿಸಿಲ್ಲ. ಇಸ್ಲಾಂ ಶಾಂತಿ ಸಹಬಾಳ್ವೆ, ಭ್ರಾತೃತ್ವ, ಸಹನೆ ಇದನ್ನು ರುಜುವಾತುಗೊಳಿಸಿದೆ. ಇಜಾಬ್ ಮುಸ್ಲಿಂ ಪ್ರೌಢಾವಸ್ಥೆಗೆ ತಲುಪಿದ ಮಹಿಳೆಯರಿಗೆ ಮುಖ್ಯವಾದದ್ದು ಎಂದರು.

ಕಾರ್ಯಕ್ರಮದಲ್ಲಿ ಜಮಾಅತ್ ಅಧ್ಯಕ್ಷ ಖಾದರ್ ಹಾಜಿ, ಕೂರ್ಗ್ ಜಂಇಯ್ಯತ್ತುಲ್ ಉಲಮಾದ ಪದಾಧಿಕಾರಿಗಳಾದ ಸಯ್ಯದ್ ಕಿಲ್ಲೂರ್ ತಂಙಳ್, ಹುಸೈನ್ ಸಖಾಫಿ, ಸಯ್ಯಿದ್ ಇಲ್ಯಾಸ್ ಅಲ್ ಹೈದರೂಸಿ, ಅಬ್ದುಲ್ ಜಲೀಲ್ ನಿಝಾಮಿ, ವಾಗ್ಮಿ ಅಶ್ರಫ್ ಜೌಹರಿ, ಗ್ರಾಮ ಪಂಚಾಯಿತಿ ಸದಸ್ಯ ಚಕ್ಕೇರ ಇಸ್ಮಾಯಿಲ್, ಸ್ಥಳೀಯ ಖತೀಬ್ ಉಸ್ತಾದರಾದ ಅಬ್ದುಲ್ ಸಲಾಂ ಶಾಮಿಲ್ ಇರ್ಫಾನಿ ಕಾಮಿಲ್ ಸಖಾಫಿ ಮತ್ತಿತರರು ಉಪಸ್ಥಿತರಿದ್ದರು. ಸ್ವಾಗತವನ್ನು ಇಬ್ರಾಹಿಂ ಸಅದಿ ಹಾಗೂ ವಂದನೆಯನ್ನು ಅಶ್ರಫ್ ಬಿ.ಯು ನೆರವೇರಿಸಿದರು. ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.

ವರದಿ: ಅಶ್ರಫ್ ಚೆಯ್ಯಂಡಾಣೆ