ವೀರಾಜಪೇಟೆ, ಮಾ. ೨: ಮೈತಾಡಿ ಗ್ರಾಮದ ಕಿರುಹೊಳೆಯು ಕಾವೇರಿ ನದಿಯನ್ನು ಸೇರುವ ನದಿ ಪಾತ್ರದಲ್ಲಿ ಕಿಡಿಗೇಡಿಗಳು ಗೋವಿನ ಮಾಂಸ ಮತ್ತು ತ್ಯಾಜ್ಯಗಳನ್ನು ಎಸೆದಿರುವುದನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ ತಾಲೂಕು ಘಟಕದಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ವೀರಾಜಪೇಟೆ ತಾಲೂಕು ಘಟಕದ ವತಿಯಿಂದ ನಗರದ ಗಡಿಯಾರ ಕಂಬದ ಬಳಿ ಕಾವೇರಿ ನದಿಯನ್ನು ಸೇರುವ ನದಿ ಪಾತ್ರದಲ್ಲಿ ಕಿಡಿಗೇಡಿಗಳು ಗೋವನ್ನು ಹತ್ಯೆಗೈದು ಉಳಿದ ಮಾಂಸ ಮತ್ತು ತ್ಯಾಜ್ಯವನ್ನು ನದಿಗೆ ಎಸೆದಿರುವುದನ್ನು ಖಂಡಿಸಲಾಯಿತು.ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ವಿ.ಹೆಚ್.ಪಿ ಹಿರಿಯ ಕಾರ್ಯಕರ್ತ ಮಾಳೇಟಿರ ಶ್ರೀನಿವಾಸ್ ಅವರು ಕಾವೇರಿ ನದಿಯು ಪವಿತ್ರ ನದಿಯಾಗಿದೆ. ಸರ್ವ ಜನಾಂಗ, ಜಲಚರಗಳು ಪ್ರಾಣಿಗಳಿಗೆ ನೀರುಣಿಸುವ ಕಾವೇರಿ ನದಿಗೆ ಹಿಂದೂಗಳಿAದ

(ಮೊದಲ ಪುಟದಿಂದ) ಆರಾಧಿಸಲ್ಪಡುವ ಪರಮಪವಿತ್ರವಾದ ಗೋವನ್ನು ಹತ್ಯೆಗೈದು ಮಾಂಸವನ್ನಾಗಿಸಿ ಎಸೆದಿರುವುದು ಖಂಡನೀಯ. ಕಿರುಹೊಳೆಯ ಪಾತ್ರಕ್ಕೆ ಗೋವಿನ ಮಾಂಸ ಮತ್ತು ತ್ಯಾಜ್ಯದ ಮೂಟೆಗಳನ್ನು ಎಸೆದಿರುವ ಕಿಡಿಗೇಡಿಗಳ ಕಾರ್ಯವು ಹಿಂದೂ ಬಾಂಧವರ ಭಾವನೆಗೆ ಧಕ್ಕೆ ತರುವಂತಾಗಿದೆ ಎಂದರು.

ಜಿಲ್ಲೆಯಲ್ಲಿ ನಿರಂತರ ಗೋವಿನ ಹತ್ಯೆ ಮತ್ತು ಅಕ್ರಮ ಸಾಗಾಟ ಹಾಗೂ ಮಾರಾಟದಂತಹ ಕೃತ್ಯಗಳು ನಡೆಯುತ್ತಿದ್ದರೂ ಪೊಲೀಸ್ ಇಲಾಖೆಯು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದವರನ್ನು ಬಂಧಿಸುವಲ್ಲಿ ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿದರು. ೧೫ ದಿನಗಳ ಗಡುವಿನೊಂದಿಗೆ ಗೋಹಂತಕರನ್ನು ಬಂಧಿಸಬೇಕು ಇಲ್ಲವಾದಲ್ಲಿ ಮುಂದೆ ತಾಲೂಕಿನಾದ್ಯಾಂತ ಬೃಹತ್ ಪ್ರತಿಭಟನೆಗೆ ಮುಂದಾಗುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಸ್ಥಳಕ್ಕೆ ಆಗಮಿಸಿದ ವೀರಾಜಪೇಟೆ ವೃತ್ತ ನಿರೀಕ್ಷಕರಾದ ಬಿ.ಎಸ್ ಶ್ರೀಧರ್ ಮತ್ತು ತಹಶೀಲ್ದಾರ್ ಮತ್ತು ತಾಲೂಕು ದÀಂಡಾಧಿಕಾರಿ ಆರ್. ಯೋಗಾನಂದ ಅವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.

ಪ್ರತಿಭಟನೆಯ ವೇಳೆಯಲ್ಲಿ ವಿಶ್ವ ಹಿಂದೂ ಪರಿಷತ್ ತಾಲೂಕು ಅಧ್ಯಕ್ಷ ಬಿ.ಎಂ. ಕುಮಾರ್, ವಿಹೆಚ್ ಪಿ ಮಾಜಿ ಜಿಲ್ಲಾಧ್ಯಕ್ಷ ಟಾಟಾ ಬೋಪಯ್ಯ,

ಭಜರಂಗದಳ ಜಿಲ್ಲಾ ಸಹ ಸಂಚಾಲಕರಾದ ವಿವೇಕ್ ರೈ, ನಗರ ಸಹ ಸಂಚಾಲಕ ನಿತಿನ್, ಪೊನ್ನಪ್ಪ ರೈ, ನಗರ ಭಾ.ಜ.ಪ ಮಾಜಿ ಅಧ್ಯಕ್ಷರಾದ ಅಂಜಪರುವAಡ ಅನಿಲ್ ಮತ್ತು ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ತಾಲೂಕು ಸಂಘಟನೆಗಳ ಕಾರ್ಯಕರ್ತರು ಹಾಜರಿದ್ದರು.