ವೀರಾಜಪೇಟೆ, ಮಾ. ೩: ವೀರಾಜಪೇಟೆಯ ಸೈಂಟ್ ಆನ್ಸ್ ಪದವಿ ಕಾಲೇಜಿನ ಎನ್‌ಎಸ್‌ಎಸ್ ಹಾಗೂ ಡ್ರಗ್ಸ್ ಮುಕ್ತ ಘಟಕದ ವತಿಯಿಂದ ಆಯೋಜಿಸಲಾದ ಡ್ರಗ್ಸ್ ಮುಕ್ತ ಭಾರತ ಮಹಾ ಅಭಿಯಾನ"ಕ್ಕೆ ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್‌ಸಿ)ದ ಸದಸ್ಯೆ ಪವಿತ್ರ ಹೆಚ್.ಜಿ. ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಅವರು ವಿದ್ಯಾರ್ಥಿಗಳ ಮನೋಭಾವ ಸಕಾರಾತ್ಮಕವಾಗಿರಬೇಕು. ಡ್ರಗ್ಸ್ ಸೇವನೆಯು ವಿದ್ಯಾರ್ಥಿಗಳ ಶರೀರ ಮಾತ್ರವಲ್ಲದೆ, ಮಾನಸಿಕ, ಕೌಟುಂಬಿಕ ಹಾಗೂ ಸಾಮಾಜಿಕ ಸ್ಥಾನಮಾನಗಳಲ್ಲಿ ಅಧಃಪತನಕ್ಕೆ ಕೊಂಡೊಯ್ಯುತ್ತದೆ, ಎಂದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಕೊಡಗು ಜಿಲ್ಲಾ ಮಾನಸಿಕ ಆರೋಗ್ಯ ಇಲಾಖೆಯ ಡಾ. ದಾವಿನ್ ಕಾರ್ಕಡ ಡ್ರಗ್ಸ್ ಸ್ವರೂಪದ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ರೆ.ಫಾ. ರೋನಿರವಿಕುಮಾರ್ ವಹಿಸಿದ್ದರು. ಐಕ್ಯೂಎಸಿ ಸಂಯೋಜಕಿ ತೃಪ್ತಿ ಬೋಪಣ್ಣ ಪ್ರಾಸ್ತಾವಿಕ ನುಡಿಯಾಡಿದರು. ವೇದಿಕೆಯಲ್ಲಿ ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಅರ್ಜುನ್ ಹೆಚ್.ಆರ್, ಡ್ರಗ್ಸ್ ಮುಕ್ತ ಘಟಕದ ಮೇಲ್ವಿಚಾರಕಿ ರಶ್ಮಿ ಉಪಸ್ಥಿತರಿದ್ದರು. ಬೋಜಮ್ಮ ನಿರೂಪಿಸಿ, ವಿಖ್ಯಾತ ತಂಡದ ಕವಿತ ಸ್ವಾಗತಿಸಿ, ಸಹನಾ ದೀಕ್ಷಾ ಬ್ರಿಟ್ಟೊ ವಂದಿಸಿದರು.