ವೀರಾಜಪೇಟೆ, ಮಾ. ೩ : ದೇಶದ ಪ್ರವಾಸೊದ್ಯಮದಲ್ಲಿ ಕೊಡಗು ಜಿಲ್ಲೆ ಎರಡನೇ ಸ್ಥಾನದಲ್ಲಿದ್ದು ಜಿಲ್ಲೆ ಸೇರಿದಂತೆ ವೀರಾಜಪೇಟೆ ಪಟ್ಟಣವನ್ನು ಮಾದರಿ ನಗರವನ್ನಾಗಿ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಹೇಳಿದರು.
ವೀರಾಜಪೇಟೆ ಕೊಡವ ಸಮಾಜದ ಆಡಳಿತ ಮಂಡಳಿ ನಿಯೋಗದ ಸನ್ಮಾನ ಸ್ವೀಕರಿಸಿ ಮಾತನಾಡಿ ಜಿಲ್ಲೆಯ ಬಹುತೇಕ ರಸ್ತೆಗಳು ಹದಗೆಟ್ಟಿದ್ದು ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ವೀರಾಜಪೇಟೆ ಪಟ್ಟಣದ ಮುಖ್ಯ ಹಾಗೂ ಸುತ್ತಮುತ್ತಲ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಮುಖ್ಯಾಧಿಕಾರಿಗಳ ಬಳಿ ಚರ್ಚಿಸಿ ಕ್ರಮ ತೆಗೆದುಕೊಳ್ಳಲಾಗುವುದು. ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಕುರಿ, ಕೋಳಿ ಮಾಂಸವನ್ನು ನೇತು ಹಾಕುತ್ತಿದ್ದು ಪಟ್ಟಣಕ್ಕೆ ಬರುವ ಜನರಿಗೂ ಹಾಗೂ ಪ್ರವಾಸಿಗರಿಗೆ ಒಂದು ಕಪ್ಪು ಚುಕ್ಕೆಯಾಗಿದೆ. ಅದನ್ನು ಸರಿ ಪಡಿಸಿ ಮಾದರಿ ಪಟ್ಟಣ ವನ್ನಾಗಿಸಲು ಕ್ರಮ ತೆಗೆದು ಕೊಳ್ಳುವುದು. ವೀರಾಜಪೇಟೆ ಕೊಡವ ಸಮಾಜಕ್ಕೆ ಅಗತ್ಯಕ್ಕೆ ತಕ್ಕಂತೆ ಸಂಬAಧಪಟ್ಟ ಇಲಾಖೆ ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಅಭಿವೃದ್ಧಿ ಕಾರ್ಯಗಳನ್ನು ನಡೆಸುವ ಭರವಸೆ ನೀಡಿದರು.
ನಿಯೋಗದಲ್ಲಿ ಕೊಡವ ಸಮಾಜದ ಅಧ್ಯಕ್ಷ ವಾಂಚಿರ ನಾಣಯ್ಯ, ಕಾರ್ಯದರ್ಶಿ ಕುಲ್ಲಚಂಡ ಜಯ ನಾಣಯ್ಯ, ಖಜಾಂಚಿ ಅಲ್ಲಪಂಡ ಚಿಣ್ಣಪ್ಪ, ನಿರ್ದೇಶಕರುಗಳಾದ ಕೊಂಗAಡ ಟಾಟ, ಕೊಂಗAಡ ಧರ್ಮಜ, ಕೋಟೇರ ಗಣೇಶ್ ತಮ್ಮಯ್ಯ, ಮೇವಡ ಚಿಣ್ಣಪ್ಪ, ಕನ್ನಂಬಿರ ಚಿಣ್ಣಪ್ಪ, ಬೊವ್ವೇರಿಯಂಡ ಆಶಾ ಸುಬ್ಬಯ್ಯ, ಪಟ್ರಪಂಡ ಗೀತಾ, ಮುಕ್ಕಾಟಿರ ದಮಯಂತಿ, ವ್ಯವಸ್ಥಾಪಕ ತಾತಂಡ ದಿಲೀಪ್ ಹಾಜರಿದ್ದರು.