ನಾಪೋಕ್ಲು, ಮಾ. ೩: ಕುಂಜಿಲ-ಕಕ್ಕಬ್ಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಡಿಯಂಡಮೋಳ್ ಬೆಟ್ಟದ ಎರಡು ಕಡೆಗಳಲ್ಲಿ ಕಳೆದ ಎರಡು ದಿನಗಳಿಂದ ಬೆಂಕಿ ಕಾಣಿಸಿಕೊಂಡಿದ್ದು, ಹಲವಾರು ಎಕರೆಗಳಷ್ಟು ಬೆಟ್ಟ ಕಾಡುಗಳು ಬೆಂಕಿಗೆ ಆಹುತಿಯಾಗುತ್ತಿವೆ.

ಈ ಸ್ಥಳಗಳಿಗೆ ಅಗ್ನಿಶಾಮಕ ದಳವಾಗಲಿ, ಮನುಷ್ಯರಾಗಲಿ ಹೋಗಲು ಸಾಧ್ಯವಿಲ್ಲದ ಹಿನ್ನಲೆಯಲ್ಲಿ ಬೆಂಕಿ ನಂದಿಸುವ ಕಾರ್ಯ ಅಸಾಧ್ಯವಾಗಿದ್ದು, ಬೆಂಕಿಯ ಪ್ರಮಾಣ ಹೆಚ್ಚಾದಲ್ಲಿ ಈ ಬೆಟ್ಟಗಳಲ್ಲಿ ವಾಸಿಸುವ ಕಾಡು ಪ್ರಾಣಿಗಳು ಸೇರಿದಂತೆ ವನ್ಯ ಸಂಪತ್ತು ನಾಶವಾಗುವ ಸಾಧ್ಯತೆಯಿದೆ.