ಕಣಿವೆ: ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೃಂದಾವನ ಬಡಾವಣೆಯ ನಿವಾಸಿಗಳು ಮಹಾಶಿವರಾತ್ರಿ ಅಂಗವಾಗಿ ಸಾಮೂಹಿಕವಾಗಿ ಶಿವನಾಮ ಹಾಗೂ ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು. ಬಡಾವಣೆಯ ನಿವಾಸಿಗಳು ಷಟಲ್ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಹಾಗೂ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ಈ ಸಂದರ್ಭ ಮಾತನಾಡಿದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾಧ್ಯಕ್ಷ ಟಿ.ಜಿ. ಪ್ರೇಮಕುಮಾರ್, ಶಿವರಾತ್ರಿ ಹಬ್ಬದ ಮಹತ್ವ ಕುರಿತು ಮಾಹಿತಿ ನೀಡಿದರು.
ಬಡಾವಣೆಯ ನಿವಾಸಿಗಳಾದ ಮೇಲ್ಮನೆ ಕಾಳಪ್ಪ, ಹಂಡ್ರAಗಿ ನಾಗರಾಜು, ಶನಿವಾರಸಂತೆಯ ಆರ್.ಪಿ. ಲಕ್ಷö್ಮಣ್, ಮಹೇಂದ್ರ, ಕೂಡಕಂಡಿ ಸೋಮಪ್ಪ, ಪಾಣತ್ತಲೆ ರಮೇಶ್, ಜಗನ್ನಾತ್ ಹಾಗೂ ಉಮಾದೇವಿ ತಂಡದ ಸದಸ್ಯರು ಇದ್ದರು.ಸಿದ್ದಾಪುರ: ನೆಲ್ಲಿಹುದಿಕೇರಿ ಶ್ರೀ ಮುತ್ತಪ್ಪ ಯುವಕಲಾ ಸಂಘದ ವತಿಯಿಂದ ೫ನೇ ವರ್ಷದ ಶಿವರಾತ್ರಿ ಜಾಗರಣ ಮಹೋತ್ಸವ ನಡೆಯಿತು. ವಾಗ್ಮಿ ತನ್ಮಯಿ ಪ್ರೇಮಕುಮಾರ್ ಮಾತನಾಡಿ, ಪ್ರತಿಯೊಂದು ಮನೆಯಲ್ಲೂ ಹಿಂದುತ್ವದ ಜಾಗೃತಿ ಮೂಡಿಸಬೇಕೆಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಶರಣ್ ಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಮುತ್ತಪ್ಪ ಯುವಕಲಾ ಸಂಘದಲ್ಲಿ ಯುವಕರು ಸೇವಾ ಮನೋಭಾವದಿಂದ ಜವಬ್ದಾರಿಯುತವಾಗಿ ನಡೆದುಕೊಂಡ ಫಲವಾಗಿ ಶ್ರೀ ಮುತ್ತಪ್ಪ ಯುವಕಲಾ ಸಂಘವು ತನ್ನ ಗೌರವವನ್ನು ಉಳಿಸಿಕೊಂಡಿದೆ ಎಂದರು.
ಜಾಗರಣ ಮಹೋತ್ಸವದ ಅಂಗವಾಗಿ ಕೊಡಗಿನ ಜೀವನದಿ ಕಾವೇರಿ ಮಾತೆಗೆ ಬಾಗಿನ ಸಲ್ಲಿಸಿ, ಆರತಿ ಹಿಡಿದ ಮಹಿಳೆಯರು ಹಾಗೂ ಚಂಡೆ ವಾದ್ಯ ಮೇಳದೊಂದಿಗೆ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು. ಶಿವರಾತ್ರಿ ಪ್ರಯುಕ್ತ ಶ್ರೀ ಮುತ್ತಪ್ಪ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿತು.
ಸಭಾ ಕಾರ್ಯಕ್ರಮಕ್ಕೆ ಗ್ರಾಮದ ಹಿರಿಯರು ಚಾಲನೆ ನೀಡಿದರು. ಅಧ್ಯಕ್ಷತೆಯನ್ನು ಶ್ರೀ ಮುತ್ತಪ್ಪ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಪಾಲಚಂಡ ಚೀಯಣ್ಣ ವಹಿಸಿದ್ದರು. ಸಮೃದ್ದಿ ಪ್ರಾರ್ಥಿಸಿ, ಸಂಘದ ಕಾರ್ಯದರ್ಶಿ ಸಚಿನ್ ಸ್ವಾಗತಿಸಿ, ವಿನೋದ್ ವಂದಿಸಿದರು. ವೀರಾಜಪೇಟೆಯ ಟೀಂ ಇಂಟೋಪೀಸ್ ತಂಡದಿAದ ಹಾಗೂ ಸ್ಥಳೀಯ ಪ್ರತಿಭೆಗಳಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು. ಕೂಡಿಗೆ, ಮಾ. ೩: ಹಾರಂಗಿ ಮೀನು ಮರಿ ಉತ್ಪಾದನಾ ಕೇಂದ್ರದ ವತಿಯಿಂದ ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವಾಲಯ ಎದುರು ಮತ್ತು ಕೂಡಿಗೆ ಕಾವೇರಿ ನದಿಗೆ ಒಂದೂವರೆ ಲಕ್ಷ ಸಾಮಾನ್ಯ ಗೆಂಡೆ ಮೀನು ಮರಿಗಳನ್ನು ಕೂಡಿಗೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಮಂಗಳಾ ಪ್ರಕಾಶ್ ಬಿಟ್ಟರು.
ಈ ಸಂದರ್ಭದಲ್ಲಿ ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕಿ ಕೆ. ಟಿ. ದರ್ಶನ್ ಹಾರಂಗಿ ಮೀನು ಮರಿ ಉತ್ಪಾದನಾ ಕೇಂದ್ರದ ಸಹಾಯಕ ನಿರ್ದೇಶಕ ಸಚಿನ್ ಇಲಾಖೆಯ ಮೇಲ್ವಿಚಾರಕ ಮಹದೇವ, ಶ್ರೀ ರಾಮಲಿಂಗೇಶ್ವರ ದೇವಾಲಯ ಸಮಿತಿಯ ಉಪಾಧ್ಯಕ್ಷ ಮಂಜುನಾಥಸ್ವಾಮಿ ಸೇರಿದಂತೆ ದೇವಾಲಯ ಸಮಿತಿಯ ಸದಸ್ಯರು ಹಾಗೂ ಇಲಾಖೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.
ಗುಡ್ಡೆಹೊಸೂರು: ಸಮೀಪದ ಅತ್ತೂರು ಗ್ರಾಮದ ಶ್ರೀ ಪಂಚಲಿAಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಅಂಗವಾಗಿ ಮೂರು ದಿನಗಳ ಕಾಲ ವಿವಿಧ ಪೂಜಾ ಕಾರ್ಯಗಳು ನೆರವೇರಿದವು. ಪೂಜಾ ಕಾರ್ಯಗಳು ಶ್ರೀ ಕ್ಷೇತ್ರದ ತಂತ್ರಿಗಳಾದ ವೇದಮೂರ್ತಿ ಗಣೇಶ್ ತಂತ್ರಿ ತಂಡದ ವತಿಯಿಂದ ನೆರವೇರಿತು.ಮಡಿಕೇರಿ: ಕೊಡಗು ಜಿಲ್ಲಾ ವಿಶ್ವಕರ್ಮ ಸಮಾಜ ಸೇವಾ ಸಂಘದ ವತಿಯಿಂದ ಸಂಘದ ಸಭಾಭವನದಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ಭಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.