ವೀರಾಜಪೇಟೆ, ಮಾ. ೩: ಪ್ರತಿಯೊಂದು ಜೀವಜಂತುಗಳಿಗೆ ನೀರಿನ ಅವಶ್ಯಕತೆ ಇದೆ. ಜೀವಜಲವನ್ನು ಉಳಿಸಿಕೊಳ್ಳಲು ಕೆರೆಗಳನ್ನು ಪುನಶ್ಚೇತÀನಗೊಳಿಸುವ ಕಾರ್ಯಗಳು ಎಲ್ಲ್ಲಾ ಕಡೆಗಳಲ್ಲಿ ಆಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾಕುಶಾಲಪ್ಪ ಹೇಳಿದರು.

ವೀರಾಜಪೇಟೆ ತಾಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಸುಂಕದಕಟ್ಟೆ ಕೆರೆ ಅಭಿವೃದ್ಧಿ ಸಮಿತಿ ಮತ್ತು ಪಟ್ಟಣ ಪಂಚಾಯಿತಿ ಇವರ ಸಂಯುಕ್ತ ಆಶ್ರಯದಲ್ಲಿ ‘ನಮ್ಮೂರು ನಮ್ಮ ಕೆರೆ’ ಯೋಜನೆಯಲ್ಲಿ ಸುಂಕದಕಟ್ಟೆ ಪಂಪು ಕೆರೆಯ ಹೂಳೆತ್ತುವ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಜೀವ ಜಲವನ್ನು ಉಳಿಸಿಕೊಂಡರೆ ಮಾತ್ರ ಪರಿಸರ ಉಳಿಸಲು ಸಾಧ್ಯ. ಕೆರೆಯ ಹೂಳೆತ್ತಿದ ಬಳಿಕ ಪಟ್ಟಣಕ್ಕೆ ಆಗತ್ಯವಾದ ಉದ್ಯಾನವನ ನಿರ್ಮಾಣ ಮಾಡುವುದರ ಮೂಲಕ ಪಟ್ಟಣದ ಜನತೆಯ ಆಶಯವನ್ನು ಈಡೇರಿಸಬಹುದಾಗಿದೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸರಕಾರದ ಜೊತೆ ಅಭಿವೃದ್ಧಿಗೆ ಕೈಜೋಡಿಸಿರುವುದು ಪ್ರಶಂಸನಿಯ ಎಂದು ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಡಾ ಯೋಗಿಶ್ ಮಾತನಾಡಿ ಕರ್ನಾಟಕದಲ್ಲಿ ೪೨ ವರ್ಷಗಳಿಂದ ಸಾಮಾನ್ಯ ಜನರ ಆರ್ಥಿಕ ಮಟ್ಟ ಸುಧಾರಣೆಯೊಂದಿಗೆ ಸ್ವಸಹಾಯ ಸಂಘಗಳ ಮೂಲಕ ನೆರವು ನೀಡುತ್ತಾ ಅನೇಕ ಸಮಾಜಮುಖಿ ಕೆಲಸ ಮಾಡಲಾಗುತ್ತಿದೆ. ವಿರೇಂದ್ರ ಹೆಗ್ಗಡೆಯವರು ರಾಜ್ಯದಲ್ಲಿ ಹಲವು ವರ್ಷಗಳ ಹಿಂದೆ ಕಂಡ ಬರವನ್ನು ಮನಗಂಡು ಕೆರೆಗಳ ಪುನಶ್ಚೇತನಕ್ಕೆ ಒತ್ತು ನೀಡಿದ್ದಾರೆ. ಇಂದಿಗೆ ೩೫೫ ನೇ ಕೆರೆಯ ಹೂಳೆತ್ತುವ ಕೆಲಸ ನಡೆಯುತ್ತಿದೆ. ಮಾಸಿಕ ಪಿಂಚಣಿ, ವಿದ್ಯಾರ್ಥಿ ವೇತನ ಸೇರಿದಂತೆ ಅನೇಕ ನೆರವುಗಳನ್ನು ನಮ್ಮ ಸಂಸ್ಥೆ ನೀಡುತ್ತಿದೆ. ‘ನಮ್ಮೂರು ನಮ್ಮ ಕೆರೆ’ ಯೋಜನೆಯಲ್ಲಿ ಈ ಕೆರೆಯ ಹೂಳೆತ್ತುವ ಕಾರ್ಯವನ್ನು ನಡೆಸಲಾಗುತ್ತಿದೆ. ಇದರಿಂದ ಅಂರ್ತಜಲವನ್ನು ಉಳಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದರು.

ತಹಶೀಲ್ದಾರ್ ಯೋಗಾನಂದ್ ಮಾತನಾಡಿ ಅಂದು ರಾಜರ ಕಾಲದಲ್ಲಿ ಪ್ರಕೃತಿಯನ್ನು ಉಳಿಸಲು, ಜನಗಳಿಗೆ ಜಾನುವಾರುಗಳಿಗೆ ಕೃಷಿಗೆ ಎಂದು ಸಾಕಷ್ಟು ಕೆರೆಗಳ ನಿರ್ಮಾಣವಾಯಿತು. ನಶಿಸಿ ಹೋದ ಕೆರೆಗಳನ್ನು ಸಂಘ ಸಂಸ್ಥೆಗಳು ಹೂಳೆತ್ತುವ ಮತ್ತು ಪುನಶ್ಚೇತನÀಗೊಳಿಸುವ ಕಾರ್ಯ ಶ್ಲಾಘನೀಯ ಎಂದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಶ್ಮಿತಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಬಾನಂಗಡ ಅರುಣ, ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಮೂಕೊಂಡ ಶಶಿ ಸುಬ್ರಮಣಿ, ಪ.ಪಂ. ಮುಖ್ಯಾಧಿಕಾರಿ ಚಂದ್ರಕುಮಾರ್, ವೀರಾಜಪೇಟೆ ತಾಲೂಕು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನಾಧಿಕಾರಿ ಪದ್ಮಯ್ಯ, ಸುಂಕದಕಟ್ಟೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ರಾಜೇಶ್ ಪದ್ಮನಾಭ, ಡಿಸಿಸಿ ಬ್ಯಾಂಕ್ ನಿರ್ದೇಶಕ ರಘುನಾಣಯ್ಯ, ಪ.ಪಂ ಸದಸ್ಯರಾದ ಸಚಿನ್ ಕುಟ್ಟಯ್ಯ, ಅನಿತಾ ಕುಮಾರ್, ಆಶಾ ಸುಬ್ಬಯ ಮತ್ತಿತರರು ಇದ್ದರು.