ಮಡಿಕೇರಿ, ಮಾ. ೨: ಐಕಾನಿಕ್ ಬ್ರದರ್ಸ್ಸ್ ಕಾಂತೂರು ಇವರ ವತಿಯಿಂದ ಪ್ರಥಮ ವರ್ಷದ ಗೌಡ ಜನಾಂಗದ ಮುಕ್ತ ವಾಲಿಬಾಲ್ ಪಂದ್ಯಾಟ ಮೂರ್ನಾಡು ಸಮೀಪದ ಕಾಂತೂರು ಗ್ರಾಮದ ಉಳುವಾರನ ಆಟದ ಮೈದಾನದಲ್ಲಿ ತಾ. ೫ ಮತ್ತು ೬ ರಂದು ಎರಡು ದಿನ ನಡೆಯಲಿದೆ. ತಾ. ೫ ರಂದು ಬೆಳಿಗ್ಗೆ ೯ ಗಂಟೆಗೆ ಕ್ರೀಡಾಕೂಟಕ್ಕೆ ಚಾಲನೆ ದೊರೆಯಲಿದೆ. ಕಾರ್ಯಕ್ರಮದಲ್ಲಿ ಐಕಾನಿಕ್ ಬ್ರದರ್ಸ್ಸ್ನ ಅಧ್ಯಕ್ಷ ಕಲ್ಲುಮುಟ್ಲು ಆರ್. ವಿನೋದ್ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮಠದಮನೆ ವಿ. ಧನಂಜಯ, ಉಳುವಾರನ ಎಸ್. ಅಶೋಕ್ ಕುಮಾರ್, ಗೌಡ ಜನಾಂಗದ ಸಂಪನ್ಮೂಲ ವ್ಯಕ್ತಿಗಳಾದ ಬೊಳ್ತಜ್ಜಿ ಎಸ್. ಸಿದ್ದಾರ್ಥ, ಕಲ್ಲುಮುಟ್ಲು ಪಿ. ಗಣೇಶ್ ಮುಂತಾದವರು ಭಾಗವಹಿಸಲಿದ್ದಾರೆ. ತಾ. ೬ ರಂದು ಸಂಜೆ ೪ ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಪಂದ್ಯಾವಳಿಯಲ್ಲಿ ೧೬ ತಂಡಗಳು ಭಾಗವಹಿಸಲಿವೆ ಎಂದು ಆಯೋಜಕರು ತಿಳಿಸಿದ್ದಾರೆ.