ಪೊನ್ನಂಪೇಟೆ, ಮಾ. ೩: ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆ ಪ್ರಾಥಮಿಕ ವಿಭಾಗದಲ್ಲಿ ಪೊನ್ನಂಪೇಟೆ ಕ್ಲಸ್ಟರ್ ವ್ಯಾಪ್ತಿಯ ೮ ಸರಕಾರಿ ಶಾಲೆಗಳ ಎಸ್‌ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರಿಗೆ ನಾಲ್ಕನೇ ತರಬೇತಿ ಕಾರ್ಯಾಗಾರ ನಡೆಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಪಿಎಸ್ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ರಘುನಾಥ್ ಶರ್ಮ ವಹಿಸಿ ಮಾತನಾಡಿ, ಶಾಲೆಯ ಪ್ರಗತಿಗೆ ನಾವೆಲ್ಲರೂ ಶ್ರಮಿಸಬೇಕು. ಎಲ್ಲರ ಸಹಕಾರದಿಂದ ಪ್ರಗತಿ ಸಾಧ್ಯ ಎಂದರು. ಕ್ಷೇತ್ರ ಸಂಪನ್ಮೂಲ ವ್ಯಕ್ತಿ ವಾಮನರವರು ಹೊಸ ರಾಷ್ಟ್ರೀಯ ನೀತಿ, ಎಸ್‌ಡಿಎಂಸಿಯ ಕಾರ್ಯವೈಖರಿಯ ಬಗ್ಗೆ, ಶಾಲೆಯ ಪ್ರಗತಿಯ ಕ್ರಿಯಾಯೋಜನೆ ಬಗ್ಗೆ ತಿಳಿಸಿದರು. ಕಿರುಗೂರು, ಮತ್ತೂರು, ಬಲ್ಯಮುಂಡೂರು, ನಡಿಕೇರಿ, ತೂಚಮಕೇರಿ, ಕುಶಾಲಾಪುರ, ಶಾಲೆಯ ಸಮಿತಿ ಸದಸ್ಯರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ರಾಮಕೃಷ್ಣ, ಕೆಪಿಎಸ್ ಶಾಲೆಯ ಉಪ ಪ್ರಾಂಶುಪಾಲ ಎಂ.ಯು. ಚಂಗಪ್ಪ, ಸಮೂಹ ಸಂಪನ್ಮೂಲ ವ್ಯಕ್ತಿ ತಿರುನೆಲ್ಲಿಮಾಡ ಜೀವನ್, ಶಿಕ್ಷಕರಾದ ಬಿ.ಎಂ. ವಿಜಯ್, ಸಿ.ಎನ್. ಪದ್ಮ, ಸಿ. ರಾಜಮ್ಮ, ಮಾನಸ, ಶಾಂತಿಕುಮಾರಿ, ರೋಸಿ, ಗಂಗಾಮಣಿ ಹಾಜರಿದ್ದರು. ಸದಸ್ಯರಿಗೆ ಕ್ರೀಡಾಕೂಟ ನಡೆಸಿ ಬಹುಮಾನ ವಿತರಿಸಲಾಯಿತು. ಈ ಸಂದರ್ಭ ಉತ್ತಮ ಎಸ್‌ಡಿಎಂಸಿ ಅಧ್ಯಕ್ಷರಾಗಿ ಆಯ್ಕೆಯಾದ ರಾಘನಾಥ್ ಶರ್ಮ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.